ರೇಪ್ ಮಾಡಿದ ದುಷ್ಟ ಗ್ರಾಮಸ್ಥರ ಕೈಗೆ ಸಿಕಿಬಿದ್ದ..! ಆಮೇಲೆ..?

16 ವರ್ಷದ ಯುವತಿ ಮೇಲೆ ಮೂವರು ಯುವಕರು ಸೇರಿ ಗ್ಯಾಂಗ್ ರೇಪ್ ನಡೆಸಿ, ವಿಡಿಯೋ ಮಾಡಿದ್ದಾರೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಂತರ ಆ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿದ್ದಾರೆ. ಈ ಮೂವರಲ್ಲಿ ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಭತ್ತದ ಗದ್ದೆಗೆ ಎಳೆದೊಯ್ದ ಗ್ರಾಮಸ್ಥರು ಸಾಯುವ ಹಾಗೆ ಥಳಿಸಿದ್ದಾರೆ. ಆದ್ರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು 20 ವರ್ಷದ ಮೊಹ್ಮದ್ ನಜೀಮ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಮೊಹ್ಮದ್ ಚೊಟ್ಕಾ ಮತ್ತು ಮೊಹ್ಮದ್ ಬಡ್ಕಾ ಎಸ್ಕೇಪ್ ಆಗಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಯುವತಿ, ನಾನು ಮೇವು ಸಂಗ್ರಹಿಸಲು ಪಕ್ಕದ ಗ್ರಾಮಕ್ಕೆ ತೆರಳಿದ್ದೆ. ಈ ವೇಳೆ ಮೂವರು ಯುವಕರು ನನ್ನನ್ನು ಎಳೆದುಕೊಂಡುಹೋಗಿ ಅತ್ಯಾಚಾರ ಎಸಗಿದ್ದಾರೆ ಅಂತ ಹೇಳಿದ್ದಾರೆ. ದುರಂತ ಅಂದ್ರೆ ಪೊಲೀಸರು ಕೂಡ ಯುವತಿ ಮತ್ತು ಆಕೆಯ ಕುಟುಂಬಸ್ಥರ ಜೊತೆ ಅನುಚಿತವಾಗಿ ವರ್ತಿಸಿ, ಕೇಸ್ ದಾಖಲಿಸಲು ನಿರಾಕರಿಸಿದ್ದಾರೆ. ಹೀಗಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

Contact Us for Advertisement

Leave a Reply