ತೆಲಂಗಾಣದಲ್ಲಿ ಮುಷ್ಕರಕ್ಕೆ ಕುಳಿತ 50 ಸಾವಿರ ನೌಕರರು ವಜಾ

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ 50 ಸಾವಿರ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನ ಸೇರಿದಂತೆ 26 ಬೇಡಿಕೆಗಳನ್ನು ಮುಂದಿಟ್ಟು 50 ಸಾವಿರ ಮಂದಿ ನೌಕರರು ಮುಷ್ಕರ ಹೂಡಿದ್ದರು. ಶುಕ್ರವಾರ ಸಂಜೆ ಶುರುವಾದ ಮುಷ್ಕರವನ್ನು ಶನಿವಾರ ಸಂಜೆಯೊಳಗೆ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾಗುಂತೆ ಸರ್ಕಾರ ಸೂಚಿಸಿತ್ತು. ಅಲ್ಲದೆ ಶನಿವಾರ ಸಂಜೆ 6 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಬೇಕೆಂದು ಡೆಡ್ ಲೈನ್ ಕೊಟ್ಟಿತ್ತು. ಆದ್ರೆ ನೌಕರರು ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ವಜಾಗೊಳಿಸಿ ಸಿಎಂ ಆದೇಶಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಚಂದ್ರಶೇಖರ್ ರಾವ್, ಹಬ್ಬದ ಸೀಸನ್‍ನಲ್ಲಿ ನೌಕರರು ಮುಷ್ಕರ ಹೂಡಿದ್ದು ಕ್ಷಮಿಸಲಾಗದ ಅಪರಾಧ. ಅದೂ ಅಲ್ಲದೆ ರಾಜ್ಯ ರಸ್ತೆ ಸಾರಿಗೆ ನಿಗಮ 1200 ಕೋಟಿ ನಷ್ಟದಲ್ಲಿದ್ದು, 5000 ಕೋಟಿ ಸಾಲದಲ್ಲಿದೆ. ಇಂಥಾ ಪರಿಸ್ಥಿತಿಯಲ್ಲಿ ನೌಕರರು ಮುಷ್ಕರ ಹೂಡಿದ್ದು ತಪ್ಪು ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸಾರಿಗೆ ನೌಕರರ ಮುಷ್ಕರದಿಂದ 10 ಸಾವಿರ ಬಸ್‍ಗಳು ಡಿಪೋದಲ್ಲಿ ನಿಂತಿವೆ. ಇದರಿಂದ ರಾಜ್ಯ ರಸ್ತೆ ಸಾರಿಗೆಯಲ್ಲಿ ಭಾರಿ ಅಸ್ತವ್ಯಸ್ತ ಉಂಟಾಗಿದೆ. ಸರ್ಕಾರ 2100 ಬಸ್‍ಗಳನ್ನು ಬಾಡಿಗೆಗೆ ಪಡೆದಿದೆ. ಜೊತೆಗೆ ಸ್ಕೂಲ್ ಬಸ್‍ಗಳನ್ನೂ ಕೂಡ ಬಳಕೆ ಮಾಡಲಾಗುತ್ತಿದೆ.

Contact Us for Advertisement

Leave a Reply