ರಮೇಶ್ ಆತ್ಮಹತ್ಯೆ.. ಕೆಪಿಸಿಸಿ ಕೆಂಡಾಮಂಡಲ..!

ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆಗೆ ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಕಾಂಗ್ರೆಸ್, ಸಿದ್ದಾರ್ಥ್ ಬಳಿಕ ಆದಾಯ ತೆರಿಗೆ ಇಲಾಖೆಯ ಅಮಾನವೀಯ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಬಿಜೆಪಿಯವರಿಂದ ನಿಯಂತ್ರಣಕ್ಕೆ ಒಳಗಾಗಿರುವ ಐಟಿ ಅಧಿಕಾರಿಗಳು ರಮೇಶ್ ಜೀವವನ್ನು ಪಡೆದಿದ್ದಾರೆ. ಈ ಸಾವು ನ್ಯಾಯವೇ ಎಂದು ರಾಜ್ಯದ ಜನ ಬಿಜೆಪಿ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಖಂಡನೀಯ ಎಂದು ಕೆಂಡಕಾರಿದೆ.

ಜೊತೆಗೆ ರಮೇಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ. ಅವರ ಕುಟುಂಬದವರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ ಅಂತ ಕೆಪಿಸಿಸಿ ಟ್ವೀಟ್ ಮಾಡಿದೆ.

Contact Us for Advertisement

Leave a Reply