ಮತ್ತೆ ನೇಪಾಳ ಪ್ರಧಾನಿಯಾಗಿದ್ದು ಹೇಗೆ ಕೆಪಿ ಶರ್ಮಾ ಒಲಿ?

masthmagaa.com:

ಖಡ್ಗ ಪ್ರಸಾದ್​​ ಶರ್ಮಾ ಒಲಿ ಅಂದ್ರೆ ಕೆಪಿ ಶರ್ಮಾ ಒಲಿ ಮತ್ತೆ ನೇಪಾಳ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಸಂಸತ್​ನಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಒಲಿ ವಿಫಲರಾಗಿ, 3 ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ರು. ನಂತರದಲ್ಲಿ ವಿಪಕ್ಷಗಳಿಗೆ ಸರ್ಕಾರ ರಚನೆಗೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಆಹ್ವಾನ ನೀಡಿದ್ರು. ಗುರುವಾರ ರಾತ್ರಿ 9 ಗಂಟೆವರೆಗೆ ಸಮಯ ಕೂಡ ನೀಡಿದ್ರು. ಆದ್ರೆ ನೇಪಾಳದಲ್ಲಿ ಉಳಿದ ಪಕ್ಷಗಳು ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಲು ಮುಂದೆ ಬರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಹೌಸ್ ಆಫ್ ರೆಪ್ರೆಸೆಂಟಿಟಿವ್​ನಲ್ಲಿ ಅತಿದೊಡ್ಡ ಪಕ್ಷವಾಗಿರೋ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳದ ಮುಖ್ಯಸ್ಥ 69 ವರ್ಷದ ಕೆಪಿ ಶರ್ಮಾ ಒಲಿಯವರನ್ನೇ ಮತ್ತೆ ಪ್ರದಾನಿಯಾಗಿ ಆಯ್ಕೆ ಮಾಡಲಾಗಿದೆ. ಸಂವಿಧಾನದ ಆರ್ಟಿಕಲ್ 78(3)ರ ಅಡಿಯಲ್ಲಿ ಈ ನಿರ್ಧಾರ ಕೈಗೊಂಡಿರೋದಾಗಿ ಬಿದ್ಯಾ ದೇವಿ ಭಂಡಾರಿ ಹೇಳಿದ್ದಾರೆ. ಇಂದು ಶೀತಲ್ ನಿವಾಸದಲ್ಲಿ ರಾಷ್ಟ್ರಪತಿ ಹೊಸ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಪ್ರಮಾಣ ವಚನ ಬೋಧಿಸಲಿದ್ಧಾರೆ. ಇನ್ನು ಮುಂದಿನ 1 ತಿಂಗಳ ಒಳಗಾಗಿ ಕೆಪಿ ಶರ್ಮಾ ಒಲಿ ಮತ್ತೆ ಸಂಸತ್​ನಲ್ಲಿ ಬಹುಮತ ಸಾಬೀತುಪಡಿಸಬೇಕಾಗುತ್ತೆ. ಒಂದ್ವೇಳೆ ಮತ್ತೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ್ರೆ ಸರ್ಕಾರ ವಿಸರ್ಜನೆಯಾಗಿ, ದೇಶದಲ್ಲಿ ಚುನಾವಣೆ ನಡೆಯಲಿದೆ. ಅಂದಹಾಗೆ ನೇಪಾಳ ಹೌಸ್​​​ ಆಫ್ ರೆಪ್ರೆಸೆಂಟಿಟಿವ್​ನಲ್ಲಿ ಸದ್ಯ 271 ಸದಸ್ಯರಿದ್ದು, ಬಹುಮತ ಸಾಬೀತಿಗೆ 136 ಸದಸ್ಯರ ಬೆಂಬಲ ಬೇಕು. ಅದ್ರಲ್ಲಿ ಕೆಪಿ ಶರ್ಮಾ ಒಲಿಯದ್ದು ದೊಡ್ಡ ಪಕ್ಷವಾಗಿದ್ದು121 ಸ್ಥಾನಗಳನ್ನು ಹೊಂದಿದೆ. ಅಂದಹಾಗೆ ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೆಬುವಾ ನೇಪಾಳ ಕಮ್ಯೂನಿಸ್ಟ್​ ಪಾರ್ಟಿಯ ಮಾವೋಯಿಸ್ಟ್​​​​ ಸೆಂಟರ್ ಅಂದ್ರೆ ಸಿಪಿಎನ್-ಎಂಸಿನ ಪುಷ್ಪಕಮಲ್ ದಹಲ್ ಪ್ರಚಂಡ ಮತ್ತು ಜನತಾ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಕುದುರಿಸಿದ್ರು. ಪ್ರಚಂಡ ಬಳಿ 49 ಸ್ಥಾನ ಇದ್ರೆ, ಜನತಾ ಸಮಾಜವಾದಿ ಪಕ್ಷದ ಬಳಿ 32 ಸ್ಥಾನ ಇತ್ತು. ಆದ್ರೆ ಜನತಾ ಸಮಾಜವಾದಿ ಪಕ್ಷದಲ್ಲಿ ಎರಡು ಬಣ ಇದ್ದು, ಒಂದು ಬಣ ಮಾತ್ರ ದೆಬುವಾಗೆ ಬೆಂಬಲ ನೀಡ್ತು. ಇದ್ರಿಂದ ದೆಬುವಾಗೆ 125ಕ್ಕಿಂತ ಹೆಚ್ಚು ಜನರ ಬೆಂಬಲ ಸಿಗಲಿಲ್ಲ.. ಸೋ.. ಒಲಿ ಕೈಜಾರಿದ್ದ ಲಡ್ಡು, ಎಲ್ಲೆಲ್ಲೋ ತಿರುಗಾಡಿ ಮತ್ತೆ ಒಲಿ ಬಾಯಿಗೇ ಬಂದು ಬಿದ್ದಿದೆ.

-masthmagaa.com

Contact Us for Advertisement

Leave a Reply