ಕೇಂದ್ರ ಬಜೆಟ್ ಬಗ್ಗೆ ಯಾರೂ ಹೇಳದ​ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

masthmagaa.com:

ತೆರಿಗೆ:

– ಒಟ್ಟಾರೆ ಆದಾಯ ತೆರಿಗೆ ಸ್ಲಾಬ್​ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

– ಕೇವಲ ಪೆನ್ಶನ್ ಮತ್ತು ಬಡ್ಡಿ ಆದಾಯ ಪಡೆಯುತ್ತಿರೋ 75 ವರ್ಷ ದಾಟಿದ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಂತಿಲ್ಲ. ಹಾಗಂತ ತೆರಿಗೆ ಇಲ್ಲ ಅಂತ ಅಲ್ಲ. ಬ್ಯಾಂಕ್​ನವರೇ ತೆರಿಗೆ ಕಟ್ ಮಾಡ್ಕೋತಾರೆ. ನೀವು ಫೈಲಿಂಗ್ ಮಾಡ್ತಾ ಕೂರಬೇಕು ಅಂತ ಇಲ್ಲ ಅಷ್ಟೆ.

– ಈ ಮೊದಲು ಆದಾಯ ತೆರಿಗೆ ವಂಚನೆ ವಿಚಾರದಲ್ಲಿ 6 ವರ್ಷ ಹಿಂದಕ್ಕೆ ಹೋಗಿ ಮರುಪರಿಶೀಲನೆ ಮಾಡಬೋದಿತ್ತು. ಅದನ್ನ ಈಗ 3 ವರ್ಷಕ್ಕೆ ಇಳಿಸಲಾಗಿದೆ. 50 ಲಕ್ಷಕ್ಕೂ ಮೇಲ್ಪಟ್ಟ ಆದಾಯದ ಗಂಭೀರ ತೆರಿಗೆ ವಂಚನೆ ಪ್ರಕರಣ ಸಂಬಂಧ ಮಾತ್ರ 10 ವರ್ಷ ಹಿಂದೆ ಹೋಗಿ ಮರು ಪರಿಶೀಲಿಸಲು ಅವಕಾಶ.

– ತೆರಿಗೆ ವ್ಯವಸ್ಥೆಯನ್ನ ಸಂಪೂರ್ಣ ಡಿಜಿಟಲೀಕರಣ ಮಾಡಲು ನಿರಂತರ ಕ್ರಮ.

– ಕೈಗೆಟುಕುವ ಮನೆಗಳ ಖರೀದಿಗೆ ಲೋನ್ ಮಾಡಿದವರಿಗೆ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಈ ವರ್ಷವೂ ಮುಂದುವರಿಕೆ.

– ಇಂತಹ ಮನೆಗಳ ಹಾಗೂ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿರೋ ಸಂಸ್ಥೆಗಳಿಗೆ ತೆರಿಗೆ ರಜೆ ಅವಕಾಶ ಮತ್ತೊಂದು ವರ್ಷ ಮುಂದುವರಿಕೆ.

– ವಲಸೆ ಕಾರ್ಮಿಕರಿಗೆ ಕೊಡುವ ಬಾಡಿಗೆ ಮನೆ ಯೋಜನೆಗೆ ತೆರಿಗೆ ವಿನಾಯಿತಿ.

– ಸ್ಟಾರ್ಟ್​ಅಪ್​ಗಳಿಗೆ ತೆರಿಗೆ ರಜೆ ಮತ್ತೊಂದು ವರ್ಷ ಮುಂದುವರಿಕೆ.

 

ಆರೋಗ್ಯ ಕ್ಷೇತ್ರ:

– ಆರೋಗ್ಯ ಕ್ಷೇತ್ರಕ್ಕೆ ಒಟ್ಟು 2 ಲಕ್ಷ 23 ಸಾವಿರ ಕೋಟಿ ಅನುದಾನ. ಕಳೆದ ವರ್ಷ ಕೇವಲ 90 ಸಾವಿರ ಕೋಟಿ ಇತ್ತು.

– ಲಸಿಕೆಗಾಗಿ 35 ಸಾವಿರ ಕೋಟಿ ಮೀಸಲು. ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ.

– ಈಗಾಗಲೇ 2 ಮೇಡ್ ಇನ್ ಇಂಡಿಯಾ ಲಸಿಕೆ ಲಭ್ಯವಿದೆ. ಕೆಲವೇ ದಿನಗಳಲ್ಲಿ ಮತ್ತೆರಡು ಲಸಿಕೆಗಳು ಲಭ್ಯ.

– 15 ಎಮರ್ಜೆನ್ಸಿ ಹೆಲ್ತ್ ಸೆಂಟರ್​​ ಸ್ಥಾಪನೆ.

– ಹಳೆಯ ವಾಹನಗಳನ್ನ ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ಯೋಜನೆ.

– 20 ವರ್ಷ ಹಳೆಯ ಖಾಸಗಿ ಬಳಕೆ ವಾಹನ ಹಾಗೂ 15 ವರ್ಷ ಹಳೆಯ ವಾಣಿಜ್ಯ ಬಳಕೆ ವಾಹನಗಳ ಫಿಟ್​ನೆಸ್ ಟೆಸ್ಟ್ ಮಾಡಲಾಗುತ್ತೆ. ಈ ಸ್ಕೀಮ್​​ನ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಾಗುತ್ತೆ.

 

ಮೂಲಸೌಕರ್ಯ:

– ನ್ಯಾಶನಲ್ ಇನ್ಫ್ರಾಸ್ಟ್ರಕ್ಚರ್​ ಪೈಪ್​ಲೈನ್ NIPಯ 1.1 ಲಕ್ಷ ಕೋಟಿ ಮೊತ್ತದ ಯೋಜನೆಗಳು ಚಾಲ್ತಿಯಲ್ಲಿವೆ.

– 2021-22ನೇ ಸಾಲಿನಲ್ಲಿ 5.54 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ, ಇದು ಕಳೆದ ಬಾರಿಗಿಂತ ಶೇ.34.5ರಷ್ಟು ಹೆಚ್ಚು.

– 2 ಲಕ್ಷ ಕೋಟಿ ರೂ ಬಂಡವಾಳ ಹೆಚ್ಚಾಗಿ ರಾಜ್ಯ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ನೀಡಿಕೆ.

– 2022ರಲ್ಲಿ 11 ಸಾವಿರ ಕಿ.ಮೀ.ನಷ್ಟು ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಕಾಮಗಾರಿ ಪೂರ್ಣ.

– ತಮಿಳುನಾಡಿನಲ್ಲಿ 3,500 ಕಿಮೀ ನ್ಯಾಶನಲ್ ಹೈವೇ ಕೆಲಸ – 1 ಲಕ್ಷ ಕೊಟಿ ರೂ.ಗೂ ಅಧಿಕ ವೆಚ್ಚ.

– 278 ಕಿ.ಮೀ. ಉದ್ದದ ಬೆಂಗಳೂರು-ಚೆನ್ನೈ ಎಕ್ಸ್​​ಪ್ರೆಸ್​ ವೇ ಕಾಮಗಾರಿ ಈ ವರ್ಷವೇ ಆರಂಭ.

– ಕೇರಳದಲ್ಲಿ 1,100 ಕಿಮೀ ನ್ಯಾಶನಲ್ ಹೈವೇ ಕಾಮಗಾರಿಗೆ 65 ಸಾವಿರ ಕೋಟಿ ಖರ್ಚು.

– ಪಶ್ಚಿಮ ಬಂಗಾಳದಲ್ಲಿ 675 ಕಿ.ಮೀ. ನ್ಯಾಶನಲ್​​​​ ಹೈವೇ ಕಾಮಗಾರಿಗೆ 25 ಸಾವಿರ ಕೋಟಿ.

– ಅಸ್ಸಾಂ​​ನಲ್ಲಿ 35 ಸಾವಿರ ಕೋಟಿ ವೆಚ್ಚದಲ್ಲಿ 1,300 ಕಿ.ಮೀ.ಗೂ ಹೆಚ್ಚು ನ್ಯಾಶನಲ್ ಹೈವೇ ಕಾಮಗಾರಿ.

– ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.18 ಲಕ್ಷ ಕೋಟಿ (ಇದು ಸಾರ್ವಕಾಲಿಕ ದಾಖಲೆ).

– ನ್ಯಾಷ​ನಲ್ ಜಲ್​ ಜೀವನ್​ ಮಿಶನ್​​​​ಗೆ 5 ವರ್ಷಗಳಲ್ಲಿ 2.87 ಲಕ್ಷ ಕೋಟಿ ರೂಪಾಯಿ. ಇದರಿಂದ 2.86 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ.

– ಸ್ವಚ್ಛ ಭಾರತ 2.0 – 5 ವರ್ಷಗಳಲ್ಲಿ 1.41 ಲಕ್ಷ ಕೋಟಿ ರೂ.

– ಸ್ವಚ್ಛ ಗಾಳಿಗಾಗಿ 42 ನಗರಗಳಿಗೆ 2,200 ಕೋಟಿ ರೂ.

 

ರೈಲ್ವೆ ಕ್ಷೇತ್ರ

– ನ್ಯಾಶನಲ್ ರೈಲ್ವೆ ಯೋಜನೆ-2030.

– ಡೆಡಿಕೇಟೆಡ್ ಫ್ರೈಟ್ ಕಾರಿಡಾರ್​​ ವಿಸ್ತರಣೆ.

– ಖರಗ್​ಪುರದಿಂದ – ವಿಜಯವಾಡದ ತನಕ ಈಸ್ಟ್ ಕೋಸ್ಟ್ ಕಾರಿಡಾರ್.

– ಭುಸವಲ್​​​​​ನಿಂದ ಖರಗ್​ಪುರ ಹಾಗೂ ಅಲ್ಲಿಂದ ಡಂಕುನಿ ತನಕ ಈಸ್ಟ್ ವೆಸ್ಟ್ ಕಾರಿಡಾರ್.

– ಇಟಾರ್ಸಿಯಿಂದ ವಿಜಯವಾಡದವರೆಗೆ ನಾರ್ಥ್​ ಸೌಥ್ ಕಾರಿಡಾರ್​.

– 2023ರ ಒಳಗೆ ಬ್ರಾಡ್​ಗೇಜ್ ಮಾರ್ಗಗಳ ಶೇ.100ರಷ್ಟು ವಿದ್ಯುದೀಕರಣ (ಎಲೆಕ್ಟ್ರಿಫಿಕೇಶನ್).

– ಪ್ರಯಾಣಿಕರ ಅನುಕೂಲಕ್ಕಾಗಿ ಟೂರಿಸ್ಟ್ ರೂಟ್​ಗಳಲ್ಲಿ ವಿಸ್ಟಾಡೋಮ್ ಕೋಚ್​ಗಳ ವಿಸ್ತರಣೆ.

– ರೈಲು ಸುರಕ್ಷತೆ ಹೆಚ್ಚಿಸಲು ಸಂಚಾರ ದಟ್ಟಣೆಯ ಮಾರ್ಗಗಳಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರೋ ‘ರೈಲು ಸುರಕ್ಷತಾ ವ್ಯವಸ್ಥೆ’ ಜಾರಿ.

– ರೈಲ್ವೆಗೆ 1 ಲಕ್ಷ 10 ಸಾವಿರ ಕೋಟಿ ರೂಪಾಯಿ.

 

ಮೆಟ್ರೋ:

– ಮೆಟ್ರೋ ನಗರಗಳಲ್ಲಿ ಮೆಟ್ರೋ ವಿಸ್ತರಣೆ.

– ಸಾರ್ವಜನಿಕ ಸಾರಿಗೆ ವ್ಯವಸ್ಥೆ ವಿಸ್ತರಣೆ.

– ಒಟ್ಟು 20 ಸಾವಿರ ಬಸ್​​ಗಳನ್ನ ಆಪರೇಟ್ ಮಾಡಲು ಖಾಸಗಿಯವರಿಗೆ ಅವಕಾಶ.

– ದೇಶದ 27 ನಗರಗಳಲ್ಲಿ ಒಟ್ಟು 1,016 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯ.

– ಮಹಾನಗರಗಳ ಹೊರವಲಯದ ಪ್ರದೇಶಗಳಲ್ಲಿ ಹಾಗೂ 2ನೇ ಹಂತದ ನಗರಗಳಲ್ಲಿ ಕಡಿಮೆ ವೆಚ್ಚದ ಮೆಟ್ರೋ ಲೈಟ್ ಹಾಗೂ ಮೆಟ್ರೋ ನಿಯೋ ಯೋಜನೆ ಜಾರಿ.

– ಕೊಚ್ಚಿ ಮೆಟ್ರೋ ಫೇಸ್ 2 (11.5 ಕಿ.ಮೀ. ಉದ್ದ) 1,950 ಕೊಟಿ ರೂ.

– ಚೆನ್ನೈ ಮೆಟ್ರೋ ಫೇಸ್-2 (118 ಕಿ.ಮೀ. ಉದ್ದ) 63,000 ಕೋಟಿ ರೂ. ಮೀಸಲು

– ಬೆಂಗಳೂರು ಮೆಟ್ರೋ ಫೇಸ್ 2ಎ ಮತ್ತು 2ಬಿಗೆ (58.19 ಕಿ.ಮೀ. ಉದ್ದ) 14,700 ಕೋಟಿ ರೂ.

– ನಾಗ್ಪುರ್ ಮೆಟ್ರೋ ಫೇಸ್-2ಗೆ 5,800 ಕೋಟಿ ರೂ.

– ನಾಸಿಕ್ ಮೆಟ್ರೋಗೆ 2,092 ಕೋಟಿ ರೂ.

 

ಇಂಧನ ಮತ್ತು ವಿದ್ಯುತ್

– ದೇಶದಲ್ಲಿ ಜನರಿಗೆ ವಿದ್ಯುತ್ ಲೈನ್ ಯಾರದ್ದು ತೆಗೆದುಕೊಳ್ಳಬೇಕು ಅನ್ನೋ ಆಯ್ಕೆಗಳಿಲ್ಲ. ಇಲ್ಲಿ ಸರ್ಕಾರಿ ಅಥವಾ ಕೆಲ ಕಡೆ ಖಾಸಗಿ ಕಂಪನಿಗಳ ಏಕಸ್ವಾಮ್ಯ ಇದೆ. ಜನರಿಗೆ ಒಳ್ಳೆಯ ಸರ್ವಿಸ್ ಸಿಗಬೇಕೆಂದರೆ ಕಾಂಪಿಟಿಶನ್ ಇರಬೇಕು. ಇದಕ್ಕಾಗಿ ಒಂದು ಫ್ರೇಮ್​ವರ್ಕ್​ ಜಾರಿ ಮಾಡಲಾಗುತ್ತೆ.

– ಡಿಸ್ಕಾಮ್​​ಗಳ ಅಭಿವೃದ್ಧಿಗೆ 5 ವರ್ಷಗಳಲ್ಲಿ 3.5 ಲಕ್ಷ ಕೋಟಿ ನೆರವು.

– ಗ್ರೀನ್ ಎನರ್ಜಿ ಅಭಿವೃದ್ಧಿಗೆ ಹೈಡ್ರೋಜನ್ ಎನರ್ಜಿ ಮಿಶನ್​​ ಜಾರಿ.

– ಬಂದರುಗಳ ನಿರ್ವಹಣೆ ಜವಾಬ್ದಾರಿ ಖಾಸಗಿಯವರಿಗೆ ವಹಿಸಲು ಕ್ರಮ.

– ಭಾರತದ ಅಂತಾರಾಷ್ಟ್ರೀಯ ಶಿಪ್ಪಿಂಗ್ ಕಂಪನಿಗಳಿಗೆ ತರಬೇತಿ ಮತ್ತು ಆಧುನಿಕತೆಗೆ ಒಗ್ಗಿಕೊಳ್ಳಲು 5 ವರ್ಷಗಳಲ್ಲಿ 1,600 ಕೋಟಿ ರೂ. ಸಹಾಯ.

– ಹಡಗು ರೀಸೈಕಲಿಂಗ್ ಉದ್ಯಮಕ್ಕೆ ಉತ್ತೇಜನ. ಇದರಿಂದ 1 ಲಕ್ಷ ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ನಿರೀಕ್ಷೆ.

– ಹೆಚ್ಚುವರಿ 1 ಕೋಟಿ ಕುಟುಂಬಕ್ಕೆ ಉಜ್ವಲ ಯೋಜನೆ ವಿಸ್ತರಣೆ.

– ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಶನ್ ನೆಟ್​ವರ್ಕ್​ಗೆ 100 ಹೊಸ ನಗರಗಳ ಜೋಡಣೆ.

– ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಗ್ಯಾಸ್​ ಪೈಪ್​ಲೈನ್ ಯೋಜನೆ.

– ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾಗೆ ಹೆಚ್ಚುವರಿ 1,000 ಕೋಟಿ ಬಂಡವಾಳ.

– ಭಾರತೀಯ ಪುನರ್ಬಳಕೆ ಇಂಧನ ಏಜೆನ್ಸಿಗೆ 1,500 ಕೋಟಿ ರೂಪಾಯಿ.

 

ಹಣಕಾಸು ಮತ್ತು ಉದ್ಯಮ:

– ಗಿಫ್ಟ್ ಸಿಟಿಯಲ್ಲಿ ಜಾಗತಿಕ ಫಿನ್​ಟೆಕ್​ ಸಿಟಿ ಸ್ಥಾಪನೆ.

– ಇನ್ಶೂರೆನ್ಸ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ ಶೇ. 49ರಿಂದ ಶೇ. 74ಕ್ಕೆ ಏರಿಸಲು ಕಾನೂನು ತಿದ್ದುಪಡಿ. (ಆದ್ರೆ, ಪ್ರಮುಖ ಮ್ಯಾನೇಜ್​ಮೆಂಟ್ ವ್ಯಕ್ತಿಗಳು ಹಾಗೂ ಬೋರ್ಡ್ ಡೈರೆಕ್ಟರ್ಸ್​ನಲ್ಲಿ ಮೆಜಾರಿಟಿ ನಿವಾಸಿ ಭಾರತೀಯರೇ ಆಗಿರಬೇಕು. ಇದರಲ್ಲೂ ಕನಿಷ್ಠ ಶೇ. 50 ಡೈರೆಕ್ಟರ್ಸ್ ಇಂಡಿಪೆಂಡೆಂಟ್ ಡೈರೆಕ್ಟರ್ಸ್ ಆಗಿರಬೇಕು ಹಾಗೂ ನಿಗದಿ ಪ್ರಮಾಣದ ಲಾಭದ ದುಡ್ಡನ್ನ ಮೀಸಲು ನಿಧಿಯಾಗಿ ಯಾವಾಗಲೂ ಉಳಿಸಿಕೊಂಡಿರಬೇಕು.)

– ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್ ರಿ-ಕ್ಯಾಪಿಟಲೈಸೇಶನ್.

– ಸರ್ಕಾರಿ ಬ್ಯಾಂಕುಗಳಿಗೆ 2021-22ರಲ್ಲಿ 20 ಸಾವಿರ ಕೋಟಿ ಬಂಡವಾಳ.

– ಬ್ಯಾಂಕುಗಳಲ್ಲಿ ಇಟ್ಟಿರೋ ದುಡ್ಡಿಗೆ ಇದ್ದ ಇನ್ಷೂರೆನ್ಸ್ ಅನ್ನ 5 ಲಕ್ಷಕ್ಕೆ ಏರಿಕೆ. ಹಾಗೂ ಬ್ಯಾಂಕುಗಳಲ್ಲಿ ಬಿಕ್ಕಟ್ಟು ಆದಾಗ ದುಡ್ಡು ಇಟ್ಟವರಿಗೆ ಟೈಮಿಗೆ ಸರಿಯಾಗಿ ದುಡ್ಡು ವಾಪಸ್​ ತೆಗೆಯಲು ಅನುಕೂಲ ಆಗಲು ಇದೇ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ.

– ಸಣ್ಣ ಕಂಪನಿಗಳು ಅಂತ ಕರೆಸಿಕೊಳ್ಳಲು ಇದ್ದ ಟರ್ನೋವರ್ ಮಿತಿ 20 ಕೋಟಿಗೆ ಏರಿಕೆ. ಇದರಿಂದ 2 ಲಕ್ಷಕ್ಕೂ ಅಧಿಕ ಕಂಪನಿಗಳಿಗೆ ಲಾಭ.

– ಮೆಗಾ ಇನ್ವೆಸ್ಟ್​​​ಮೆಂಟ್​​​​​ ಟೆಕ್ಸ್​ಟೈಲ್ ಪಾರ್ಕ್. ದೇಶದಲ್ಲಿ 7 ಟೆಕ್ಸ್​ಟೈಲ್ ಪಾರ್ಕ್ಸ್ ಸ್ಥಾಪನೆ.

 

ಖಾಸಗೀಕರಣ:

– 2021-22ರಲ್ಲಿ ಬಿಪಿಸಿಎಲ್, ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ, ಕಂಟೇನರ್ ಕಾರ್ಪೋರೇಶನ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಪವನ್ ಹನ್ಸ್ ಹಾಗೂ ಇತರ ಕೆಲ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ಪೂರ್ಣ.

– 2021-22ರಲ್ಲಿ ಇನ್ನೆರಡು ಸರ್ಕಾರಿ ಬ್ಯಾಂಕ್ ಹಾಗೂ ಒಂದು ಜನರಲ್ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ ಗುರಿ.

– ಇದೇ ವರ್ಷ ಷೇರು ಮಾರುಕಟ್ಟೆಗೆ ಎಲ್​ಐಸಿ ಎಂಟ್ರಿ ಮಾಡಿಸಲು ಕಾನೂನು ತಿದ್ದುಪಡಿ.

– ರಾಜ್ಯ ಸರ್ಕಾರಗಳಿಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣಕ್ಕೆ ಪ್ರೋತ್ಸಾಹ.

– ಸಹಕಾರಿ ಸಂಸ್ಥೆಗಳ ವ್ಯವಹಾರದ ಅನುಕೂಲಕ್ಕಾಗಿ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿ.

 

ಕೃಷಿ ಕ್ಷೇತ್ರ:

– ಕೃಷಿ ಉತ್ಪನ್ನಗಳಿಗೆ ಕಡೇ ಪಕ್ಷ ರೈತ ಖರ್ಚು ಮಾಡಿದ ಒಂದೂವರೆ ಪಟ್ಟು ಎಮ್​ಎಸ್​ಪಿ.

