ಆಸ್ಪತ್ರೆ ಒಳಗೆ ರೀಲ್ಸ್‌ ಮಾಡಿ ಸಿಕ್ಕಿಬಿದ್ದ ಜೂನಿಯರ್‌ ಡಾಕ್ಟರ್ಸ್‌!

masthmagaa.com:

ಮೆಡಿಕಲ್‌ ಕಾಲೇಜ್‌ ಒಂದ್ರಲ್ಲಿ ಜೂನಿಯರ್‌ ಡಾಕ್ಟರ್‌ಗಳು ರೀಲ್ಸ್‌ ಮಾಡಿ ಇದೀಗ ಶಿಕ್ಷೆಗೆ ಗುರಿಯಾಗಿರೋ ಘಟನೆ ಗದಗದಲ್ಲಿ ನಡೆದಿದೆ. ಇತ್ತೀಚೆಗಷ್ಟೆ ಗದಗದ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಟ್ರೈನಿಂಗ್‌ಗೆ ಅಂತ ಬಂದ ಮೆಡಿಕಲ್‌ ಸ್ಟೂಡೆಂಟ್‌ಗಳು ರೀಲ್ಸ್‌ ಮಾಡಿ ತಗಲಾಕೊಂಡಿದ್ರು. ತಮ್ಮ ʻಸ್ಕ್ರಬ್‌ʼ ಸಮವಸ್ತ್ರ, ಅಂದ್ರೆ ಆಪರೇಷನ್‌ ಥಿಯೇಟರ್‌ನಲ್ಲಿ ಧರಿಸೋ ಉಡುಪು ಹಾಕೊಂಡು, ಸಲೈನ್‌ ಬಾಟಲ್‌ ಅಂದ್ರೆ ಈ ಡ್ರಿಪ್ಸ್‌ ಅಥ್ವಾ ಗ್ಲೂಕೋಸ್‌ ಹಾಕ್ತಾರಲ್ಲ.. ಆ ಬಾಟಲ್‌ಗಳನ್ನ ಹಿಡಿದು ಆಸ್ಪತ್ರೆ ಕಾರಿಡಾರ್‌ಗಳಲ್ಲಿ ಕುಣಿದು ಕುಪ್ಪಳಿಸಿದ್ರು. ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಆಗಿದ್ದೇ ತಡ… ಜನರಿಂದ ಭಾರೀ ಟೀಕೆಗಳು ವ್ಯಕ್ತವಾಗಿದ್ವು. ನಂತ್ರ ಈ ಸಂಸ್ಥೆಯ ನಿರ್ದೇಶಕರಾದ ಡಾ ಬಸವರಾಜ್‌ ಬೊಮ್ಮನಹಳ್ಳಿ ಅವ್ರ ಗಮನಕ್ಕೂ ಬಂತು. ಇದಕ್ಕೆ ರಿಯಾಕ್ಟ್‌ ಮಾಡಿದ ಅವ್ರು, ʻಈ ರೀತಿ ರೀಲ್ಸ್‌ ಮಾಡಿ ವಿದ್ಯಾರ್ಥಿಗಳು ದೊಡ್ಡ ತಪ್ಪು ಮಾಡ್ಬಿಟ್ರು. ಅವ್ರಿಗೆ ಏನೇ ಮಾಡೋದಿದ್ರು ಆಸ್ಪತ್ರೆಯ ಹೊರಗಡೆ ಇಟ್ಕೋಬೇಕಿತ್ತು. ಅವ್ರ ವಿರುದ್ಧ ಸರಿಯಾದ ಕ್ರಮ ತಗೊಳ್ತೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply