ಉಮೇಶ್‌ ಪಾಲ್‌ ಅಪಹರಣ ಕೇಸ್‌, ಆತಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಪ್ರಯಾಗ್‌ರಾಜ್‌ ಕೋರ್ಟ್‌!

masthmagaa.com:

ಉತ್ತರ ಪ್ರದೇಶದಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ 2006ರ ಉಮೇಶ್‌ ಪಾಲ್‌ ಕಿಡ್ನಾಪ್‌ ಕೇಸ್‌ನಲ್ಲಿ ಗ್ಯಾಂಗ್‌ಸ್ಟರ್‌, ಮಾಜಿ ಶಾಸಕ, ಮಾಜಿ ಸಂಸದ ಆತಿಕ್‌ ಅಹ್ಮದ್‌ಗೆ ಪ್ರಯಾಗ್‌ರಾಜ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಆರೋಪದಲ್ಲಿ ಇವನ ಜೊತೆಗೆ ಇನ್ನಿಬ್ರಿಗೂ ಜೀವಾವಧಿ ಶಿಕ್ಷೆಯಾಗಿದೆ. ಕೊಲೆ ಮತ್ತು ಕಿಡ್ನಾಪ್‌ ಸೇರಿ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನಎದುರಿಸ್ತಿದ್ದ ಈ ಆತಿಹ್‌ ಅಹ್ಮದ್‌ನನ್ನ ಇತ್ತೀಚೆಗೆ ಗುಜರಾತ್‌ ಜೈಲಿನಿಂದ ಪ್ರಯಾಗ್‌ರಾಜ್‌ ಕೋರ್ಟ್‌ಗೆ ಕರೆತರಲಾಗಿತ್ತು. ಈಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನೊಂದ್‌ ಕಡೆ ಉತ್ತರ ಪ್ರದೇಶ ಪೊಲೀಸ್ ಕಸ್ಟಡಿಯಲ್ಲಿ ರಕ್ಷಣೆ ನೀಡುವಂತೆ ಅತೀಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇತ್ತ ಆತಿಕ್‌ಗೆ ಜೀವಾವಧಿ ಶಿಕ್ಷೆ ನೀಡಿರುವ ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯಿಸಿರುವ ಕೊಲೆಗೀಡಾದ ಉಮೇಶ್‌ಪಾಲ್‌ ತಾಯಿ ಹಾಗೂ ಪತ್ನಿ ಈ ಶಿಕ್ಷೆ ಸಾಲಲ್ಲ ಆತಿಕ್‌ಗೆ ಗಲ್ಲು ಶಿಕ್ಷೆ ವಿಧಿಸ್ಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply