ಮತ್ತೊಂದು ದಿನ, ಮತ್ತೊಂದು ಪಾಕ್‌ ವಿಕೆಟ್!‌ ಮುಂದುವರೆದ ಮುಸುಕುಧಾರಿ ಬೇಟೆ!

masthmagaa.com:

ಪಾಕ್‌ನಲ್ಲಿ ಮುಸುಕುದಾರಿಗಳು ತಮ್ಮ ಕೆಲಸವನ್ನು ಎಂದಿನಂತೆ ಅಚ್ಚುಕಟ್ಟಾಗಿ ಮುಂದುವರಿಸಿದ್ದಾರೆ. 2015ರಲ್ಲಿ ಜಮ್ಮು-ಕಾಶ್ಮೀರದ ಉಧಮ್‌ಪುರ್‌ನಲ್ಲಿ BSF ಯೋಧರ ಮೇಲೆ ನಡೆದಿದ್ದ ದಾಳಿಯ ಮಾಸ್ಟರ್‌ ಮೈಂಡ್‌ ಹಂಜ್ಲಾ಼ ಅದ್ನಾನ್‌ ಅನ್ನೋ ಉಗ್ರನನ್ನ ಅಪರಿಚಿತ ಮುಸುಕುದಾರಿಗಳು ಡಮ್‌ ಅನ್ನಿಸಿದ್ದಾರೆ. ಲಷ್ಕರ್‌ ಸಂಘಟನೆಗೆ ಸೇರಿದ್ದ ಈ ವಿಕೆಟ್‌ನ್ನ ಮುಸುಕುದಾರಿಗಳು ಕರಾಚಿ ನಗರದ ಆತನ ಮನೆಯ ಬಳಿಯೇ ಉರುಳಿಸಿದ್ದಾರೆ. ಆತನ ದೇಹಕ್ಕೆ ನಾಲ್ಕೇ ನಾಲ್ಕು ಬುಲೆಟ್‌ ಇಳಿಸಿದ್ದಾರೆ. ಸ್ವಲ್ಪ ದಿನಗಳ ಹಿಂದಷ್ಟೇ ಈತ ತನ್ನ ಆಪರೇಶನ್‌ಗಳನ್ನ ರಾವಲ್ಪಿಂಡಿ ಇಂದ ಕರಾಚಿಗೆ ಶಿಫ್ಟ್‌ ಮಾಡ್ಕೊಂಡಿದ್ದ ಪಾಪ.

-masthmagaa.com

Contact Us for Advertisement

Leave a Reply