ರಾಜ್ಯದಲ್ಲಿ ಹವಾಮಾನ ಹೇಗಿದೆ? ಎಲ್ಲೆಲ್ಲಿ ಮಳೆಯಾಯ್ತು?

masthmagaa.com:

ಬೆಂಗಳೂರು: ರಾಜ್ಯದ ಕೆಲವೊಂದುಕಡೆ ಇವತ್ತು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಎಂಬಲ್ಲಿ ಅತಿಹೆಚ್ಚು 81.5 ಮಿಲಿಮೀಟರ್ ಮಳೆಯಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಎಂಬಲ್ಲಿ 79 ಮಿಲಿಮೀಟರ್ ಮತ್ತು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯಾರಗಲ್​ ಬಿ.ಕೆ. ಎಂಬಲ್ಲಿ 78 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲವೊಂದು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೀತಿಯ ಪರಿಚಲನೆ ಇದ್ದು, ಇದು ಮುಂದಿನ 24 ಗಂಟೆಯಲ್ಲಿ ಕಮ್ಮಿ ಒತ್ತಡದ ಪ್ರದೇಶ ಆಗುವ ಸಾಧ್ಯತೆ ಇದೆ. ನಂತ್ರ ಶ್ರೀಲಂಕಾ ಮತ್ತು ತಮಿಳುನಾಡಿನ ದಕ್ಷಿಣ ಕರಾವಳಿ ಕಡೆಗೆ ಬರಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಮುಂದಿನ ನಾಲ್ಕು ದಿನ ಮಳೆ ಮುಂದುವರಿಯೋ ಸಾಧ್ಯತೆ ಇದೆ ಅಂತ ಮುನ್ಸೂಚನೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply