ನಮ್ಮ ಕುಟುಂಬದವರು ಸ್ಪರ್ಧಿಸಲ್ಲ..ಹಿಂಸೆ ಸಾಕಾಗಿದೆ: ಎಚ್‍ಡಿಕೆ

ಉಪಚುನಾವಣೆಗೆ ದಳಪತಿಗಳ ಪ್ಲಾನಿಂಗ್ ಶುರುವಾಗಿದೆ. ಇವತ್ತು ಬೆಂಗಳೂರಿನ 3 ಕ್ಷೇತ್ರಗಳ ಉಪಚುನಾವಣೆ ಸಂಬಂಧ ಸಭೆ ನಡೆಸಲಾಯ್ತು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಮಾಧ್ಯಮಗಳಲ್ಲಿ ಈಗಾಗಲೇ ದೇವೇಗೌಡರ ಕುಟುಂಬದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ ಪ್ರವಾರವಾಗೋಕೆ ಶುರುವಾಗಿದೆ. ಆದ್ರೆ ನಮಗೆ ಸಾಕಾಗಿ ಹೋಗಿದೆ. ಕೆಲವು ಕ್ಷೇತ್ರಗಳಲ್ಲಿ ಎಚ್‍ಡಿಡಿ ಕುಟುಂಬದವರೇ ಸ್ಪರ್ಧೆ ಮಾಡಬೇಕೆಂಬ ಒತ್ತಾಯವಿದೆ. ಆದ್ರೆ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ. ಸ್ಪರ್ಧೆಗೆ ಒತ್ತಡವಿದ್ದರೂ ಸ್ಥಳೀಯ ನಾಯಕರಿಗೇ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ ಅಂದ್ರು.

Contact Us for Advertisement

Leave a Reply