ಅನ್​​ಲಾಕ್​​ 2.0: ಯಾವ ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಿಕೆ..?

ಬೆಂಗಳೂರು: ರಾಜ್ಯದಲ್ಲಿ ಜೂನ್ 21ರಿಂದ ಅರ್ಧ ರಾಜ್ಯಕ್ಕೆ ಕೊರೋನಾ ಲಾಕ್​ಡೌನ್​​​​​​​​​ನಿಂದ ಮುಕ್ತಿ ನೀಡಲಾಗಿದೆ. ಕೊರೋನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ರಾಮನಗರ, ಯಾದಗಿರಿ, ಬೀದರ್, ಕೋಲಾರ, ಬೆಂಗಳೂರು ನಗರ, ಹಾವೇರಿ ಜಿಲ್ಲೆಗಳಲ್ಲಿ ಸಡಿಲಿಕೆ ಇರುತ್ತೆ ಅಂತ ಯಡಿಯೂರಪ್ಪ ತಿಳಿಸಿದ್ದಾರೆ. ಹಾಗಾದ್ರೆ ಈ ಜಿಲ್ಲೆಗಳಲ್ಲಿ ಏನೆಲ್ಲಾ ಸಡಿಲಿಕೆ ಇರುತ್ತೆ ಅಂತ ನೋಡೋದಾದ್ರೆ,

ಕರ್ನಾಟಕ ಅನ್​ಲಾಕ್​​​ 2.0!
ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ಎಲ್ಲಾ ಅಂಗಡಿ ತೆರೆಯಲು ಅನುವು
ಹೋಟೆಲ್, ಕ್ಲಬ್, ರೆಸ್ಟೋರೆಂಟ್​​​ಗಳಲ್ಲಿ ಸಂಜೆ 5ರವರೆಗೆ ಊಟ ಮಾಡ್ಬೋದು
ಹೋಟೆಲ್ ಒಟ್ಟು ಕೆಪಾಸಿಟಿಯ 50% ಜನರಿಗೆ ಅವಕಾಶ, ಎಸಿ ಹಾಕುವಂತಿಲ್ಲ
ಔಟ್​ಡೋರ್ ಶೂಟಿಂಗ್​​ಗೆ ಅವಕಾಶ, ಜಿಮ್​​ 50% ಜನರೊಂದಿಗೆ ತೆರೆಯಬಹುದು
ಮೆಟ್ರೋ-ಬಸ್ ಓಡಾಟ 50% ಪ್ರಯಾಣಿಕರೊಂದಿಗೆ ಕಾರ್ಯ ನಿರ್ವಹಿಸಬಹುದು
ಹೊರಾಂಗಣ ಕ್ರೀಡೆಗಳನ್ನು ವೀಕ್ಷಕರಿಲ್ಲದೇ ಆಯೋಜಿಸಲು ಅವಕಾಶ
ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ 50% ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ
ಲಾಡ್ಜ್​​, ರೆಸಾರ್ಟ್​​ಗಳ್ಲೂ ಕೂಡ 50% ಸಾಮರ್ಥ್ಯದೊಂದಿಗೆ ತೆರೆಯಬಹುದು
ರಾಜ್ಯಾದ್ಯಂತ ಅಂತರ್​​ ಜಿಲ್ಲಾ ಬಸ್​ ಸಂಚಾರಕ್ಕೆ ಅನುಮತಿ
50% ಪ್ರಯಾಣಿಕರೊಂದಿಗೆ ಬಸ್ ಸಂಚಾರಕ್ಕೆ ಅನುಮತಿ

ಯಾವ ಜಿಲ್ಲೆಗಳಲ್ಲಿ ಸಡಿಲಿಕೆ ಇಲ್ಲ..?
5%ಕ್ಕಿಂತ ಹೆಚ್ಚು ಪಾಸಿಟಿವಿ ರೇಟ್ ಇರೋ 13 ಜಿಲ್ಲೆಗಳಲ್ಲಿ ಅನ್​ಲಾಕ್ ಇಲ್ಲ
ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ
ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಧಾರವಾಡ, ಬೆಂಗಳೂರು ಗ್ರಾಮಾಂತರ
ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಈಗ ಇರೋ ಸ್ಥಿತಿಯೇ ಮುಂದುವರಿಕೆ
ಪಾಸಿಟಿವಿಟಿ ದರ 10%ಗಿಂತ ಜಾಸ್ತಿ ಇರೋ ಮೈಸೂರಲ್ಲೂ ನಿರ್ಬಂಧ ಮುಂದುವರಿಕೆ

ಅನ್​ಲಾಕ್ 2.0 ನಿರ್ಬಂಧಗಳೇನು?
ಇಡೀ ರಾಜ್ಯದಲ್ಲಿ ಅನ್ವಯವಾಗುವಂತೆ ಪ್ರತಿದಿನ ನೈಟ್​ ಕರ್ಫ್ಯೂ
ಸಂಜೆ 7ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್​ ಕರ್ಫ್ಯೂ ಇರುತ್ತೆ
ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ
ಈಜುಕೊಳ ಬಂದ್, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ ನಿರ್ಬಂಧ
ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು, ಸಿನಿಮಾ ಮಂದಿರ, ಶಾಪಿಂಗ್ ಮಾಲ್​​​ ಬಂದ್​​
ಅಮ್ಯೂಸ್​​ಮೆಂಟ್ ಪಾರ್ಕ್​​​​​​, ಪಬ್​​ಗಳ ಮೇಲಿನ ನಿರ್ಬಂಧ ಮುಂದುವರಿಕೆ
ಅಂತಾರಾಜ್ಯ ಬಸ್​​ ಸಂಚಾರಕ್ಕೆ ಅನುಮತಿ ಇಲ್ಲ

ಇಷ್ಟೆಲ್ಲಾ ಹೇಳಿದ ಬಳಿಕ ಸಿಎಂ ಯಡಿಯೂರಪ್ಪ ಒಂದು ಮಾತು ಹೇಳಿದ್ರು. ಎಲ್ಲಾ ರಿಲೀಫ್ ಕೊಡ್ತಿದ್ದೀವಿ ಅಂದ್ರೆ ಕೊರೋನಾ ಇಲ್ಲ.. ಹೆದರೋದು ಬೇಡ ಅಂತೇನೂ ಅರ್ಥವಲ್ಲ.. ಸಾಮಾನ್ಯ ಜನ ತುಂಬಾ ಕಷ್ಟದಲ್ಲಿದ್ಧಾರೆ. ವ್ಯಾಪಾರ-ವಹೀವಾಟಿಗೆ ತಡೆಯಾಗಿದೆ. ಜೀವನ ಕಷ್ಟವಾಗಿದೆ ಅಂತ ರಿಲ್ಯಾಕ್ಸೇಷನ್​​ ಕೊಡ್ತಿದ್ದೀವಿ. ಜನ ಇದನ್ನ ಅರ್ಥ ಮಾಡ್ಕೊಂಡು, ದಯವಿಟ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ನಮಗೆ ಸಹಕರಿಸಬೇಕು ಅಂದ್ರು. ಜೊತೆಗೆ ಈ ಎಲ್ಲಾ ಸಡಿಲಿಕೆಗಳು ಜೂನ್ 21ರಿಂದ ಜುಲೈ 5ರವರೆಗೆ ಅನ್ವಯವಾಗುತ್ತೆ. ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಿ, ಅವರ ಸಲಹೆಗಳ ಆಧಾರದಲ್ಲೇ ಈ ನಿರ್ಧಾರ ಕೈಗೊಂಡಿದ್ದೀವಿ. 3ನೇ ಅಲೆ ಬರೋ ಭೀತಿ ಇರೋದ್ರಿಂದ ಜುಲೈ 5ರವರೆಗೆ ಕಾದು ನೋಡಿ, ಮುಂದಿನ ನಿರ್ಧಾರ ತೆಗೆದುಕೊಳ್ತೀವಿ.. ಅದೇ ರೀತಿ ಜೂನ್ 21ರಂದು ಲಸಿಕೆ ಮೇಳ ನಡೆಸಲಾಗುತ್ತೆ ಅಂತ ಯಡಿಯೂರಪ್ಪ ತಿಳಿಸಿದ್ರು.

Contact Us for Advertisement

Leave a Reply