ಪ್ರಪಂಚದ ಅತೀ ಹೆಚ್ಚು ಐಷಾರಾಮಿ ಜೈಲುಗಳು ಯಾವುದು ಗೊತ್ತಾ..?

ಹಾಯ್ ಫ್ರೆಂಡ್ಸ್… ಜೈಲು… ಈ ಪದ ಕೇಳಿದರೆ ಸಾಮಾನ್ಯ ಜನ ಬೆಚ್ಚಿ ಬೀಳುತ್ತಾರೆ. ಜೈಲು ಅಂದ್ರೆ ಪ್ರತಿಯೊಬ್ಬರಿಗೂ ಒಂದು ಭಯಂಕರ ಜಾಗದ ಕಲ್ಪನೆ ಬರುತ್ತದೆ. ಜೈಲು ಅಂದ್ರೆ ಒಂದು ನರಕದ ರೀತಿ ಯೋಚನೆ ಮಾಡುತ್ತೇವೆ. ಅಲ್ಲಿಗೆ ಹೋದರೆ ಪ್ರಾಣಿಗಳಂತೆ ಬದುಕಬೇಕು ಅಂತ ಹೆದರಿ ಹೋಗುತ್ತೇವೆ. ಆದರೆ ಜಗತ್ತಿನಲ್ಲಿ ಒಂದಷ್ಟು ಡಿಫ್ರೆಂಟ್ ಜೈಲುಗಳಿವೆ. ಒಂದು ಸಲಿ ಜೈಲ್ ಹೇಗಿದೆ ಅಂತ ಗೊತ್ತಾದ್ರೆ, ಹೆದರೋದು ಬಿಡಿ, ಏನಾದರೂ ತಪ್ಪು ಮಾಡಿ ಅಲ್ಲೇ ಹೋಗಿ ಸೆಟ್ಲ್ ಆಗಿ ಬಿಡೋಣ ಅಂತ ಯೋಚನೆ ಮಾಡ್ತೀರಿ. ಯಾಕಂದ್ರೆ ಈ ಜೈಲುಗಳು ಯಾವ ಫೈವ್ ಸ್ಟಾರ್ ಹೋಟೆಲ್ ಗಳಿಗೂ ಕಮ್ಮಿ ಇಲ್ಲ. ಹಾಗಾದ್ರೆ ಇನ್ಯಾಕೆ ತಡ ಬನ್ನಿ ಜಗತ್ತಿನ ಟಾಪ್ ಫೈವ್ ಲಕ್ಷುರಿ ಜೈಲುಗಳನ್ನು ನೋಡಿಕೊಂಡು ಬರೋಣ.

ನಂ.5
ಬೆಸ್ಟೋಯ್ ಪ್ರಿಸನ್, ನಾರ್ವೆ
Bestoy Prison, Norway

ನಾರ್ವೆಯಲ್ಲಿ ನೀವೇನಾದ್ರೂ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ಒಂದಷ್ಟು ದಿನ ಸೆಟಲ್ ಆಗಬೇಕು ಅಂದುಕೊಂಡರೆ ಬಾಳ ಎಕ್ಸ್ಟ್ರಾ ದುಡ್ಡು ಖರ್ಚು ಮಾಡಬೇಕು ಅಂತ ಇಲ್ಲ. ಬೆಸ್ಟೋಯ್‌ಗೆ ಹೋಗಿ ಜಸ್ಟ್ ಒಂದಷ್ಟು ಅಪರಾಧಗಳನ್ನು ಮಾಡಿ ಕಾನೂನು ಉಲ್ಲಂಘನೆ ಮಾಡಿದರೆ ಆಯ್ತು. ಪೊಲೀಸರು ಬಂದು ನಿಮ್ಮನ್ನ ಎತ್ತಾಕೊಂಡು ಹೋಗಿ ಬೆಸ್ಟೋಯ್‌ನ ಈ ಐಷಾರಾಮಿ ಜೈಲಿಗೆ ಹಾಕುತ್ತಾರೆ. ಬೆಸ್ಟೋಯ್ ಐಲ್ಯಾಂಡ್ ನಲ್ಲಿರುವ ಜೈಲು ಯಾವುದೇ ಪ್ರವಾಸಿ ತಾಣಕ್ಕೆ ಕಮ್ಮಿ ಇಲ್ಲ. ಇಲ್ಲಿ ಕೈದಿಗಳಿಗೆ ಪ್ರತ್ಯೇಕ ಕೊಠಡಿಯನ್ನು ಕೊಡಲಾಗುತ್ತದೆ. ಇತರ ಕೈದಿಗಳಂತೆ ಗೆ ಆಟ ಆಡಲು ಅವಕಾಶ ಕೊಡಲಾಗುತ್ತದೆ. ಕುದುರೆ ಸವಾರಿ ಮಾಡಲು ಅವಕಾಶವಿದೆ. ಫಿಶಿಂಗ್…, ಅಂದ್ರೆ ಮೀನು ಹಿಡಿದು ಮಜಾ ಮಾಡಬಹುದು. ಬರಿ ಚಡ್ಡಿಯಲ್ಲಿ ಬಿಸಿಲಿಗೆ ಮೈಯೊಡ್ಡಿ ಸನ್ ಬಾತ್ ಮಾಡಬಹುದು. ಹೊಲದಲ್ಲಿ ಕೆಲಸ ಮಾಡುತ್ತಾ ಪಶುಸಂಗೋಪನೆ ಮಾಡುತ್ತಾ ಗಮ್ಮತ್ತಾಗಿ ಕಾಲ ಕಳೆಯಬಹುದು. ಆದರೆ ಒಂದು ಬ್ಯಾಡ್ ನ್ಯೂಸ್. ಈ ಜೈಲಲ್ಲಿ ಅತಿಹೆಚ್ಚು ಅಂದರೆ ನೂರು ಕೈದಿಗಳನ್ನು ಇಟ್ಟುಕೊಳ್ಳಲು ವ್ಯವಸ್ಥೆಯಿದೆ. ಜೊತೆಗೆ ಇಲ್ಲಿ ಅತ್ಯಂತ ಕಡಿಮೆ ಭದ್ರತೆಯನ್ನು ಒದಗಿಸಲಾಗಿದೆ. ಏಕೆಂದರೆ ಇಲ್ಲಿಗೆ ಒಮ್ಮೆ ಬಂದ ಕೈದಿಗಳು ಯಾವತ್ತೂ ಓಡಿಹೋಗಲು ಪ್ರಯತ್ನವನ್ನೇ ಪಟ್ಟಿಲ್ಲ. ನವವಿವಾಹಿತ ಕೈದಿ ಕೂಡ ಇಲ್ಲಿಗೆ ಬಂದ ಮೇಲೆ, ಹೊಸದಾಗಿ ಮದುವೆಯಾದ ತನ್ನ ಹೆಂಡತಿಯನ್ನೇ ಮರೆತು, ಇಲ್ಲೇ ಇರ್ತೀನಿ ನಾನು ಹೋಗಲ್ಲ ಅಂತ ಹಠ ಹಿಡಿದ ಉದಾಹರಣೆಗಳಿವೆ.

ನಂ.4
ಒಟಾಗೋ ಕರೆಕ್ಷನ್ ಫೆಸಿಲಿಟಿ, ನ್ಯೂಜಿಲೆಂಡ್
Otago corrections facility, New Zealand

