ಕೇಂದ್ರದ ವಿರುದ್ಧ ಪ್ರಾದೇಶಿಕ ಕೂಟ! ಉದ್ಧವ್ ಭೇಟಿಯಾದ ಕೆಸಿಆರ್

masthmagaa.com:

ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಮಾತಿನ ದಾಳಿ ನಡಸಿದ್ದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಇವತ್ತು ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭೇಟಿಯಾಗಿದ್ದಾರೆ. ಇತ್ತೀಚೆಗೆ ಕೆಸಿಆರ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರಾದೇಶಿಕ ಪಕ್ಷಗಳು ಒಟ್ಟಾಗ್ಬೇಕು ಅಂತ ಹೇಳ್ಕೊಂಡು ಓಡಾಡ್ತಿರೋದ್ರಿಂದ ಈ ಭೇಟಿ ಮಹತ್ವ ಪಡ್ಕೊಂಡಿದೆ. ಮೊದಲಿಗೆ ಉದ್ಧವ್ ಠಾಕ್ರೆ ಭೇಟಿಯಾದ ಕೆಸಿಆರ್​, ಸ್ವಲ್ಪ ಹೊತ್ತು ಚರ್ಚಿಸಿದ್ರು. ನಂತರ ಉದ್ಧವ್ ಆಹ್ವಾನದ ಮೇರೆಗೆ ಅವರ ಮನೆಯಲ್ಲೇ ಊಟ ಮುಗಿಸಿದ್ರು. ಇದಾದ ಬಳಿಕ ಕೆಸಿಆರ್​​​ ಎನ್​ಸಿಪಿ ನಾಯಕ ಶರದ್ ಪವಾರ್​ರನ್ನು ಕೂಡ ಭೇಟಿಯಾಗಿದ್ದಾರೆ. ಇನ್ನು ಮುಂಬೈನ ಬೀದಿಗಳಲ್ಲಿ ಕೆ ಚಂದ್ರಶೇಖರ್ ರಾವ್ ಆಹ್ವಾನಿಸಿ ಪೋಸ್ಟರ್​​ಗಳನ್ನು ಕೂಡ ಹಾಕಲಾಗಿತ್ತು.

-masthmagaa.com

Contact Us for Advertisement

Leave a Reply