‘ಕಿಚ್ಚ 46’ ಬಿಗ್‌ ಅಪ್‌ಡೇಟ್‌! ಮೂರು ಸಿನಿಮಾಗಳಲ್ಲಿ ಪುಲ್‌ ಬಿಜಿಯಾಗಿರುವ ಸುದೀಪ್..

mathmagaa.com:

ಸುದೀಪ್​ ನಟನೆಯ 46ನೇ ಚಿತ್ರದ ಕುರಿತು ತುಂಬಾ ಮೀಮ್ಸ್ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಇದೀಗ ಸ್ವತಃ ಸುದೀಪ್‌ ಅವರೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಬಿಗ್‌ ಅಪ್​ಡೇಟ್ ಕೊಟ್ಟಿದ್ದಾರೆ.
ಎಲ್ಲಾ ನನ್ನ ಸ್ನೇಹಿತರಿಗೆ ಬಿಗ್‌ ಹಲೋ..
ನೀವೆಲ್ಲರೂ ನನ್ನ ಮುಂದಿನ ಸಿನಿಮಾವನ್ನು ‘ಕಿಚ್ಚ 46’ ಎಂದು ಹೇಳಿ, ನೀವು ಟ್ವೀಟ್ಸ್​ ಮತ್ತು ಮೀಮ್ಸ್​ ಮಾಡುತ್ತಿರುವುದು ನನಗೆ ಸ್ಪೆಷಲ್​ ಎನಿಸುತ್ತದೆ, ಥ್ಯಾಂಕ್‌ ಯು. ಅದಕ್ಕಾಗಿ ನಿಮಗೆಲ್ಲರಿಗೂ ಒಂದು ಒಂದು ಚಿಕ್ಕದಾದ ಸ್ಪಷ್ಟಣೆ ಕೊಡುತ್ತಿದ್ದೇನೆ.
ನಾನು ಬ್ರೇಕ್​ ತೆಗೆದುಕೊಂಡೆ. ಇದು ನನ್ನ ಮೊದಲ ಬ್ರೇಕ್​. ಕೋವಿಡ್‌ ಸಮಯದಲ್ಲಿಯೂ ತುಂಬ ಶ್ರಮವಹಿಸಿ, ಬಹಳ ಸಮಯ ತೆಗೆದುಕೊಂಡು ವಿಕ್ರಾಂತ್​ ರೋಣ ಶೂಟಿಂಗ್​ ಮಾಡಿದ್ದರಿಂದ ಹಾಗೂ ಸತತವಾಗಿ ಬಿಗ್​ಬಾಸ್​ ಒಟಿಟಿ ಮತ್ತು ಟಿವಿ ಸೀಸನ್​ನಲ್ಲಿ ಪಾಲ್ಗೊಂಡಿದ್ದರಿಂದ ವಿಕ್ರಾಂತ್​ ರೋಣ ಸಿನಿಮಾ ಬಳಿಕ ಈ ಬ್ರೇಕ್​ನ ಅವಶ್ಯಕತೆ ಇತ್ತು. ಹಾಗೂ ಬ್ರೇಕ್‌ ಸಮಯದಲ್ಲಿ ನಾನು ನನಗೆ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಎಂಜಾಯ್‌ ಮಾಡುತ್ತೆನೆ.
ಕ್ರಿಕೆಟ್​ನಿಂದ ನನಗೆ ನಿಜವಾಗಿಯು ರಿಲ್ಯಾಕ್ಸ್​ ಸಿಗುತ್ತದೆ ಹಾಗೂ ಸಂತೋಷ ಕೊಡುತ್ತದೆ. ಕೆಸಿಸಿಯಲ್ಲಿ ತೊಡಗಿಕೊಂಡು ಸಮಯ ಕಳೆದಿದ್ದು ತುಂಬ ಖುಷಿ ನೀಡಿತು. ನಿಜವಾಗಿಯೂ ಇದು ಒಂದು ತುಂಬಾ ಒಳ್ಳೆಯ ಬ್ರೇಕ್‌ ಆಗಿತ್ತು, ಸಮಯ ಚೆನ್ನಾಗಿ ಕಳೆದೆ.

ಬ್ರೇಕ್​ನಲ್ಲಿ ಹೊಸ ಸ್ಕ್ರಿಪ್ಟ್​ ಬಗ್ಗೆ ಚರ್ಚೆ ಮತ್ತು ಮೀಟಿಂಗ್​ಗಳು ಪ್ರತಿದಿನದ ಕೆಲಸ ಆಗಿತ್ತು. ಮೂರು ಸ್ಕ್ರಿಪ್ಟ್​ಗಳನ್ನು ಫೈನಲ್​ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಫೈನಲ್‌ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್​ವರ್ಕ್​ ನಡೆಯುತ್ತಿದೆ. ಸಿನಿಮಾತಂಡದವರು ಹಗಲು-ರಾತ್ರಿ ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಅನೌನ್ಸ್​ ಮಾಡುತ್ತೇನೆ’
ಸಾಕಷ್ಟು ಪ್ರೀತಿ ಹಾಗೂ ಅಪ್ಪುಗೆಯೊಂದಿಗೆ ಕಿಚ್ಚಾ. ಎಂದು ಸುದೀಪ್‌ ಅವರು ಪೋಸ್ಟ್‌ ಮಾಡಿದ್ದಾರೆ.

-masthmagaa.com

 

Contact Us for Advertisement

Leave a Reply