ಕನಕಪುರದಲ್ಲಿ ಮತ್ತೆ 7 ಹೆಡೆಯ ಹಾವಿನ ಪೊರೆ ಪತ್ತೆ..!

ರಾಮನಗರದ ಕನಕಪುರದಲ್ಲಿರೋ ಮರಿಗೌಡನದೊಡ್ಡಿಯಲ್ಲಿ 7 ತಲೆಯ ಹಾವಿನ ಪೊರೆ ಪತ್ತೆಯಾಗಿದೆ. ಸುಮಾರು 2 ತಿಂಗಳ ಹಿಂದೆ ಇದೇ ಜಾಗದಲ್ಲಿ 7 ತಲೆಯ ಸರ್ಪದ ಪೊರೆ ಕಾಣಿಸಿಕೊಂಡಿತ್ತು. ಈ ಜಾಗದಲ್ಲಿ ಈಗಾಗಲೇ ದೇಗುಲ ನಿರ್ಮಾಣ ಮಾಡಲಾಗಿದೆ. ಆದ್ರೆ ದೇವಸ್ಥಾನದ ಬಳಿಯೇ ಮತ್ತೆ ಪೊರೆ ಪತ್ತೆಯಾಗಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ. ಪೊರೆ ನೋಡಲು ಅಕ್ಕಪಕ್ಕದ ಗ್ರಾಮಗಳಿಂದ ಜನರ ದಂಡೇ ಹರಿದು ಬರುತ್ತಿದೆ. ಕೆಲವರು ಹಾವಿನ ಪೊರೆಯ ಸುತ್ತ ಹಳದಿ ಮತ್ತು ಕುಂಕುಮ ಹಾಕಿ ಈಗಾಗಲೇ ಭಕ್ತಿ ತೋರಿಸಲು ಶುರು ಮಾಡಿ ಬಿಟ್ಟಿದ್ದಾರೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

Contact Us for Advertisement

Leave a Reply