ವಿವಾದಕ್ಕೀಡಾದ ಕಾಮನ್‌ವೆಲ್ತ್‌ ಗೇಮ್ಸ್‌ನ ಮಹಿಳೆಯರ ಕ್ರಿಕೆಟ್‌ ಫೈನಲ್‌! ಯಾಕೆ?

masthmagaa.com:

ನಿನ್ನೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನ ಕ್ರಿಕೆಟ್‌ ಫೈನಲ್‌ ಪಂದ್ಯ ವಿವಾದಕ್ಕೆ ಗುರಿಯಾಗಿದೆ. ಭಾರತದ ವಿರುದ್ದ ಆಡೋಕೆ ಬಂದಿದ್ದ ಆಸ್ಟ್ರೇಲಿಯಾದ ಆಟಗಾರ್ತಿ ತಹ್ಲಿಯಾ ಮಕ್‌ಗ್ರಾಥ್‌ ಕೋವಿಡ್‌ ಪಾಸಿಟಿವ್‌ ಬಂದಿದ್ರೂ ಅವರು ಮೈದಾನಕ್ಕೆ ಬಂದು ಆಟ ಆಡಿದ್ದಾರೆ ಅಂತ ವರದಿಯಾಗಿದೆ. ಈ ರೀತಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿರೋ ಆಟಗಾರ್ತಿ ವಿರುದ್ದ ಭಾರಿ ಆಕ್ರೋಶ ಕೇಳಿಬರ್ತಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಮಾಡಿದ ಮಕ್‌ಗ್ರಾಥ್‌, ಕನಿಷ್ಠ ಪಕ್ಷ ಮಾಸ್ಕ್‌ ಕೂಡ ಧರಿಸಿದ್ದಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಅನೇಕರು, ಪ್ರಸಿದ್ದ ಟೆನ್ನಿಸ್‌ ಆಟಗಾರ ನೋವಾಕ್‌ ಜೋಕೊವಿಕ್‌ ಕೋವಿಡ್‌ ಲಸಿಕೆ ಹಾಕಿಸಿಲ್ಲ ಅಂತ ಅವರನ್ನ ಆಟದಿಂದ ಬ್ಯಾನ್‌ ಮಾಡಿದ್ದ ದೇಶ ಆಸ್ಟ್ರೇಲಿಯಾ. ಈಗ ಅವರ ದೇಶದ ಆಟಗಾರ್ತಿ ಕೋವಿಡ್‌ ಇದ್ದರೂ ಆಟವಾಡಿದ್ದಾರೆ. ಇದು ಸರೀನಾ, ICC ರೂಲ್‌ ಪ್ರಕಾರ ಇದಕ್ಕೆ ಒಪ್ಪಿಗೆ ಇದೆಯಾ? ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply