ವಿದ್ಯಾರ್ಥಿಗೆ ಭಯೋತ್ಪಾದಕ ಅಂತ ಕರೆದ ಆರೋಪ.! ಪ್ರಾಧ್ಯಾಪಕನ ವಿರುದ್ದ ಕ್ರಮ!

masthmagaa.com:

ತರಗತಿಯೊಳಗೆ‌ ಪ್ರೊಫೆಸರ್‌ರೊಬ್ಬರು ಮುಸ್ಲಿಂ ವಿದ್ಯಾರ್ಥಿಯನ್ನ ಮುಂಬೈ ದಾಳಿಕೋರ ಉಗ್ರ ಕಸಬ್‌ಗೆ ಕಂಪೇರ್‌ ಮಾಡಿದ್ದು, ನಂತ್ರ ಅಮಾನತ್ತಾದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ನವೆಂಬರ್‌ 26ರಂದು ಈ ಘಟನೆ ನಡೆದಿದೆ ಅಂತ ಹೇಳಲಾಗ್ತಿದೆ. ವಿದ್ಯಾರ್ಥಿಯ ಹೆಸರು ಕೇಳಿದ ಪ್ರಾಧ್ಯಾಪಕ ಮುಸ್ಲಿಂ ಹೆಸರು ಕೇಳಿದ ತಕ್ಷಣ “ಓ ನೀನು ಕಸಬ್‌ ತರ” ಅಂತ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ವಿದ್ಯಾರ್ಥಿ ಪ್ರೊಫೆಸರ್​ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಪ್ರಾಧ್ಯಾಪಕ ಇಲ್ಲ ನಾನು ತಮಾಷೆ ಮಾಡಿದ್ದು ಅಂದಿದಕ್ಕೆ, ವಿದ್ಯಾರ್ಥಿ, 26/11ರ ಘಟನೆ ತಮಾಷೆಯ ವಿಷಯ ಅಲ್ಲ. ಈ ದೇಶದಲ್ಲಿ ಮುಸ್ಲಿಮನಾಗಿ ಪ್ರತಿದಿನ ಈ ರೀತಿ ಘಟನೆಗಳನ್ನ ಫೇಸ್‌ ಮಾಡೋದು ತಮಾಷೆಯ ವಿಷಯ ಅಲ್ಲ ಅಂತ ಹೇಳಿದ್ದಾರೆ. ನಂತ್ರ ಪ್ರಾಧ್ಯಾಪಕ ಕ್ಷಮೆ ಕೇಳಿದ್ದು, ನೀವು ಕ್ಷಮೆ ಕೇಳಿದ ತಕ್ಷಣ ಆರೋಪ ಬದಲಾಗಲ್ಲ ಅಂತ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಿದಾರೆ. ಸದ್ಯ ಈ ಸಂಭಾಷಣೆಯ ವಿಡಿಯೋ ವೈರಲ್​ ಆಗಿದೆ. ಪ್ರಾಧ್ಯಾಪಕನ ವಿರುದ್ಧ ತನಿಖೆ ನಡೆಸಲಾಗ್ತಿದೆ, ಅಲ್ಲಿವರೆಗೆ ಅವ್ರನ್ನ ಅಮಾನತಿನಲ್ಲಿಡಲಾಗಿದೆ ಅಂತ ಕಾಲೇಜು ಆಡಳಿತ ಹೇಳಿದೆ.

-masthmagaa.com

Contact Us for Advertisement

Leave a Reply