– 2013-14ರಲ್ಲಿ ಗೋಧಿ ಬೆಳೆಗಾರರಿಗಾಗಿ ಖರ್ಚಾದ ಒಟ್ಟು ಎಮ್​ಎಸ್​​ಪಿ ದುಡ್ಡು 33,000 ಕೋಟಿ. ಆದ್ರೆ 2019-20ರಲ್ಲಿ ಈ ಮೊತ್ತ 62 ಸಾವಿರ ಕೋಟಿಗೆ ಏರಿಕೆಯಾಗಿದೆ. 2020-21ರಲ್ಲಿ 75 ಸಾವಿರ ಕೋಟಿಗೆ ಏರಿಕೆಯಾಗಿದೆ.

– 2013-14ರಲ್ಲಿ ಭತ್ತ ಬೆಳೆಗಾರರಿಗೆ ಹೋದ ಒಟ್ಟು ಎಮ್​ಎಸ್​ಪಿ ಮೊತ್ತ 63,000 ಕೋಟಿ. 2019-20ರಲ್ಲಿ ಈ ಮೊತ್ತ 1 ಲಕ್ಷದ 41 ಸಾವಿರ ಕೋಟಿ ರೂ.ಗೆ ಏರಿಕೆ. 2020-21ರಲ್ಲಿ ಈ ಮೊತ್ತ 1 ಲಕ್ಷದ 72 ಸಾವಿರ ಕೋಟಿ ರೂ.ಗೆ ಏರಿಕೆ ನಿರೀಕ್ಷೆ.

– 2013-14ರಲ್ಲಿ ಬೇಳೆಕಾಳು ಬೆಳೆಗಾರರಿಗೆ 236 ಕೋಟಿ ರೂಪಾಯಿ ಎಮ್​ಎಸ್​​ಪಿ. 2019-20ರಲ್ಲಿ ಈ ಮೊತ್ತ 8,000 ಕೋಟಿಗೆ ಏರಿಕೆ. 2020-21ರಲ್ಲಿ 10,500 ಕೋಟಿ ರೂ.ಗೆ ಏರಿಕೆ.

– 2013-14ರಲ್ಲಿ ಹತ್ತಿ ಬೆಳೆಗೆ 90 ಕೋಟಿ ರೂ. ಎಮ್​ಎಸ್​ಪಿ ನೀಡಲಾಗಿತ್ತು. 2020-21ರಲ್ಲಿ ಅದು 25 ಸಾವಿರ ಕೋಟಿ ರೂ.ಗೆ ಏರಿಕೆ.

– ಈ ವರ್ಷ ಹಕ್ಕುಪತ್ರ ನೀಡುವ ಸ್ವಾಮಿತ್ವ ಯೋಜನೆಯನ್ನ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಣೆ.

– ಈ ವರ್ಷ 16.5 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆ ಗುರಿ. ಇದರಲ್ಲಿ ಪಶುಪಾಲನೆ, ಡೈರಿ ಹಾಗೂ ಮೀನುಗಾರರಿಗೆ ಹೆಚ್ಚಿನ ಸಾಲ ಹೋಗುವಂತೆ ನೋಡಿಕೊಳ್ಳಲಾಗುತ್ತೆ.

– ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಫಂಡ್​ಗೆ 40,000 ಕೋಟಿ ರೂ.

– ನಬಾರ್ಡ್ ಅಡಿಯಲ್ಲಿ ಸಣ್ಣ ನೀರಾವರಿ ಫಂಡ್​ 5,000 ಕೋಟಿಯಿಂದ 10,000 ಕೋಟಿ ರೂ.ಗೆ ಹೆಚ್ಚಳ.

– ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತಿಗೆ ಪ್ರಚೋದನೆ ಕೊಡಲು ಇರುವ ಆಪರೇಷನ್ ಗ್ರೀನ್ ಸ್ಕೀಮ್ ವ್ಯಾಪ್ತಿಗೆ 22 ಬೇಗ ಹಾಳಾಗುವ ತರಕಾರಿಗಳ ಸೇರ್ಪಡೆ.

– ಇ-ನ್ಯಾಮ್​​ ವ್ಯವಸ್ಥೆಗೆ ಇನ್ನೂ ಸಾವಿರ ಮಂಡಿಗಳ ಸೇರ್ಪಡೆ.

– ಎಪಿಎಂಸಿಗಳಿಗೂ ತಮ್ಮ ಬ್ಯುಸಿನೆಸ್ ಹೆಚ್ಚು ಮಾಡಲು ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ಹಣಕಾಸಿನ ಸಹಾಯ.

– ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ, ಪಾರದೀಪ್ ಮತ್ತು ಪೆಟುವಾಘಾಟ್​ ಬಂದರುಗಳನ್ನ ವಾಣಿಜ್ಯ ಚಟುವಟಿಕೆಗಳ ಹಬ್​ಗಳಾಗಿ ಮಾಡಲಾಗುವುದು.

– ತಮಿಳುನಾಡಿನಲ್ಲಿ ಬಹು ಉಪಯೋಗಿ ಸಮುದ್ರ ಕಳೆ ಪಾರ್ಕ್ ಸ್ಥಾಪನೆ.

– ವಲಸೆ ಕಾರ್ಮಿಕರಿಗೆ ಮತ್ತು ಕಾಂಟ್ರಾಕ್ಟರ್​ಗಳನ್ನ ಕನೆಕ್ಟ್ ಮಾಡುವ ಪ್ರತ್ಯೇಕ ವೆಬ್​ಸೈಟ್. ಇದರಿಂದ ವಲಸೆ ಕಾರ್ಮಿಕರ ಆರೋಗ್ಯ, ವಸತಿ, ಕೌಶಲ್ಯ, ಇನ್ಶೂರೆನ್ಸ್, ಸಾಲ ಮತ್ತು ಆಹಾರ ಭದ್ರತೆಗೆ ಅನುಕೂಲ.

– MSME ವಲಯಕ್ಕೆ 15,700 ಕೋಟಿ ರೂ. ಅನುದಾನ. ಕಳೆದ ವರ್ಷಕ್ಕೆ ಹೋಲಿಸಿದರೆ ಡಬಲ್.

 

ಶಿಕ್ಷಣ ಕ್ಷೇತ್ರ:

– ನ್ಯಾಶನಲ್ ಎಜುಕೇಶನ್ ಪಾಲಿಸಿಗೆ ಅನುಗುಣವಾಗಿ ಬೆಳೆಯಲು ಅನುವಾಗಲು 15,000 ಶಾಲೆಗಳ ಅಭಿವೃದ್ಧಿ.

– 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ.

– ಉನ್ನತ ಶಿಕ್ಷಣಕ್ಕಾಗಿ ‘ಹೈಯರ್ ಎಜುಕೇಶನ್ ಕಮಿಷನ್ ಆಫ್ ಇಂಡಿಯಾ’ ಸ್ಥಾಪನೆ.

– ಲಡಾಖ್​​​ನ ಲೇಹ್​ನಲ್ಲಿ ಸೆಂಟ್ರಲ್ ಯುನಿವರ್ಸಿಟಿ.

– ಎಸ್​​​​ಸಿ-ಎಸ್​​ಟಿ ಸಮುದಾಯದವರಿಗೆ 750 ಮಾದರಿ ಏಕಲವ್ಯ ವಸತಿ ಶಾಲೆಗಳ ಸ್ಥಾಪನೆ ಗುರಿ. ಪ್ರತಿ ಶಾಲೆಗೆ 38 ಕೋಟಿ ರೂಪಾಯಿ ಅನುದಾನ. ಇದೇ ಶಾಲೆ ಗುಡ್ಡಗಾಡು ಪ್ರದೇಶದಲ್ಲಿದ್ದರೆ 48 ಕೋಟಿ ರೂಪಾಯಿ ಮೀಸಲು.

– ಹೈಸ್ಕೂಲ್ ನಂತರದ ಶಿಕ್ಷಣಕ್ಕಾಗಿ ಎಸ್ಸಿ- ಎಸ್ಟಿ ವಿದ್ಯಾರ್ಥಿಗಳಿಗೆ 5 ವರ್ಷಗಳ ಅವಧಿಯಲ್ಲಿ 35 ಸಾವಿರ ಕೋಟಿ ಸ್ಕಾಲರ್​ಶಿಪ್

– ಡಿಪ್ಲಾಮಾ, ಇಂಜಿನಿಯರಿಂಗ್​​​ ಮಾಡಿದವರಿಗೆ ನ್ಯಾಟ್ ಸ್ಕೀಮ್ ಅಡಿಯಲ್ಲಿ ತರಬೇತಿಗೆ 3,000 ಕೋಟಿ ರೂ.

– ಭಾರತದ ಯುವಕರ ಕೌಶಲ್ಯ ವೃದ್ಧಿಗೆ ಯುಎಇ ಹಾಗೂ ಜಪಾನ್ ಸಹಭಾಗಿತ್ವದಲ್ಲಿ ಯೋಜನೆ

 

ಸಂಶೋಧನೆ ಮತ್ತು ಅಭಿವೃದ್ಧಿ:

– ನ್ಯಾಶನಲ್ ರಿಸರ್ಚ್ ಫೌಂಡೇಶನ್​​ಗೆ ಮುಂದಿನ 5 ವರ್ಷಗಳಲ್ಲಿ 50,000 ಕೋಟಿ ರೂ. ಮೀಸಲು.

– ಡಿಜಿಟಲ್ ಪೇಮೆಂಟ್ಸ್ ಉತ್ತೇಜಿಸಲು 1,500 ಕೋಟಿ ಕೋಟಿ ರೂಪಾಯಿ.

– ಕೇಂದ್ರ ಸರ್ಕಾರದ ಎಲ್ಲಾ ನೀತಿಗಳನ್ನ ದೇಶದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಸಿಗುವಂತೆ ಮಾಡಲು ‘ನ್ಯಾಶನಲ್ ಲಾಂಗ್ವೇಜ್ ಟ್ರಾನ್ಸ್​ಲೇಶನ್ ಮಿಶನ್’.

– ‘ಇಸ್ರೋ ಗಗನ್​ಯಾನ್ ಮಿಶನ್​’ಗಾಗಿ ರಷ್ಯಾದಲ್ಲಿ ನಾಲ್ವರು ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನಡೆಯುತ್ತಿದೆ. ಡಿಸೆಂಬರ್ 2021ಕ್ಕೆ ಮೊದಲ ಮಾನವ ರಹಿತ ಉಡ್ಡಯನ ನಡೆಯಲಿದೆ.

– ‘ದಿ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ – NSIL’ ಮೂಲಕ ಸ್ಪೇಸ್ ಬ್ಯುಸಿನೆಸ್.

– ಆಳ ಸಮುದ್ರ ಸಂಶೋಧನೆಗೆ ಮುಂದಿನ 5 ವರ್ಷಕ್ಕೆ 4 ಸಾವಿರ ಕೋಟಿ ರೂಪಾಯಿ.

 

ಆಡಳಿತ ಸುಧಾರಣೆ:

– ನ್ಯಾಶನಲ್ ನರ್ಸಿಂಗ್ ಮತ್ತು ಮಿಡ್​ವೈಫರಿ ಕಮಿಷನ್ ಸ್ಥಾಪನೆ.

– 2021-22ರಲ್ಲಿ ನಡೆಯುವ ಜನಗಣತಿ ಸಂಪೂರ್ಣ ಡಿಜಿಟಲ್ ಗಣತಿ ಆಗಲಿದೆ. ಇದಕ್ಕಾಗಿ 3,700 ಕೋಟಿ ರೂ. ಅನುದಾನ.

– ಪೋರ್ಚುಗೀಸರಿಂದ ಗೋವಾ ಸ್ವಾತಂತ್ರ್ಯ ಪಡೆದು 60 ವರ್ಷ ಆಗ್ತಿರೋ ಹಿನ್ನೆಲೆ 300 ಕೋಟಿ ರೂ. ವಿಶೇಷ ಕೊಡುಗೆ.

– ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿನ ಮಹಿಳಾ ಚಹಾ ಕಾರ್ಮಿಕರ ಅಭಿವೃದ್ಧಿಗೆ 1,000 ಕೋಟಿ ರೂ.

ಇನ್ನು ಕೆಲವೊಂದು ವಸ್ತುಗಳ ಮೇಲೆ ಕೃಷಿ ಸೆಸ್​ ಹಾಕಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್​ ಮೇಲೆ 2.5 ರೂ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 4 ರೂ ಕೃಷಿ ಸೆಸ್​ ಹಾಕಲಾಗಿದೆ. ಇನ್ನೂ ಕೆಲವೊಂದು ವಸ್ತುಗಳ ಆಮದು ಸುಂಕವನ್ನ ಹೆಚ್ಚಿಸಲಾಗಿದೆ. ಚಿನ್ನ-ಬೆಳ್ಳಿ ಮೇಲಿನ ಆಮದು ಸುಂಕವನ್ನ 12.5%ನಿಂದ 7.5%ಗೆ ಇಳಿಸಲಾಗಿದೆ. ಆದ್ರೆ ಚಿನ್ನ-ಬೆಳ್ಳಿ ಮೇಲೆ 2.5% ಕೃಷಿ ಸೆಸ್ ವಿಧಿಸಲಾಗಿದೆ. ಹೀಗೆ ಕೆಲವೊಂದು ವಸ್ತುಗಳ ಮೇಲೆ ಆಮದು ಸುಂಕ ಮತ್ತು ಕೃಷಿ ಸೆಸ್ ಎರಡನ್ನೂ ಹಾಕಿದ್ರೆ, ಇನ್ನೂ ಕೆಲವೊಂದು ವಸ್ತುಗಳ ಮೇಲೆ ಒಂದನ್ನ ಮಾತ್ರ ಹಾಕಲಾಗಿದೆ.

 

-masthmagaa.com

Contact Us for Advertisement

Leave a Reply