ಎಣ್ಣೆ ಬಾಟ್ಲಿಗಾಗಿ ಅಪ್ಪನಿಗೇ ಒದ್ದ ಮಗ ಅಂದರ್..!

ಮದ್ಯದ ಬಾಟಲಿ ಕದ್ದಿಟ್ಟಿದ್ದಕ್ಕೆ ಅಪ್ಪನ ಮೇಲೆ ಹಲ್ಲೆ ನಡೆಸಿದ್ದ ಮಗನನ್ನ ಪೊಲೀಸರು ಬಂಧಿಸಿದ್ದಾರೆ. ಕೇರಳದ ಅಲಪ್ಪುಜಾದಲ್ಲಿ ಈ ಘಟನ ನಡೆದಿತ್ತು. 28 ವರ್ಷದ ಯುವಕ ಮನೆಯಲ್ಲಿ ಮದ್ಯದ ಬಾಟಲಿ ತಂದಿಟ್ಟಿದ್ದ. ಆದ್ರೆ ಮಗನ ಮೇಲಿನ ಕಾಳಜಿಯಿಂದ ತಂದೆ ಅದನ್ನು ತೆಗೆದಿಟ್ಟಿದ್ದರು. ಇದರಿಂದ ಕೋಪಗೊಂಡ ಮಗ ತಂದೆಗೆ ಥಳಿಸಿ, ಕಾಲಿನಿಂದ ಒದ್ದಿದ್ದಾನೆ. ನಂತರ ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಯುವಕನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಈಗ ಆರೋಪಿ ಯುವಕನನ್ನು ಬಂಧಿಸಿರುವ ಪೊಲೀಸರು ಸೆಕ್ಷನ್ 308ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

Contact Us for Advertisement

Leave a Reply