ಅಮೆರಿಕದ ಜೊತೆ ದೀರ್ಘಾವಧಿಯ ಸಂಘರ್ಷಕ್ಕೆ ಕಿಮ್ ಸಿದ್ಧತೆ!

masthmagaa.com:

ಒಂದ್ಕಡೆ ರಷ್ಯಾ ಮತ್ತು ಚೀನಾ ಜೊತೆಗೆ ಸಂಘರ್ಷ ಎದುರಿಸ್ತಿರೋ ಅಮೆರಿಕಕ್ಕೆ ಉತ್ತರ ಕೊರಿಯಾ ಕೂಡ ದೊಡ್ಡ ಸಂಕಷ್ಟವಾಗಿ ಕಾಡೋ ಎಲ್ಲಾ ಲಕ್ಷಣ ಕಾಣ್ತಿದೆ. ಯೆಸ್, ಹೊಸ ವರ್ಷ ಬಂದಲ್ಲಿಂದ ಒಂದಾದ್ಮೇಲೆ ಒಂದರಂತೆ ಹೈಪರ್​ಸಾನಿಕ್ ಕ್ಷಿಪಣಿಗಳ ಪರೀಕ್ಷೆ ನಡೆಸ್ತಾನೇ ಇದೆ. ಇದೀಗ ಉತ್ತರ ಕೊರಿಯಾ ಈ ಮೂಲಕ ಅಮೆರಿಕದ ಜೊತೆ ದೀರ್ಘಾವಧಿಯ ಸಂಘರ್ಷಕ್ಕೆ ಸಿದ್ಧತೆ ಮಾಡ್ಕೊಳ್ತಿದೆ ಅಂತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀ ನಿರ್ಬಂಧದ ಜೊತೆಗೆ ಕೊರೋನಾ ಹಿನ್ನೆಲೆಯಲ್ಲಿ ತನ್ನ ಗಡಿಯನ್ನು ತಾನೇ ಮುಚ್ಚಿಕೊಂಡಿರೋ ಉತ್ತರ ಕೊರಿಯಾ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಇದ್ರ ನಡುವೆಯೂ ಅಮೆರಿಕ ಮಾತುಕತೆಗೆ ಬನ್ನಿ ಅಂತ ಕರೆದ್ರೂ ಬರದೇ ಮಿಲಿಟರಿಯನ್ನು ಅಭಿವೃದ್ಧಿಪಡಿಸ್ತಿದೆ. ಇತ್ತೀಚೆಗೆ ನಡೆದ ಆಡಳಿತ ಪಕ್ಷದ ಸೆಂಟ್ರಲ್ ಕಮಿಟಿಯ ಪಾಲಿಟ್​ಬ್ಯೂರೋ ಸಭೆಯಲ್ಲಿ ಈಗಾಗಲೇ ಸ್ಥಗಿತಗೊಂಡಿರೋ ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ಮತ್ತು ಪರಮಾಣು ಕ್ಷಿಪಣಿಗಳ ಅಭಿವೃದ್ದಿಗೆ ಇರೋ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಮೆರಿಕದ ನಿರ್ಬಂಧ ನೀತಿ ಮತ್ತು ಮಿಲಿಟರಿ ಅಪಾಯ ಡೇಂಜರ್ ಲೈನ್ ಕ್ರಾನ್ ಮಾಡಿದೆ. ಇದನ್ನ ಇನ್ಮುಂದೆ ನಿರ್ಲಕ್ಷ್ಯ ಮಾಡಕ್ಕೂ ಆಗಲ್ಲ ಅಂತ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಜೊತೆಗೆ ಪಾಲಿಟ್​ಬ್ಯೂರೋ ಸಭೆಯಲ್ಲಿ ದೇಶದ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ರು. ಈ ವೇಳೆ ಮಾತಾಡಿದ ಕಿಮ್ಮಣ್ಣ, ಭವಿಷ್ಯದಲ್ಲಿ ಅಮೆರಿಕದ ಕ್ರಮಗಳಿಗೆ ಟಕ್ಕರ್ ಕೊಡುವಂತ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತಾಡಿದ್ದಾರೆ ಅಂತ ಕೂಡ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply