ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ನಡೆಸಿದ ಆರೋಪಿಗಳು ಪತ್ತೆ! ಹತ್ಯೆ ಬಗ್ಗೆ ಪೊಲೀಸ್‌ ಏನ್‌ ಹೇಳ್ತಾರೆ?

masthmagaa.com:

ಕರ್ಣಿ ಸೇನಾ ಮುಖ್ಯಸ್ಥ ಸುಖ್‌ದೇವ್‌ ಸಿಂಗ್‌ ಮನೆ ನುಗ್ಗಿ ಬರ್ಬರ ಹತ್ಯೆ ಮಾಡಿರೋ ಆರೋಪಿಗಳನ್ನ ಇದೀಗ ರಾಜಸ್ಥಾನ ಪೊಲೀಸ್‌ ಪತ್ತೆ ಹಚ್ಚಿದ್ದಾರೆ. ಒಬ್ಬ ರಾಜಸ್ಥಾನದ ಮಕ್ರಾನಾ ನಾಗೋರ್‌ ನಿವಾಸಿ ರೋಹಿತ್‌ ರಾಥೋರ್‌ ಆದ್ರೆ, ಮತ್ತೊಬ್ಬನನ್ನ ಹರಿಯಾಣಾದ ಮಹೇಂದ್ರಗಢ್‌ ನಿವಾಸಿ ನಿತಿನ್‌ ಫೌಜಿ ಅಂತ ಗುರುತಿಸಲಾಗಿದೆ. ಜೊತೆಗೆ ನವೀನ್‌ ಶೇಖಾವತ್‌ ಎಂಬಾತ ಇವ್ರಿಬ್ರಿಗೆ ಹತ್ಯೆ ಮಾಡೋದಕ್ಕೆ ಸಹಾಯ ಮಾಡಿರೋ ಕಾರಣ ಪೊಲೀಸ್‌ ಈತನ ಹುಡುಕಾಟ ಕೂಡ ನಡೆಸ್ತಿದ್ದಾರೆ. ಅಂದ್ಹಾಗೆ ಹತ್ಯೆ ಮಾಡೋಕು ಮುಂಚೆ ಈ ಮೂರು ಆರೋಪಿಗಳು ಸೇರ್ಕೊಂಡು ಮದುವೆ ಕಾರ್ಡ್‌ ನೀಡೋದಾಗಿ ನೆಪ ಹೇಳಿ ಸುಖ್‌ದೇವ್‌ ಸಿಂಗ್‌ ಅವ್ರನ್ನ ಮೀಟ್‌ ಮಾಡೋಕೆ ಬಂದಿದ್ರು ಎನ್ನಲಾಗಿದೆ. ಇನ್ನು ಹತ್ಯೆ ನಡೆಯೋ 3 ದಿನಗಳ ಹಿಂದೆ ಆರೋಪಿ ನವೀನ್‌ ದಿನಕ್ಕೆ ₹5,000 ಕೊಟ್ಟು ಎಸ್‌ಯುವಿ ಕಾರ್‌ನ್ನ ಬಾಡಿಗೆಗೆ ತೆಗೆದುಕೊಂಡಿದ್ದಾನೆ. ಹತ್ಯೆ ನಡೆದ ಬಳಿಕ ನವೀನ್‌ ಈ ಕಾರ್‌ನ್ನ ಸುಖ್‌ದೇವ್‌ ಸಿಂಗ್‌ ಅವ್ರ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಈ ಕಾರ್‌ನಲ್ಲಿ ಸಾರಾಯಿ ಬಾಟಲ್‌ ಕೂಡ ಸಿಕ್ಕಿವೆ ಅಂತ ವರದಿಯಾಗಿದೆ. ಜೊತೆಗೆ ಭೂಮಿ ವಿವಾದ ಕಾರಣದಿಂದ ಈ ಹತ್ಯೆ ಮಾಡಲಾಗಿದೆ ಅಂತಾನು ಹೇಳಲಾಗ್ತಿದೆ. ಅಲ್ದೇ ಸುಖ್‌ದೇವ್‌ ಸಿಂಗ್‌ ಕೆಲ ಭೂಮಿ ವಿವಾದದಲ್ಲಿ ಇನ್ವಾಲ್ವ್‌ ಆಗಿದ್ದಾರೆ. ಜೊತೆಗೆ ನಟೋರಿಯಸ್‌ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಬೆಂಬಲಿಗನಾದ ರೋಹಿತ್‌ ಗೋದಾರಾ ಕೂಡ ಇದೇ ಭೂಮಿ ವಿವಾದದಲ್ಲಿ ಸೇರ್ಕೊಂಡಿದ್ದ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಸುಖ್‌ದೇವ್‌ ಸಿಂಗ್‌ ಹತ್ಯೆ ನಡೆದ ಬೆನ್ನಲ್ಲೇ ಈ ರೋಹಿತ್‌ ಗೋದಾರಾ ಖುಲಂ ಖುಲ್ಲವಾಗಿ ಹತ್ಯೆಗೆ ತಾನೇ ಕಾರಣ ಅಂತ ಹೇಳ್ಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ. ಅದೇನೇ ಇರ್ಲಿ, ಪೊಲೀಸ್‌ ಮಾತ್ರ ಈ ಕೇಸ್‌ಗೆ ಸಂಬಂಧಿಸಿ ಎಲ್ಲಾ ಆ್ಯಂಗಲ್‌ಗಳಿಂದಲೂ ತನಿಖೆ ನಡೆಸ್ತಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರವೇನಂದ್ರೆ, ಕಳೆದ ವರ್ಷವಷ್ಟೇ ಪ್ರಾಪರ್ಟಿ ಡೀಲರ್‌ ವಿಜೇಂದ್ರ ಸಿಂಗ್‌ ಅವ್ರ ಕೊಲೆ ನಡೆದಿತ್ತು. ಇವ್ರ ಕೊಲೆ ಮಾಡಿದ ಆರೋಪಿಗಳು ಸುಖದೇವ್‌ ಸಿಂಗ್‌ ಅವ್ರಿಗೆ ಸಿಕ್ಕಾಪಟ್ಟೆ ಕ್ಲೋಸ್‌ ಇದ್ರು. ಆದ್ರಿಂದ ವಿಜೇಂದ್ರ ಸಿಂಗ್‌ ಅವ್ರ ಕೊಲೆಯ ಪ್ರತೀಕಾರಕ್ಕಾಗಿ ಸುಖ್‌ದೇವ್‌ ಸಿಂಗ್‌ ಕೊಲೆ ನಡೆದಿರಬಹುದು ಅಂತ ಪೊಲೀಸ್‌ ಈ ಆ್ಯಂಗಲ್‌ ಇಂದಲೂ ತನಿಖೆ ನಡೆಸ್ತಿದ್ದಾರೆ ಎನ್ನಲಾಗಿದೆ.

-masthmaga.com

Contact Us for Advertisement

Leave a Reply