ನ್ಯೂಜಿಲೆಂಡ್ ಹೇಳಿಕೇಳಿ ಪುಟ್ಟ ಸುಂದರ ದ್ವೀಪ ದೇಶ. ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ. ಹೀಗಾಗಿಯೇ ಇಲ್ಲಿನ ಸರ್ಕಾರಕ್ಕೆ ಪ್ರಜೆಗಳನ್ನು ಕಂಡರೆ ಬಹಳ ಪ್ರೀತಿ. ತಪ್ಪು ಮಾಡಿದರೂ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತೆ ಸರ್ಕಾರ. ಅದಕ್ಕೆ ಈ ಜೈಲೇ ಸಾಕ್ಷಿ. ಇದು ಜೈಲಿ ಗಿಂತ ಹೆಚ್ಚಾಗಿ ಒಂದು ಯುನಿವರ್ಸಿಟಿ ರೀತಿ ಕಾಣುತ್ತೆ. ಯಾಕಂದ್ರೆ ವಿದ್ಯಾಭ್ಯಾಸ ಮಾಡುವಾಗ ಅಪರಾಧ ಮಾಡಿ ತಗಲಾಕಿಕೊಳ್ಳುವ ಕೈದಿಗಳನ್ನು ಇಲ್ಲಿ ಇರಿಸಲಾಗುತ್ತದೆ. ಇಲ್ಲಿ ಅವರ ಶಿಕ್ಷಣ ಮುಂದುವರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂಜಿನಿಯರಿಂಗ್, ಸೈನ್ಸ್ ಸೇರಿದಂತೆ ಎಲ್ಲ ಆಧುನಿಕ ವಿದ್ಯಾಭ್ಯಾಸ ಇಲ್ಲಿ ಉಚಿತವಾಗಿ ಲಭ್ಯ. ಕೈದಿಗಳಿಗೆ ಇರಲು ಟಿವಿ, ಮೆತ್ತನೆಯ ಲಕ್ಷುರಿ ಹಾಸಿಗೆ‌ ಅಗತ್ಯ ಔಷಧಿ ಸೇರಿದಂತೆ ಎಲ್ಲವೂ ಇರುವ ಸುಂದರವಾದ ಕೊಠಡಿ ಕೊಡಲಾಗುತ್ತದೆ. ಆದರೆ ಈ ಜೈಲಿನ ಸೆಕ್ಯೂರಿಟಿ ಮಾತ್ರ ಅತ್ಯಂತ ಟೈಟು. ಇಲ್ಲಿನ ಬೇಲಿಗಳಿಗೆ ಕರೆಂಟ್ ಹರಿಸಲಾಗಿರುತ್ತದೆ. ವಿಸಿಟ್ ಮಾಡಲು ಬರುವ ಸಂಬಂಧಿಕರ ದೇಹವನ್ನು ಸಂಪೂರ್ಣ ಎಕ್ಸರೆ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಮೊಬೈಲ್ ಸೇರಿದಂತೆ ಯಾವುದೇ ವಸ್ತುವನ್ನೂ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.

ನಂ.3
ಅರಂಜುವೇಸ್ ಪ್ರಿಸನ್, ಸ್ಪೇನ್
Aranjuaz Prison, spain

ಮೂರನೇ ಸ್ಥಾನದಲ್ಲಿರುವ ಈ ಜೈಲ್ ಮಾತ್ರ ಲಕ್ಸುರಿಯಸ್ ಮಾತ್ರವಲ್ಲ ಬಾಳ ಬಾಳ ವಿಚಿತ್ರ ಕೂಡ ಹೌದು. ಯಾಕೆ ಅಂತ ಹೇಳ್ತೀವಿ ಕೇಳಿ. ಫ್ರೆಂಡ್ಸ್… ಅಪರಾಧ ಮಾಡಿ ಬರುವ ಕೈದಿ ಆಗಷ್ಟೇ ಮದುವೆಯಾಗಿದ್ದರೆ ಅವರ ಸಂಗಾತಿಯ ಕತೆ ಏನಾಗುತ್ತೆ ಹೇಳಿ. ವಿರಹ ವೇದನೆ ಬಹಳ ಕಷ್ಟ. ಹೀಗಾಗಿ ಈ ಜೈಲಿನಲ್ಲಿ ಅಂತಹ ಕೈದಿಗಳಿಗೆ ತಮ್ಮ ಹೆಂಡತಿಯನ್ನು ಅಥವಾ ಗಂಡನನ್ನ ಕರೆದುಕೊಂಡು ಬಂದು ಜೊತೆಗೆ ಇಟ್ಟುಕೊಳ್ಳಲು ಅವಕಾಶವಿದೆ. ಮಕ್ಕಳು ಆಗಿದ್ದರೆ ಮಕ್ಕಳ ಸಮೇತ ಇಡಿ ಫ್ಯಾಮಿಲಿ ಜೈಲಿನಲ್ಲಿ ಒಟ್ಟಿಗೆ ಕಾಲ ಕಳೆಯಬಹುದು. ಮಕ್ಕಳಿಗೆ ಜೈಲು ಅಂತ ಫೀಲ್ ಆಗಬಾರದು ಅನ್ನೋ ಕಾರಣಕ್ಕಾಗಿ ಗೋಡೆಗಳ ಮೇಲೆ ಮಕ್ಕಳ ಇಷ್ಟದ ಕಾರ್ಟೂನ್ ಚಿತ್ರಗಳನ್ನು ಕೂಡ ಬರೆಯಲಾಗಿದೆ. ಮಕ್ಕಳ ಪ್ಲೇಯಿಂಗ್ ಏರಿಯಾ ಕೂಡ ಸಪರೇಟ್ ಇದೆ. ಜೊತೆಗೆ ಗಂಡ-ಹೆಂಡತಿಗೆ ಪ್ರೈವೇಟ್ ಆಗಿ ಇರಲು ಪ್ರತ್ಯೇಕ ಕೊಠಡಿಯನ್ನು ಕೊಡಲಾಗುತ್ತದೆ.

ನಂ.2
ಸೋಲೆಂಟುನಾ ಪ್ರಿಸನ್, ಸ್ವೀಡನ್
Sollentuna Prison, Sweden

ಎರಡನೇ ಸ್ಥಾನದಲ್ಲಿರುವ ಈ ಜೈಲ್, ಫೈವ್ ಸ್ಟಾರ್ ಬೇಕರಿ ಗಿಂತಲೂ ಹೆಚ್ಚು.‌ ಇಲ್ಲಿ ಎಂತಹ ಅದ್ಭುತವಾದ ಕಿಚನ್ ಇದೆ ಎಂದರೆ ತಿನ್ನಲು ಬೇಕಾದ ಎಲ್ಲ ರೀತಿಯ ಬಗೆ ಬಗೆಯ ತಿಂಡಿ ತಿನಿಸುಗಳು ಇಲ್ಲಿ ಲಭ್ಯ. ಕೈದಿಗಳೇ ಬೇಕಾಗಿದ್ದನ್ನು ಮಾಡಿಕೊಂಡು ತಿನ್ನಲು ಅವಕಾಶವಿದೆ. ಇಲ್ಲಿ ಕೈದಿಗಳು ಶಿಕ್ಷೆಕಿಂತ ಹೆಚ್ಚು ಮೋಜು-ಮಸ್ತಿ ಮಾಡುತ್ತಾರೆ. ಪ್ರತಿಯೊಬ್ಬ ಕೈದಿಗೂ ಪ್ರತ್ಯೇಕ ಸುಸಜ್ಜಿತ ಕೊಠಡಿ ಮತ್ತು ಬಾತ್ರೂಮ್ ಕೊಡಲಾಗುತ್ತದೆ. ಎಂಟರ್ಟೈನ್ಮೆಂಟ್ ಗೆ ಟಿವಿಯನ್ನು ಕೂಡ ಕೊಡಲಾಗುತ್ತದೆ. ಹಾಗೂ ವಿಶಾಲವಾದ ಸೋಫಾ ಸೆಟ್ ಕೂಡ. ಇನ್ನು ಎಕ್ಸಸೈಸ್ ಮಾಡಬೇಕು ಎನಿಸಿದರೆ ಮಾಡ್ರನ್ ಜಿಮ್ ಫೆಸಿಲಿಟಿ ಕೂಡ ಇಲ್ಲಿದೆ. ಆದರೆ ಇಲ್ಲಿ ತಪ್ಪಿಸಿಕೊಂಡು ಓಡುವ ಪ್ರಯತ್ನವನ್ನ ಮಾಡುವಂತಿಲ್ಲ. ಯಾಕಂದ್ರೆ ಈ ಜೈಲಿನ ಇಂಚಿಂಚು ಸಿಸಿಟಿವಿಯಲ್ಲಿ ಕವರ್ ಆಗಿದ್ದು, ಶಸ್ತ್ರಸಜ್ಜಿತ ಗಾರ್ಡ್ಗಳು ಪ್ರತಿಕ್ಷಣವೂ ಕಾಯುತ್ತಿರುತ್ತಾರೆ.

