masthmagaa.com:

ಟಿಆರ್​ಪಿ ತಿರುಚಿದ ಆರೋಪ ಎದುರಿಸುತ್ತಿರುವ ರಿಪಬ್ಲಿಕ್ ಟಿವಿಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಅಂತ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ಜೊತೆಗೆ ‘ದೇಶದ ಬೇರೆ ನಾಗರಿಕರಂತೆ ಮೊದಲು ಬಾಂಬೆ ಹೈಕೋರ್ಟ್​ಗೆ ಹೋಗಿ’ ಅಂತ ಸೂಚಿಸಿದೆ.

‘ನೀವು ಈಗಾಗಲೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದೀರಿ. ಇಂತಹ ಸಂದರ್ಭದಲ್ಲಿ ಅರ್ಜಿಯನ್ನು ಸ್ವೀಕರಿಸಿದ್ರೆ ಹೈಕೋರ್ಟ್​ ಮೇಲೆ ನಮಗೆ ನಂಬಿಕೆ ಇಲ್ಲ ಅನ್ನೋ ಮೆಸೇಜ್ ಪಾಸ್ ಆಗುತ್ತೆ. ಹೀಗಾಗಿ ಬೇರೆ ನಾಗರಿಕರಂತೆ ನೀವು ಕೂಡ ಮೊದಲು ಹೈಕೋರ್ಟ್​ಗೆ ಹೋಗಿ’ ಅಂತ ಸುಪ್ರೀಂಕೋರ್ಟ್ ಹೇಳಿದೆ.

ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಗೆ ಮುಂಬೈ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ತನಿಖೆಗೆ ಅಡ್ಡಿಪಡಿಸಲು ಈ ರೀತಿ ಮಾಡಲಾಗುತ್ತಿದೆ ಅಂತ ಪೊಲೀಸರು ಆರೋಪಿಸಿದ್ದರು. ಅಂದ್ಹಾಗೆ ರಿಪಬ್ಲಿಕ್ ಟಿವಿ ಸೇರಿದಂತೆ ಒಟ್ಟು ಮೂರು ಟಿವಿ ಚಾನಲ್​ಗಳ ವಿರುದ್ಧ ಟಿಆರ್​ಪಿ ತಿರುಚಿದ ಆರೋಪವಿದೆ. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply