ಕೆಪಿಎಲ್‍ನಲ್ಲೂ ಬೆಟ್ಟಿಂಗ್..! 50 ಕೋಟಿಯ ದಂಧೆ..!

ಕೆಪಿಎಲ್ ಅಂದ್ರೆ ಕರ್ನಾಟಕ ಪ್ರೀಮಿಯರ್ ಲೀಗ್‍ನಲ್ಲೂ ಬೆಟ್ಟಿಂಗ್ ದಂಧೆ ಜೋರಾಗಿದೆ. ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಮುಷ್ತಾಕ್ ಅಲಿಯನ್ನು ಬಂಧಿಸಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ವಿಚಾರಣೆ ವೇಳೆ ಇಬ್ಬರು ಅಂತಾರಾಷ್ಟ್ರೀಯ ಮಾಜಿ ಆಟಗಾರರೂ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವಿಚಾರ ರಣಜಿ ಆಟಗಾರರಿಗೂ ತಿಳಿದಿತ್ತು. ಆದ್ರೆ ಅವರು ಏನನ್ನೂ ಹೇಳಿಕೊಳ್ಳಲು ಆಗದ ಸ್ಥಿತಿಯಲ್ಲಿದ್ದರು ಅಂತ ತಿಳಿದುಬಂದಿದೆ. ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದ ಆಟಗಾರರರಿಗೆ ಇಂದಿರಾನಗರದ ಅಪಾರ್ಟ್‍ಮೆಂಟ್‍ನಲ್ಲಿ ವ್ಯವಸ್ಥೆ ಕಲ್ಪಿಸುತ್ತಿದ್ದ ಮುಷ್ತಾಕ್ ಅಲಿ, ಸುಮಾರು 50 ಕೋಟಿ ರೂಪಾಯಿಯ ದಂಧೆ ನಡೆಸುತ್ತಿದ್ದ. 2-3 ವರ್ಷಗಳಿಂದ ಈ ದಂಧೆ ನಡೆಸ್ತಿರುವ ಅಲಿ, ಪಂದ್ಯ ಆರಂಭಕ್ಕೂ ಮುನ್ನ ಆಟಗಾರರನ್ನು ಸಂಪರ್ಕಿಸುತ್ತಿದ್ದ. ಅಲಿ ಟೂರ್ಸ್ ಅಂಡ್ ಟ್ರವೆಲ್ಸ್ ಹೊಂದಿರೋ ಈತ ದುಬೈನಲ್ಲೂ ಕಚೇರಿ ಹೊಂದಿದ್ದಾನೆ.

Contact Us for Advertisement

Leave a Reply