ದಬಂಗ್-3ನಲ್ಲಿ ಸುದೀಪ್ ಲುಕ್ ಹೇಗಿದೆ..? ಸಲ್ಮಾನ್ ಖಾನ್ ಹೇಳಿದ್ದೇನು..?

ದಬಂಗ್ ಅಂದ್ರೆ ಚುಲ್‍ಬುಲ್ ಪಾಂಡೆ, ಚುಲ್‍ಬುಲ್ ಪಾಂಡೆ ಅಂದ್ರೆ ಸಲ್ಮಾನ್ ಖಾನ್.. ಯೆಸ್ ಸಲ್ಮಾನ್ ಖಾನ್ ಮತ್ತೊಮ್ಮೆ ಚುಲ್ ಬುಲ್ ಪಾಂಡೆಯಾಗಿ ಮಿಂಚಲು ರೆಡಿಯಾಗಿದ್ದಾರೆ. ಆದ್ರೆ ಇದರ ಇನ್ನೊಂದು ವಿಶೇಷ ಯಾಕಂದ್ರೆ ಇದ್ರಲ್ಲಿ ಕನ್ನಡದ ಕಿಚ್ಚ ಸುದೀಪ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚನ ಗೆಟಪ್ ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಸಲ್ಮಾನ್ ಖಾನ್ ತಮ್ಮ ಚುಲ್‍ಬುಲ್ ಪಾಂಡೆ ಅನ್ನೋ ಹೆಸರಿನ ಖಾತೆಯಲ್ಲಿ ದಬಾಂಗ್ ಲುಕ್ ರಿವೀಲ್ ಮಾಡಿದ್ದಾರೆ.

ರಗಡ್ ಲುಕ್‍ನಲ್ಲಿ ಕಿಚ್ಚ ಸುದೀಪ್ ಗುರಾಯಿಸುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ವಿಲನ್ ಎಷ್ಟೇ ದೊಡ್ಡದಾಗಿದ್ದರೂ ಹೋರಾಟದಲ್ಲೇ ಅಷ್ಟೇ ಮಜಾ ಬರುತ್ತೆ, ದಬಂಗ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರನ್ನು ಬಲ್ಲಿ ಪಾತ್ರದಲ್ಲಿ ತೆರೆ ಮೇಲೆ ತರಲಾಗುತ್ತಿದೆ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಇದು ಶೇರ್ ಆದ ಮೂರೇ ಗಂಟೆಗಳಲ್ಲಿ 22 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇನ್ನು ಈ ಟ್ವೀಟನ್ನು ಕಿಚ್ಚ ಸುದೀಪ್ ರೀಟ್ವೀಟ್ ಮಾಡಿದ್ದು, ಸಲ್ಮಾನ್ ಖಾನ್ ಗೆ ಧನ್ಯವಾದ ತಿಳಿಸಿದ್ದಾರೆ.

Contact Us for Advertisement

Leave a Reply