ಯುದ್ದದಲ್ಲಿ ಯುಕ್ರೇನ್‌ಗೆ ಅತಿಹೆಚ್ಚು ಸಹಾಯ ಮಾಡಿದ ಎರಡನೇ ದೇಶ ಯಾವುದು ಗೊತ್ತಾ?

masthmagaa.com:

ಯುಕ್ರೇನ್‌ಗೆ ನಮ್ಮ ಮಿಲಿಟರಿ ಸಹಾಯ ಖಂಡಿತಾ ಮುಂದುವರೆಯುತ್ತೆ ಅಂತ ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ ಶಪಥ ಮಾಡಿದ್ದಾರೆ. ಹಿಂದಿನ ಸರ್ಕಾರಗಳು ಅಂದ್ರೆ ಬೋರಿಸ್‌ ಜಾನ್ಸನ್‌ ಹಾಗೂ ಲಿಜ್‌ಟ್ರಸ್‌ ಅವರು ಯುಕ್ರೇನ್‌ಗೆ ನೀಡ್ತಿದ್ದ ರೀತಿ ನೀವು ಅವರಿಗೆ ಸಹಾಯ ಮಾಡ್ತೀರಾ ಅಂತ ಕೇಳಿದ್ದಕ್ಕೆ, ಅದರಲ್ಲಿ ಯಾವುದೇ ಚೇಂಜಸ್‌ ಆಗಲ್ಲ. ನಾವು ಯುಕ್ರೇನ್‌ಗೆ ಸಪೋರ್ಟ್‌ ಮುಂದುವರೆಸ್ತೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಯುಕ್ರೇನ್‌ಗೆ ರಷ್ಯಾ ವಿರುದ್ದ ಯುದ್ದಕ್ಕೆ ಸಹಾಯ ಮಾಡ್ತಿರೋರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ರೆ ಬ್ರಿಟನ್‌ ಎರಡನೇ ಸ್ಥಾನದಲ್ಲಿದೆ. ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಕೂಡ ಯುಕ್ರೇನ್‌ಗೆ ಬ್ರಿಟನ್‌ ಹೆಚ್ಚು ಕಡಿಮೆ 3 ಬಿಲಿಯನ್‌ ಡಾಲರ್‌ ಆರ್ಥಿಕ ಸಹಾಯ ಮಾಡಿದೆ. ಅಂದ್ರೆ ಸುಮಾರು 24 ಸಾವಿರ ಕೋಟಿ ರೂಪಾಯಿ. ಈಗ ಮತ್ತಷ್ಟು ಕೊಡೋದಾಗಿ ಹೇಳಿದ್ದಾರೆ.ಅದಕ್ಕೆ ಕೆಲ ಕ್ರಮಗಳನ್ನೂ ತಗೋತೀವಿ ಅಂತ ರಿಷಿ ಸುನಾಕ್‌ ಹೇಳಿದಾರೆ. ಇದರ ನಡುವೆಯೇ ಇತ್ತ ಯುಕ್ರೇನ್‌ ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ ಮಾಡಿದ್ದು ಯುಕ್ರೇನ್‌ಗೆ ಸೇರಿದ 6 ಮಿಲಿಟರ್‌ ಪೋಸ್ಟ್‌ಗಳನ್ನ ಉಡಾಯಿಸಿದೆ. ಖೇರ್ಸಾನ್‌ ಪ್ರದೇಶವನ್ನ ಬಿಟ್ಟು ಹೋದ್ಮೇಲೆ ರಷ್ಯಾ ಅದೇ ನೆಲದಲ್ಲಿ ಯುಕ್ರೇನ್‌ ಪಡೆಗಳನ್ನ ಸಿಲುಕಿಸಿ ಶೆಲ್‌ ಹಾಗೂ ಕ್ಷಿಪಣಿ ದಾಳಿಗಳನ್ನ ಮುಂದುವರೆಸಿದೆ. ಈ ದಾಳಿಯಲ್ಲಿ 70 ಮಂದಿ ಯುಕ್ರೇನ್‌ ಸೈನಿಕರನ್ನ ಹೊಡೆದು ಹಾಕಿದ್ದೀವಿ ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ. ಇಷ್ಟಾದ್ರೂ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಮಾತ್ರ ತಮ್ಮ ಯುದ್ದೋತ್ಸಾಹದ ದಾಟಿಯಲ್ಲೇ ಭಾಷಣ ಮಾಡಿದ್ದಾರೆ. ರಷ್ಯಾದ ಕ್ಷಿಪಣಿಗಳು ಈ ವಾರ ನಮ್ಮ ಮೇಲೆ ಮತ್ತಷ್ಟು ಬಂದು ಬೀಳಬೋದು. ಎಲ್ಲರೂ ಅದಕ್ಕೆ ತಯಾರಾಗಿ..ನಮ್ಮ ಮಿಲಿಟರಿ ಕೂಡ ರಷ್ಯಾ ದಾಳಿಯನ್ನ ಎದುರಿಸೋಕೆ ಸಿದ್ದವಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply