ಬಾಂಗ್ಲಾದಲ್ಲಿ ಹಿಂಸಾಚಾರ: ದುರ್ಗಿ ಕಾಲ ಬಳಿ ಕುರಾನ್ ಇಟ್ಟವ ಅರೆಸ್ಟ್​​!

masthmagaa.com:

ಬಾಂಗ್ಲಾದೇಶದಲ್ಲಿ ಇತ್ತಿಚೆಗೆ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮತ್ತು ಆತನ ಬೆಂಬಲಿಗರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಶೈಕತ್ ಮಂಡಲ್ ಅಕ್ಟೋಬರ್ 17ರಂದು ರಂಗ್​ಪುರದ ಪೀರ್​ಗಂಜ್​​ನಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಆಗಿದ್ದ. ಹಿಂಸಾಚಾರಕ್ಕೂ ಮುನ್ನ ಈತ ಮಾಡಿದ್ದ ಫೇಸ್​ಬುಕ್ ಲೈವ್​​ನಿಂದ ಜನ ಪ್ರಚೋದನೆಗೆ ಒಳಗಾಗಿದ್ರು ಅಂತ ಗೊತ್ತಾಗಿದೆ. ಪೀರ್​ಗಂಜ್​ನಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ 70 ಮನೆ ಮತ್ತು ಹಲವಾರು ಅಂಗಡಿ ಮುಂಗಟ್ಟುಗಳನ್ನು ಸುಟ್ಟುಹಾಕಲಾಗಿತ್ತು. ನಿನ್ನೆಯಷ್ಟೇ ಬಾಂಗ್ಲಾ ಪೊಲೀಸರು ಇಕ್ಬಲ್ ಹೊಸ್ಸೇನ್ ಅನ್ನೋ ವ್ಯಕ್ತಿಯನ್ನು ಕಾಕ್ಸ್​ಬಜಾರ್​ನಿಂದ ಅರೆಸ್ಟ್ ಮಾಡಿದ್ರು. ಈತನೇ ದುರ್ಗಿಯ ಕಾಲ ಬಳಿ ಕುರಾನ್ ಇಟ್ಟು, ವಿಡಿಯೋ ವೈರಲ್ ಮಾಡಿದ್ದು ಅಂತ ಗೊತ್ತಾಗಿದೆ. ಬಾಂಗ್ಲಾದ ಇಡೀ ಹಿಂಸಾಚಾರಕ್ಕೆ ಈ ಘಟನೆಯೇ ಪ್ರಮುಖ ಕಾರಣವಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂಸಾಚಾರ ಸಂಬಂಧ ಈವರಗೆ ಸುಮಾರು 600 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply