ಹು-ಧಾ ನೀರಿನ ಯೋಜನೆಗೆ ವಿಶ್ವಬ್ಯಾಂಕ್‍ನಲ್ಲಿ ಸಾಲ

ದಿನ 24 ಗಂಟೆಯೂ ಮನೆಮನೆಗೆ ನೀರು ಬರಲಿ ಅನ್ನೊದು ಹುಬ್ಬಳ್ಳಿ-ಧಾರವಾಡ ಜನರ ಕನಸು. ಆದ್ರೆ ಈ ಕನಸು ಸದ್ಯದಲ್ಲೇ ನನಸಾಗಲಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ವಿಶ್ವಬ್ಯಾಂಕ್‍ನಲ್ಲಿ ಹಣಕಾಸಿನ ನೆರವು ಪಡೆಯಲು ನಿರ್ಧರಿಸಿದೆ. ಆದ್ರೆ ಹಿಂದಿನ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.

ಮೊದಲಿಗೆ 8 ವಾರ್ಡ್‍ಗಳಿಗೆ ಈ ಯೋಜನೆ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ನಂತರದಲ್ಲಿ ಉಳಿದ 39 ವಾರ್ಡ್‍ಗಳಲ್ಲೂ ಈ ವಾರ್ಡ್‍ಗಳಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು. ಇತ್ತೀಚೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹುಬ್ಬಳ್ಳಿಗೆ ಭೇಟಿ ನೀಡಿದಾಗ ಉಳಿದ ವಾರ್ಡ್‍ಗಳ ನೀರಿನ ಸಮಸ್ಯೆ ಬೆಳಕಿಗೆ ಬಂದಿತ್ತು. ಇಲ್ಲಿ 5 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್‍ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿವರಿಸಿದ್ದರು. ಈ ಯೋಜನೆ ಜಾರಿಯಾದಲ್ಲಿ ಹುಬ್ಬಳ್ಳಿ-ಧಾರವಾಡ ಜನ ನೀರಿನ ಸಮಸ್ಯೆಯಿಂದ ಮುಕ್ತವಾಗಲಿದ್ದಾರೆ.

Contact Us for Advertisement

Leave a Reply