ತಮಿಳಿನ ಬಿಗ್ ಬ್ಯಾನರ್ ಜೊತೆ ಕಿಚ್ಚನ ಸಿನಿಮಾ ಫಿಕ್ಸ್: ಪ್ರೋಮೋ ವೈರಲ್!

masthmagaa.com:

ಸುದೀಪ್‌ ಅವರ 46ನೇ ಚಿತ್ರಕ್ಕೆ ಅವರ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ರು. ವಿಕ್ರಾಂತ್‌ ರೋಣ ಸಿನಿಮಾ ಆದಮೇಲೆ ಸುದೀಪ್‌ ಯಾವ ಸಿನಿಮಾಗೂ ಸಹಿ ಹಾಕಿರಲಿಲ್ಲ. ಸಿಸಿಎಲ್​ ಮತ್ತು ಕೆಸಿಸಿನಲ್ಲಿ ಬ್ಯುಸಿ ಆಗಿಬಿಟ್ಟಿದ್ರು. ನಂತರ ಬಿಜೆಪಿ ಪರವಾಗಿ ರಾಜ್ಯಾದ್ಯಂತ ಕ್ಯಾಂಪೇನ್​ ಮಾಡೋದ್ರಲ್ಲಿ ಬ್ಯುಸಿ ಆದ್ರು. ಹಾಗಾಗಿ ಅವರ ನೆಕ್ಸ್ಟ್‌ ಸಿನಿಮಾದ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯ್ತಾ ಇದ್ರು. ಈಗ ಸುದೀಪ್‌ ಅವರ 46ನೇ ಸಿನಿಮಾಗೆ ಮುಹೂರ್ತ ಕೂಡಿಬಂದಿದೆ.

ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ. ‘ವಿ ಕ್ರಿಯೇಷನ್ಸ್​’ ಮೂಲಕ ಅವರ ಹೊಸ ಸಿನಿಮಾ ರೆಡಿ ಆಗಲಿದೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ‘ವಿ ಕ್ರಿಯೇಷನ್ಸ್​’ ನಿರ್ಮಾಣ ಮಾಡಿದೆ. ಅಂತಹ ದೊಡ್ಡ ಬ್ಯಾನರ್​ ಜೊತೆ ಸುದೀಪ್​ ಅವರು ಸಿನಿಮಾ ಮಾಡ್ತಾ ಇರೋದು ವಿಶೇಷ. ಇನ್ನೂ ಈ ವಿ ಕ್ರಿಯೇಷನ್ಸ್‌ನ ಸಂಸ್ಥಾಪಕ ಕಲೈಪುಲಿ ಎಸ್​. ಥನು ಅವರು ತಮ್ಮ ಯ್ಯುಟ್ಯುಬ್‌ ಚಾನೆಲ್‌ನಲ್ಲಿ “ಬಾದ್‌ಶಾ ಕಿಚ್ಚ ಸುದೀಪ್‌ ಜೊತೆ ಕೆಲಸ ಮಾಡ್ತಾ ಇರೋದಕ್ಕೆ ಖುಷಿ ಆಗ್ತಾ ಇದೆ. ಹೆಚ್ಚಿನ ಅಪ್‌ಡೇಟ್‌ಗಾಗಿ ಕಾಯ್ತಾಇರಿ, #ಕಿಚ್ಚ46” ಅಂತ ಬರೆದು ವಿಡಿಯೋ ಒಂದನ್ನ ಶೇರ್‌ ಮಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply