ಚಾಮುಂಡಿ ಮೇಲೆ ಆಣೆ ಇಟ್ಟ ಲಕ್ಷ್ಮೀ ಹೆಬ್ಬಾಳ್ಕರ್..!

ನಾನು ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಅಕ್ರಮವಾಗಿ ಆಸ್ತಿ ಮಾಡಿಲ್ಲ. ಹಾಗೇನಾದ್ರೂ ಅಕ್ರಮವಾಗಿ ಆಸ್ತಿ ಮಾಡಿದ್ದು ಪತ್ತೆಯಾದ್ರೆ ಅದನ್ನು ಸರ್ಕಾರಕ್ಕೇ ಬರೆದುಕೊಡುತ್ತೇನೆ. ಹರ್ಷ ಸಕ್ಕರೆ ಕಾರ್ಖಾನೆಯಲ್ಲೂ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಡಿಸಿಸಿ ಬ್ಯಾಂಕ್‍ನಿಂದಲೂ ಕಾನೂನು ಪ್ರಕಾರವಾಗಿಯೇ ಲೋನ್ ಪಡೆದಿದ್ದೇನೆ. ನಾನು ಚಾಮುಂಡೇಶ್ವರಿ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿಯೇ ಮಾಡಿದ್ದೇನೆ ಎಂದಿದ್ದಾರೆ.

ಅಲ್ಲದೆ ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸುತ್ತಿವೆ. ನಾನೂ ಓರ್ವ ಹೆಣ್ಣುಮಗಳು. ನನಗೂ ಕುಟುಂಬ ಇದೆ. ಹಾಗೆಲ್ಲಾ ಕಪೋಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿದ್ರು.

Contact Us for Advertisement

Leave a Reply