ನಂ.1
ಹಲ್ಡೆನ್ ಪ್ರಿಸನ್, ನಾರ್ವೆ
Haldyn Prison, Norway

ಅತ್ಯಂತ ಲಕ್ಸುರಿಯಸ್ ಶೈಲಿಗಳ ಲಿಸ್ಟ್ ನಲ್ಲಿ ಈ ಜೈಲು ನಂಬರ್ ಒನ್ ಸ್ಥಾನದಲ್ಲಿದೆ. ಯಾಕಂದ್ರೆ ಇದು ಯಾವ ಆಂಗಲ್ ನಿಂದ ನೋಡಿದರೂ ಅಂದು ದುಬಾರಿ ಐಷಾರಾಮಿ ಹೋಟೆಲ್ ರೀತಿ ಕಾಣುತ್ತದೆ. ಸುತ್ತಲೂ ಹಸಿರಿನಿಂದ ಕೂಡಿರುವ ಪ್ರದೇಶದಲ್ಲಿ ಈ ಜೈಲು ಇದೆ. ಇಲ್ಲಿ ಪ್ರತಿಯೊಬ್ಬ ಕೈದಿಗೂ ತನ್ನ ಪ್ರೈವಸಿಗೆ ಅವಕಾಶ ಕೊಡಲಾಗಿದೆ. ಕೈದಿಯ ಕೌಶಲ್ಯ ಅಭಿವೃದ್ಧಿಗೆ ಜೊತೆಗೆ ವಿವಿಧ ಕ್ರೀಡೆಗಳಿಗೆ ಇಲ್ಲಿ ವ್ಯವಸ್ಥೆಯಿದೆ. ಟಿವಿ ಶೋಸ್ , ಮೂವೀಸ್, ವಿಡಿಯೋ ಗೇಮ್ಸ್ ಗಳನ್ನು ಗಾರ್ಡ್ ಗಳ ಜೊತೆ ಕುಳಿತುಕೊಂಡು ಒಟ್ಟಿಗೆ ನೋಡಿ ಎಂಜಾಯ್ ಮಾಡಲು ಅವಕಾಶವಿದೆ. ಆಧುನಿಕ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಇದ್ದು ಕೈದಿಗಳು ತಮ್ಮ ಹಾಡುಗಾರಿಕೆ ಮತ್ತು ನಾಟಕದ ಕಲೆಯನ್ನು ಇಲ್ಲಿ ಕಾರ್ಯರೂಪಕ್ಕೆ ತರಲು ಅವಕಾಶವಿದೆ. ಫ್ರೆಂಡ್ಸ್ ಈ ಜೈಲುಗಳ ಬಗ್ಗೆ ನೀವು ಏನು ಯೋಚನೆ ಮಾಡುತ್ತೀರಿ? ಕಮೆಂಟ್ ಮಾಡಿ ತಿಳಿಸಿ. ಒಂದು ವೇಳೆ ಇಷ್ಟು ಸುಖಕರ ಜೈಲು ಭಾರತದಲ್ಲೂ ಬಂದುಬಿಟ್ಟರೆ, ನಮ್ಮ ದೇಶದ ಕಳ್ಳಕಾಕರು ಏನು ಮಾಡಬಹುದು? ಇಮ್ಯಾಜಿನ್ ಮಾಡಿ..!

Contact Us for Advertisement

Leave a Reply