ಹಂದಿ ಜ್ವರದಂತೆ ಚಳಿಗಾಲದಲ್ಲಿ ವೇಗ ಪಡೆಯಲಿದೆ ಕೊರೋನಾ..!

masthmagaa.com:

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರೋದು ಖುಷಿಯ ವಿಚಾರ. ಆದ್ರೆ ಚಳಿಗಾಲದಲ್ಲಿ ಕೊರೋನಾ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಯಾಕಂದ್ರೆ ಹಂದಿ ಜ್ವರದ ಪ್ರಕರಣಗಳು ಚಳಿಗಾಲದಲ್ಲಿ ಏರಿಕೆ ಕಂಡಿದ್ದವು. ಹೀಗಾಗಿ ಕೊರೋನಾ ಕೂಡ ಹೆಚ್ಚಾಗಬಹುದು ಅಂತ ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಇದರ ಜೊತೆಗೆ ಚೀನಾ ಮತ್ತು ಇಟಲಿ ದೇಶಗಳಲ್ಲಿ ನಡೆಸಿದ ಅಧ್ಯಯನ ವೇಳೆ ಕೊರೋನಾ ಹರಡುವಿಕೆಯಲ್ಲಿ ವಾಯು ಮಾಲಿನ್ಯ ಪ್ರಮುಖ ಪಾತ್ರವಹಿಸುತ್ತದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ ಅಂತ ಗುಲೇರಿಯಾ ಹೇಳಿದ್ದಾರೆ. ಹೇಳಿಕೇಳಿ ಭಾರತದಲ್ಲಿ ವಾಯು ಮಾಲಿನ್ಯ ಜಾಸ್ತಿ ಇದೆ. ಚಳಿಗಾಲದಲ್ಲಿ ಅದರ ಎಫೆಕ್ಟ್ ಮತ್ತಷ್ಟು ಜಾಸ್ತಿಯಾಗುತ್ತೆ. ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಮಧ್ಯಾಹ್ನವಾದ್ರೂ ಸೂರ್ಯ ಕಾಣಲ್ಲ. ಆ ರೀತಿ ಇರುತ್ತೆ. ಹೀಗಾಗಿ ಈ ಬಾರಿ ವಾಯು ಮಾಲಿನ್ಯದ ಜೊತೆಗೆ ಕೊರೋನಾ ಕೂಡ ಇರೋದ್ರಿಂದ ದೇಶಕ್ಕೆ ಡಬಲ್ ಟ್ರಬಲ್ ಎದುರಾಗಲಿದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply