ಸತ್ಯಂ, ಶಿವಂ, ಭೂತಂ (Ghost): ಕೋಟಿಗೊಬ್ಬ 3 ಸಿನಿಮಾ ವಿಮರ್ಶೆ!

masthmagaa.com:

ಕೋಟಿಗೊಬ್ಬ ಫ್ರಾಂಚೈಸ್ ಮೂರನೇ ಭಾಗದವರೆಗೂ ಬಂದಿರೋದಕ್ಕೆ ಪ್ರಮುಖ ಕಾರಣನೆ 2001 ರಲ್ಲಿ ವಿಷ್ಣುವರ್ಧನ್ ಅವರ ಅಭಿನಯದಲ್ಲಿ ಬಿಡುಗಡೆ ಆದ ಕೋಟಿಗೊಬ್ಬ ಸಿನಿಮಾ. ಸೋ ವಿಷ್ಣುವರ್ಧನ್ ಅವರನ್ನ ನೆನಪಿಸಿಕೊಳ್ಳದೆ ಕೋಟಿಗೊಬ್ಬ 3 ಸಿನಿಮಾದ ರಿವ್ಯೂ
ಸಂಪೂರ್ಣ ಆಗಲ್ಲ. ವಿಷ್ಣುವರ್ಧನ ಅಭಿನಯದ ಕೋಟಿಗೊಬ್ಬ ಮತ್ತು ಸುದೀಪ್ ರ ಕೋಟಿಗೊಬ್ಬ 2 ಸಿನಿಮಾದ ನಾಯಕ ದುಡ್ಡನ್ನ ಕೊಳ್ಳೆ ಹೊಡೆಯೋದು   ಕಳ್ಳ ಹಣ ಅಥವಾ ಬ್ಲಾಕ್ ಮನಿ ಮಾತ್ರ ಅನ್ನೋದು
ಕಾಮನ್ ಅಜೆಂಡಾ, ಇದು ಕೋಟಿಗೊಬ್ಬ 3 ನಲ್ಲೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದಿದೆ.
ಬಶೀರ್ ಭೈ ಅನ್ನೋ ಲೋಕಲ್ ಸ್ಮಗ್ಲರ್ ಅನ್ನ ಹಿಡಿಯೋಕೆ ಪೊಲೀಸರಿಗೆ ಸಹಾಯ ಮಾಡುವ ಸತ್ಯ ತನ್ನ ಹಳೇ ಚಾಳಿಯನ್ನ ಇನ್ನೂ ಬಿಟ್ಟಿಲ್ಲ, ಸೋ ಅದಕ್ಕೇನೆ ಕೋಟಿಗೊಬ್ಬ 2 ನಲ್ಲಿ ಇರುವ ಪ್ರೇಯಸಿ ನಿತ್ಯ ಮೆನನ್ ಕೂಡ ಇಲ್ಲಿ ಸತ್ಯನ ಜೊತೆಗೆ ಇಲ್ಲ ಅಂತ ಅಂದುಕೊಬಹುದು. ಆದ್ರೇ ಈ ಸತ್ಯ ಪೊಲೀಸ್ ಕಮಿಷನರ್ ಸೋಮಶೇಖರ್ ಅಲಿಯಾಸ್ ದೊಡ್ಡಣ್ಣ ಅವರಿಗೆ ಹೇಗೆ ಆಪ್ತ ಅಂತ ಗೊತ್ತಾಗಬೇಕು ಅಂದ್ರೆ ನೀವು ಸಿನಿಮಾನ ಥೇಟರ್ ನಲ್ಲೇ ನೋಡಬೇಕು. ಬೆಂಗಳೂರಿನ ಆಶ್ರಮದಿಂದ ಜಾನು ಎಂಬ ಹುಡುಗಿಯ ಟ್ರೀಟ್ಮೆಂಟ್ ಗಾಗಿ ಪೋಲಾಂಡ್ ಗೆ ಶಿಫ್ಟ್ ಆಗುವ ಕಥೆ ಕೊನೆಗೆ ಒಂದು ರಿವೆಂಜ್ ಸಾಗ ಆಗಿ ಬದಲಾಗುತ್ತೆ. ಪೋಲಾಂಡ್ ನ ಮ್ಯೂಸಿಯಂ ನಲ್ಲಿ 750 ಮಿಲಿಯನ್ ಯೂರೋ ಮೊತ್ತದ ಕ್ರೌನ್ ಜ್ಯುವೆಲ್ ಕಳ್ಳತನ ಮಾಡಿದಮೇಲೆ ಘೋಸ್ಟ್ ಹೇಳೋ ಸಂಸ್ಕೃತದ ಶ್ಲೋಕದಲ್ಲಿ ಇಡೀ ಸಿನಿಮಾದ ಕಥೆ ಅಡಗಿದೆ.
ಸತ್ಯ ಆಗಿ, ಶಿವ ಆಗಿ, ಘೋಸ್ಟ್ ಆಗಿ ಕಿಚ್ಚ ಸುದೀಪ್ ತೆರೆಯನ್ನ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ.
ನಾಯಕಿ ಮಡೋನ್ನ ಗೆ ಹೆಚ್ಚು ಪರ್ಫಾರ್ಮ್ ಮಾಡೋಕೆ ಅವಕಾಶ ಸಿಕ್ಕಿಲ್ಲ ಹಾಗಾಗಿ ಸಿಕ್ಕಿರೋ ಸ್ಪೇಸ್ ಅಲ್ಲೇ ಚೆನ್ನಾಗಿ ಅಭಿನಯಿಸಿದ್ದಾರೆ. ಕೋಟಿಗೊಬ್ಬ 2 ನ ಕ್ಲೈಮ್ಯಾಕ್ಸ್ ನಲ್ಲಿ ನಿನ್ನನ್ನ ಮಾತ್ರ ಬಿಡಲ್ಲ ಕಣೋ ಶಿವ ಅಂತ ಹೇಳಿ ಜೈಲಿಗೆ ಹೋದ ಎಸಿಪಿ ಕಿಶೋರ್ ಅಲಿಯಾಸ್ ರವಿಶಂಕರ್ ಪಾತ್ರವನ್ನ ಈ ಸಿನಿಮಾದಲ್ಲೂ ಮುಂದುವರೆಸಿದ್ದು ಸಿನಿಮಾದ ಬಿಗ್ಗೆಸ್ಟ್ ಹೈಲೈಟ್.
ಇಂಟರ್ವಲ್ ಬಳಿಕ ಬರೋ ಸುದೀಪ್ ರವಿಶಂಕರ್ ಜುಗಲ್ಬಂದಿ ಶಿಳ್ಳೆ, ನಗು, ಎಲ್ಲಾನೂ ಒಟ್ಟೊಟ್ಟಿಗೆ ತರಸತ್ತೆ, ಸಿನಿಮಾದ ಪ್ರೀ ಇಂಟರ್ವಲ್ ಫೈಟ್ ಆಗಿ ತನಕ ಇವನು ಸತ್ಯನ, ಶಿವನ ಅಥವಾ ಇನ್ನೊಬ್ಬನ ಅನ್ನೋ ಗೊಂದಲ ರವಿಶಂಕರ್ ಜೊತೆಗೆ ನಮಗೂ ಆಗೊಥರ ಮಾಡಿರುವ ಚಿತ್ರದ ರೈಟಿಂಗ್ ಸ್ಮಾರ್ಟ್ ಆಗಿದೆ. ಕೋಟಿಗೊಬ್ಬ 2 ನ 2nd ಹಾಫ್ ನಲ್ಲಿ ಬರುವ ಎಮೋಷನಲ್ ಕೋಶಂಟ್ ಪ್ರಕಾಶ ರೈ ಆದ್ರೆ ಈ ಸಿನಿಮಾದಲ್ಲಿ ಅಭಿರಾಮಿ ಅವರು ಆ ಸ್ಥಾನವನ್ನು ತುಂಬಿದ್ದಾರೆ. ಹಾಗೆ ಇದು ಸಿನಿಮಾದ ಸರ್ಪ್ರೈಸ್ ಎಲಿಮೆಂಟ್ ಕೂಡ ಹೌದು, ಹಾಗೆ ಈ ಪಾತ್ರವನ್ನ ಬಳಸಿಕೊಂಡಿರುವ ರೀತಿ ಮತ್ತೆ ಆ ಹಾಡು ಎರಡು ಚೆನ್ನಾಗಿದೆ.
