ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ತಾತ್ಕಾಲಿಕ: ಕುಮಾರಸ್ವಾಮಿ

ಬಿಬಿಎಂಪಿಯಲ್ಲಿ ಬಿಜೆಪಿ ತಾತ್ಕಾಲಿಕವಾಗಿ ಅಧಿಕಾರ ಹಿಡಿದಿದೆ. ಅದು ಶಾಶ್ವತವಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಮಾತನಾಡಿದ ಅವರು, ಕೇವಲ ಅಧಿಕಾರ ಹಿಡಿದು ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. 2 ತಿಂಗಳು ರಾಜ್ಯದ ಆಡಳಿತ ನಡೆಸಿರೋದು ನೋಡುತ್ತಿದ್ದರೆ ಬಿಬಿಎಂಪಿಯಲ್ಲಿ ಯಾವ ರೀತಿ ಆಡಳಿತ ನೀಡ್ತಾರೆ ಅನ್ನೋದು ಗೊತ್ತಾಗುತ್ತೆ. ಈ ಸರ್ಕಾರದಿಂದ ಒಳ್ಳೆಯ ಆಡಳಿತ ಸಿಗುತ್ತೆ ಅಂತ ಯಾರಾದ್ರೂ ಭಾವಿಸಿದ್ರೆ ಅದು ಮೂರ್ಖತನ ಅಂತ ಹೇಳಿದ್ದಾರೆ. ಈ ಹಿಂದೆ ಬಿಬಿಎಂಪಿ ಕಚೇರಿಯಲ್ಲಿದ್ದ ಕಡತಗಳಿಗೆ ಬೆಂಕಿ ಹಚ್ಚಲಾಗಿತ್ತು. ಆಗ ಅಧಿಕಾರದಲ್ಲಿದ್ದವರು ಬಿಜೆಪಿಯವರೇ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಸಂಭವಿಸಿದ ಪ್ರವಾಹದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡ್ತಾರೆ. ಆದ್ರೆ ಅವರಿಗೆ ರಾಜ್ಯದ 6 ಲಕ್ಷ ಕುಟುಂಬಗಳು ಅತಂತ್ರರಾಗಿರೋದು ಗೊತ್ತಾಗಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಅನ್ನೋದು ಇದ್ದರೆ ದೆಹಲಿಗೆ ಹೋಗಿ ಪ್ರವಾಹದ ಬಗ್ಗೆ ಚರ್ಚಿಸಲಿ ಎಂದು ಸವಾಲು ಎಸೆದಿದ್ದಾರೆ. ಅಲ್ಲದೆ ಸಮ್ಮಿಶ್ರ ಸರ್ಕಾರದಲ್ಲಿ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಿದ ಬಿಜೆಪಿ ಸರ್ಕಾರದ ನಡೆಯ ವಿರುದ್ಧ ವಿಧಾನಸೌಧ ಚಲೋ ಹಮ್ಮಿಕೊಳ್ಳೋದಾಗಿ ತಿಳಿಸಿದ್ದಾರೆ.

Contact Us for Advertisement

Leave a Reply