BIG BREAKING: ‘ಕೆಜಿಎಫ್​-2’ ಸಿನಿಮಾ ರಿಲೀಸ್​ ಡೇಟ್​ ಇಂದು ಸಂಜೆ ಅನೌನ್ಸ್

masthmagaa.com:

ಭಾರಿ ಕುತೂಹಲ ಕೆರಳಿಸಿರುವ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ರಿಲೀಸ್​ ಡೇಟ್​ ಇವತ್ತು ಸಂಜೆ ಅನೌನ್ಸ್ ಆಗಲಿದೆ. ಸಂಜೆ 6.32ಕ್ಕೆ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಲಾಗುತ್ತೆ ಅಂತ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್, ಬಾಲಿವುಡ್​ ನಟ ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ‘ದಿ ಪ್ರಾಮಿಸ್​ ವಿಲ್​ ಬಿ ಕೆಪ್ಟ್. KGF Chapter 2 ರಿಲೀಸ್ ಡೇಟ್​ ಇವತ್ತು ಸಂಜೆ 6.32ಕ್ಕೆ ಅನೌನ್ಸ್​ ಆಗುತ್ತೆ’ ಅಂತ ಟ್ವೀಟ್​ ಮೂಲಕ ಹೇಳಿದ್ದಾರೆ. ಯಶ್​ ಬರ್ತ್​ಡೇ ದಿನ ರಿಲೀಸ್ ಆಗಿದ್ದ ಚಿತ್ರದ ಟೀಸರ್ ಭಾರಿ ಸದ್ದು ಮಾಡಿತ್ತು. ಯೂಟೂಬ್​ನಲ್ಲಿ 16 ಕೋಟಿಗೂ ಹೆಚ್ಚು ಜನ ಅದನ್ನ ನೋಡಿದ್ದಾರೆ. ಚಿತ್ರವು ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ.. ಅಂದ್ಹಾಗೆ ಫೆಬ್ರವರಿ 1ರಿಂದ ಚಿತ್ರಮಂದಿರಗಳಿಗೆ ಹೊಸ ಕೊರೋನಾ ಮಾರ್ಗಸೂಚಿ ಅನ್ವಯವಾಗಲಿದೆ. ಈ ಹಿಂದೆ ಥಿಯೇಟರ್​ಗಳಲ್ಲಿ 50 ಪರ್ಸೆಂಟ್​ನಷ್ಟು ಜನ ಮಾತ್ರ ಕೂರ್ಬೇಕು ಅಂತ ನಿಯಮವಿತ್ತು. ಆದ್ರೆ ಫೆಬ್ರವರಿ 1ರಿಂದ ಈ ನಿಯಮವನ್ನ ಸಡಿಲ ಮಾಡಲಾಗ್ತಿದ್ದು, ಥಿಯೇಟರ್​​ ಭರ್ತಿಗೆ ಅವಕಾಶ ನೀಡಲಾಗ್ತಿದೆ. ಕೆಜಿಎಫ್​-2 ಟೀಸರ್​ನಲ್ಲಿ ‘ಇನ್​ ಸಿನೆಮಾಸ್​ ಸೂನ್​’ (ಶೀಘ್ರದಲ್ಲೇ ಥಿಯೇಟರ್​ಗಳಲ್ಲಿ) ಅಂತ ತೋರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಥಿಯೇಟರ್​ ಭರ್ತಿಗೆ ಅವಕಾಶ ನೀಡ್ತಿರೋದ್ರಿಂದ ಚಿತ್ರತಂಡ ಉತ್ಸುಕವಾಗಿ ರಿಲೀಸ್ ಡೇಟ್​ ಅನೌನ್ಸ್ ಮಾಡೋಕೆ ಮುಂದಾದಂತೆ ಕಾಣ್ತಿದೆ.

https://twitter.com/prashanth_neel/status/1355010279931711488

-masthmagaa.com

Contact Us for Advertisement

Leave a Reply