ಚಿತ್ರದ ಕಥೆ ಅಥವಾ ನಾಟ್ ಕಿಚ್ಚ ಸುದೀಪ್ ಅವರದೇ. Kotigobba 2 ಸಿನಿಮಾ ನೋಡಿರುವ ನಿರ್ದೇಶಕ ಶಿವ ಕಾರ್ತಿಕ್ 2 ನಲ್ಲಿ ಇದ್ದ ಎಲ್ಲಾ ಪಾಸಿಟಿವ್ ಅಂಶಗಳನ್ನ ಇಲ್ಲಿ ಡಬ್ಬಲ್ ಡೋಸ್ ಅಲ್ಲಿ ಕೊಟ್ಟಿದ್ದಾರೆ. ತಬಲಾ ನಾಣಿ, ಓಂ ಪ್ರಕಾಶ್ ರಾವ್ ಮತ್ತು ಶೋಬರಾಜ್ ಚಿತ್ರದ ಕಾಮಿಕ್ ಡೋಸ್ ಅಂದ್ರೆ ತಪ್ಪಾಗಲ್ಲ. ಆದ್ರೆ ರಂಗಾಯಣ ರಘು ಅವರನ್ನ ಇನ್ನೂ ಚೆನ್ನಾಗಿ ಬಳಸಿಕೊಬಹುದಿತ್ತು ಅಂತ ಅನ್ನಿಸ್ತು. ಪೋಲಾಂಡ್ ಇಂಟರ್ ಪೋಲ್ ನ ಪೊಲೀಸ್ ಆಗಿ ಅಫ್ತಾಬ್ ಶಿವ ದಾಸನಿ ಮತ್ತು ಅವರ ಅಸಿಸ್ಟಂಟ್ ಶ್ರದ್ಧಾ ದಾಸ್ ಕನ್ವಿಂಸಿಂಗ್ ಆಗಿದ್ರು. ಕ್ರೌನ್ ಜ್ಯುವೆಲರಿ ರಾಬರಿ ಸೀನು, ಕಾರ್ ಚೇಸು ಫೈಟ್ ಗಳಿಗೆ ಹೆಸರಿಗೆ ತಕ್ಕ ಹಾಗೆ ಕೋಟಿ ಕೋಟಿ ಕರ್ಚು ಮಾಡಿರೋದು ಸ್ಕ್ರೀನ್ ಮೇಲೆ ಕಾಣುತ್ತೆ ಹಾಗೆ ಪ್ರೊಡಕ್ಷನ್ ವಾಲ್ಯೂಸ್ ಕೂಡ ಟಾಪ್ ನಾಚ್.ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಮತ್ತು ರಿ ರೆಕಾರ್ಡಿಂಗ್ ಗೆ ಒಂದು ಹಾಟ್ಸ್ ಆಫ್.
ಚಿತ್ರದ ಕೊನೇಲಿ ಇವನು ಶಿವನ, ಸತ್ಯನ ಅತವ ಇನ್ನೋಬನ ಅನ್ನೋ ಕನ್ಫ್ಯೂಷನ್ ಗೆ ಖಂಡಿತವಾಗಲೂ ಸಿಗತ್ತೆ ಅದನ್ನ ಅಷ್ಟೇ ಚೆನ್ನಾಗಿ ತೋರಿಸಿರುವ ನಿರ್ದೇಶಕ ಶಿವ ಕಾರ್ತಿಕ್ ತಮ್ಮ ಮೋದಲ್ನೆ ಪ್ರಯತ್ನದಲ್ಲಿ ಗೆದ್ದಿದ್ದಾರೆ.
ಕೋಟಿಗೊಬ್ಬ 3 ಗೆ ಮಸ್ತ್ ಮಗಾ ಕೊಡುವ ರೇಟಿಂಗ್ 10 ಕ್ಕೆ 7.5
https://youtu.be/RlHqqT0h7LU
-masthmagaa.com
Contact Us for Advertisement

Leave a Reply