ಮಾನವೀಯತೆಯೇ ಸತ್ತು ಹೋದ ಘಟನೆ ಇದು..! ಛೇ…

ಉತ್ತರ ಪ್ರದೇಶದ ಪ್ರತಾಪ್‍ಗಡ ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ದುಷ್ಟರ ಗುಂಡಿನ ದಾಳಿಗೆ ತುತ್ತಾದ ಯುವಕನನ್ನು ರಕ್ಷಿಸೋ ಬದಲು ವಿಡಿಯೋ ಮಾಡೋ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಸೆಪ್ಟೆಂಬರ್ 30ರಂದು ಜೌನ್ ಪುರ ನಿವಾಸಿ ಸುನೀಲ್ ಕುಮಾರ್ ತನ್ನ ಸಂಬಂಧಿಯೊಬ್ಬರನ್ನು ಪ್ರತಾಪ್‍ಗಡಕ್ಕೆ ಬಿಟ್ಟು ವಾಪಸ್ ಆಗುತ್ತಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಬೈಕ್ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾರೆ. ಈ ವೇಳೆ ಸುನೀಲ್ ಡ್ರಾಪ್ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಪಿಸ್ತೂಲ್ ತೆಗೆದು ಗುಂಡು ಎದೆಗೆ ಹಾರಿಸಿದ ದುಷ್ಕರ್ಮಿಗಳು ಸುನೀಲ್ ಬೈಕ್ ಕದ್ದು ಎಸ್ಕೇಪ್ ಆಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಸುನೀಲ್ ಕಿರುಚಾಡುತ್ತಾ ಸಹಾಯ ಯಾಚಿಸುತ್ತಿದ್ದರೂ ಯಾರೂ ಸಹಾಯಕ್ಕೆ ಬರಲೇ ಇಲ್ಲ. ಎಲ್ಲರೂ ಸುತ್ತ ನಿಂತು ವಿಡಿಯೋ ಮಾಡುತ್ತಿದ್ದರು. ಇನ್ನು ಕೆಲವರು ಫೋಟೋ ತೆಗೆಯುತ್ತಿದ್ದರು. ಈ ವೇಳೆ ಸುನೀಲ್ ಫೋಟೋ ತೆಗೆಯೋ ಬದಲು ನನ್ನನ್ನು ಕಾಪಾಡಿ ಎಂದು ಮನವಿ ಮಾಡಿದ್ದರು. ಆದ್ರೆ ಜನ ಮಾತ್ರ ಸಹಾಯಕ್ಕೆ ಬರಲೇ ಇಲ್ಲ.

ಇದೇ ರೀತಿ ಅರ್ಧ ಗಂಟೆ ಕಳೆದ ಬಳಿಕ ಅಲ್ಲಿಗೆ ಬಂದ ಮಹಿಳೆಯೊಬ್ಬರು ಸುನೀಲ್‍ಗೆ ಫೋನ್ ನೀಡಿ, ಮನೆಗೆ ಕರೆ ಮಾಡುವಂತೆ ತಿಳಿಸಿದ್ರು. ಅಲ್ಲದೆ ಉಳಿದವರನ್ನೂ ಸಹಾಯಕ್ಕೆ ಕರೆದ್ರು. ಈ ವೇಳೆ ಇಬ್ಬರು ಯುವಕರು ಸುನೀಲ್ ಎದೆಗೆ ಬಟ್ಟೆ ಕಟ್ಟಿ ರಕ್ತಸ್ರಾವ ನಿಲ್ಲಿಸಲು ಯತ್ನಿಸಿದ್ರು. ಜೊತೆಗೆ ಪೊಲೀಸರಿಗೆ ಮಾಹಿತಿ ನೀಡಿದ್ರು.

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಗುಂಡಿಟ್ಟು ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Contact Us for Advertisement

Leave a Reply