ರಾಜ್ಯದಲ್ಲಿ ಭುಗಿಲೆದ್ದ ಜಾತಿ ರಾಜಕೀಯ! ಹೆಚ್.ಡಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ!

masthmagaa.com:

2023ರ ರಾಜ್ಯ ಚುನಾವಣಾ ಮಹಾಸಮರದ ಹೊಸ್ತಿಲಲ್ಲಿ ಹೆಚ್.ಡಿ ಕುಮಾರಸ್ವಾಮಿ ಈಗ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲ್ಯಾನ್ ಮಾಡಿದೆ ಅಂತ ಕುಮಾರಸ್ವಾಮಿ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ನಿನ್ನೆ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಜೆಡಿಎಸ್‌, ಪಂಚರತ್ನ ಯಾತ್ರೆ ಬದಲಿಗೆ ನವಗ್ರಹ ಯಾತ್ರೆ ಮಾಡಬೇಕು. ಇವರ ಕುಟುಂಬದಲ್ಲೇ 9 ರಾಜಕಾರಣಿಗಳಿದ್ದಾರೆ ಅಂತ ಟೀಕೆ ಮಾಡಲಾಗಿತ್ತು. ಹೀಗಾಗಿ ಬಿಜೆಪಿಯವರ ವಿರುದ್ದ ಇಂದು HDK ವಾಗ್ದಾಳಿ ಮಾಡಿದ್ದಾರೆ. ಪ್ರಹ್ಲಾದ್‌ ಜೋಶಿ ಶೃಂಗೇರಿ ಮಠವನ್ನ ಒಡೆದ ಹಾಗೂ ಗಾಂಧಿಜಿಯನ್ನ ಹತ್ಯೆ ಮಾಡಿದ ಮಹಾರಾಷ್ಟ್ರದ ಬ್ರಾಹ್ಮಣರು ಅಂತ ಹೇಳಿದ್ದಾರೆ. ಪಂಚರತ್ನ ಯಾತ್ರೆಯಿಂದ ಅವ್ರಿಗೆ ಭಯ ಹುಟ್ಟಿದೆ ಅದಕ್ಕೆ ಟೀಕೆ ಮಾಡ್ತಿದಾರೆ. ಪ್ರಲ್ಹಾದ್‌ ಜೋಶಿ ಅವ್ರನ್ನ ಮುಂದಿನ ಸಿಎಂ ಮಾಡಬೇಕು ಅಂತ RSSನಲ್ಲಿ ಹುನ್ನಾರ ಆರಂಭವಾಗಿದೆ. ಪ್ರಲ್ಹಾದ್‌ ಜೋಶಿ, ದಕ್ಷಿಣ ಕರ್ನಾಟಕದಲ್ಲಿರುವ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಸಾಕಷ್ಟು ವಿಭಿನ್ನ ವರ್ಗಗಳಿವೆ. ಜೋಶಿ ಮಹಾರಾಷ್ಟ್ರದ ಕಡೆಯ ಪೇಶ್ವೆ ಬ್ರಾಹ್ಮಣರು. ಇವರದ್ದು ಶೃಂಗೇರಿ ಮಠವನ್ನ ಒಡೆದ ವರ್ಗ. ಮಹಾತ್ಮ ಗಾಂಧಿ ಅವ್ರನ್ನ ಕೊಂದವರ ವರ್ಗಕ್ಕೆ ಸೇರಿದವ್ರು ಇವರು. ದೇಶ ಒಡೆಯುವುದು, ಕುತಂತ್ರ ಮಾಡೋದು ಇವರ ಕೆಲಸ. ಇವರು ನಮ್ಮ ಸಂಸ್ಕೃತಿಯವರಲ್ಲ ಅಂತ ಟೀಕೆ ಮಾಡಿದ್ದಾರೆ.  ಇತ್ತ ಇದಕ್ಕೆ ಸಿಡಿದು ಬಿದ್ದಿರೋ ಬಿಜೆಪಿ ನಾಯಕರು, ಕುಮಾರಸ್ವಾಮಿ ಸ್ವಜಾತಿ ಕೂಪಮಂಡೂಕ. ಬ್ರಾಹ್ಮಣರ ಸಮುದಾಯದ ಬಗ್ಗೆ HDK ಈ ರೀತಿ ಅವಹೇಳನ ಮಾಡಬಾರ್ದು. ಇದನ್ನ ಬಿಜೆಪಿ ಖಂಡಿಸುತ್ತೆ. ಸ್ವಜಾತಿ ಬಿಟ್ಟು ಅವರು ಹೊರಗೆ ಬರಲ್ಲ ಅಂತ ಬಿಜೆಪಿ ಎಂಎಲ್‌ಸಿ ಎನ್‌ ರವಿಕುಮಾರ್‌ ತಿರುಗೇಟು ನೀಡಿದ್ದಾರೆ.

-masthmagaa.com

Contact Us for Advertisement

Leave a Reply