masthmagaa.com:
ಕರ್ನಾಟಕದ ಹೊಯ್ಸಳರ ಕಾಲದ 3 ಪ್ರಮುಖ ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮೈಸೂರು ಜಿಲ್ಲೆಯ ಸೋಮನಾಥಪುರಲ್ಲಿರುವ ಕೇಶವ ದೇವಸ್ಥಾನ, ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚನ್ನಕೇಶವ ದೇವಸ್ಥಾನ ಹಾಗೂ ಹಳೆಬೀಡಿನಲ್ಲಿರುವ ದೇವಸ್ಥಾನಗಳನ್ನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಬಗ್ಗೆ ಯುನೆಸ್ಕೋ Xನಲ್ಲಿ ಪೋಸ್ಟ್ ಹಾಕಿದ್ದು, ಹೊಯ್ಸಳರ ಕಾಲದ ಪವಿತ್ರ ದೇವಾಲಯಗಳು, ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿದ್ದು, ಭಾರತಕ್ಕೆ ಅಭಿನಂದನೆಗಳು ಅಂತ ಹೇಳಿದೆ. ಇನ್ನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ ಅಂತ ಹೇಳಿದ್ದಾರೆ.
ಅಂದ್ಹಾಗೆ ಹೊಯ್ಸಳ ದೇವಾಲಯಗಳು, ಏಪ್ರಿಲ್ 2014 ರಿಂದಲೂ ಯುನೆಸ್ಕೊದ ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಜನವರಿ 2022ರಲ್ಲಿ, 2022-23 ಕ್ಕೆ ವಿಶ್ವ ಪಾರಂಪರಿಕ ತಾಣವಾಗಿ ಪರಿಗಣಿಸಲು ಭಾರತದಿಂದ ನಾಮನಿರ್ದೇಶನ ಮಾಡಲಾಗಿತ್ತು. ಸರ್ಕಾರದ ಮನವಿಗೆ ಒಪ್ಪಿ ಈಗ ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಮೂಲಕ ಕರ್ನಾಟಕದ ಮೂರು ಸ್ಥಳಗಳು ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನಪಡೆದಂತಾಗಿದೆ.
-masthmagaa.com
Contact Us for Advertisement