ಕ್ಷಿಪಣಿ ಪರೀಕ್ಷೆ ಜಾಗದಲ್ಲಿ ಮತ್ತೆ ಪ್ರತ್ಯಕ್ಷವಾದ ಕಿಮ್‌ ಜಾಂಗ್‌ ಉನ್‌ ಮಗಳು!

masthmagaa.com:

ಕ್ಷಿಪಣಿ ಪ್ರಿಯ, ಉತ್ತರ ಕೊರಿಯಾ ಸರ್ವಾಧಿಕಾರಿ, ಕಿಮ್‌ ಜಾಂಗ್‌ ಉನ್‌ರ ಮಗಳು ಎರಡನೇ ಬಾರಿಗೂ ಪಬ್ಲಿಕ್‌ ಆಗಿ ಕಾಣಿಸಿಕೊಂಡಿದ್ದಾಳೆ. ಹ್ವಾಸಾಂಗ್ -17 ಹೆಸರಿನ ಕ್ಷಿಪಣಿ ಉಡಾವಣೆಯ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ಸೈನಿಕರು ಇನ್ನಿತರ ಕೆಲ ಅಧಿಕಾರಿಗಳು ಇದ್ರು. ಈ ಕಾರ್ಯಕ್ರಮದಲ್ಲಿ ಕಿಮ್‌ ಜಾಂಗ್‌ ಉನ್‌ರ ಜೊತೆಗೆ ಅವರ ಮಗಳು ಕೂಡ ಪ್ರತ್ಯಕ್ಷವಾಗಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ ಕೂಡ ಇದೇ ರೀತಿ ಕ್ಷಿಪಣಿ ಕಾರ್ಯಕ್ರಮದಲ್ಲೇ ಅಪ್ಪನ ಜೊತೆಗೆ ಹೆಜ್ಜೆಹಾಕಿದ್ಲು ಈಕೆ. ಇದೀಗ ಪದೇ ಪದೇ ಈ ರೀತಿಯ ಕ್ಷಿಪಣಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರೋದನ್ನ ನೋಡಿದ್ರೆ, ಕಿಮ್‌ ತಮ್ಮ ಉತ್ತಾರಾಧಿಕಾರತ್ವವನ್ನ ಈಕೆಗೆ ಕೊಡಬೋದು. ಅದಕ್ಕಾಗಿ ಈ ತರಬೇತಿ ಕೊಡೋಕೆ ಶುರು ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಅಂದಹಾಗೆ ಇವಳ ಹೆಸರನ್ನ ಎಲ್ಲೂ ಕೂಡ ಅಧಿಕೃತವಾಗಿ ಪಬ್ಲಿಕ್‌ ಮಾಡಿಲ್ಲ. ಆದ್ರೆ ಕೆಲ ಮೂಲಗಳ ಪ್ರಕಾರ, ಸೌತ್‌ ಕೊರಿಯಾದ ಇಂಟಲಿಜೆನ್ಸ್‌ ಮಾಹಿತಿಗಳ ಪ್ರಕಾರ ಈಕೆಯ ಹೆಸರು, kim ju-ae ಅಂತಲೂ. ಇವಳಿಗೆ 10 ವರ್ಷ ವಯಸ್ಸು ಅಂತಲೂ ಹೇಳಲಾಗ್ತಿದೆ. ಕಿಮ್‌ ಈ ರೀತಿ 10 ವರ್ಷದ ಮಗಳನ್ನ ಕೂಡ ಕ್ಷಿಪಣಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗ್ತಿರೋದು ನಿಜಕ್ಕೂ ಆತನ ಬಗ್ಗೆ ಇರೋ ಕುತೂಹಲವನ್ನ ಮತ್ತಷ್ಟು ಜಾಸ್ತಿ ಮಾಡಿದೆ ಅನ್ನೋದಂತೂ ಸುಳ್ಳಲ್ಲ. ಮಗಳನ್ನ ನಿಜವಾಗಿಯೂ ಉತ್ತರಾಧಿಕಾರತ್ವದ ತರಬೇತಿಗೆ ಕರೆದುಕೊಂಡು ಹೋಗ್ತಿದ್ದಾರಾ, ಅಥವಾ ಕ್ಷಿಪಣಿ ಪರೀಕ್ಷೆಯನ್ನ ದೀಪಾವಳಿ ರಾಕೆಟ್‌ ಅನ್ನೊಂಡು ಮಗಳಿಗೆ ತೋರ್ಸೋಕೆ ಕರೆದುಕೊಂಡು ಹೋಗ್ತಿದ್ದಾರಾ? ಅಥವಾ exhibition ಅನ್ಕೊಂಡಿದ್ದಾರಾ ಅದು ಮಾತ್ರ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply