masthmagaa.com:

ದೆಹಲಿ: ಭಾರತೀಯ ವಾಯುಪಡೆಗೆ ದೈತ್ಯ ಶಕ್ತಿ ಕೊಡೋ ಸಾಮರ್ಥ್ಯ ಇರೋ 5ನೇ ಜನರೇಶನ್ ಯುದ್ಧ ವಿಮಾನಗಳಿಗೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಸ್ವದೇಶಿ ನಿರ್ಮಿತ AMCA/ ಅಡ್ವಾನ್ಸ್ಡ್ ಮೀಡಿಯಮ್ ಕಾಂಬಾಟ್ ಏರ್ಕ್ರಾಫ್ಟ್ ಪ್ರೋಗ್ರಾಮ್ ಲಾಂಚ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಮಾನಗಳ ಫ್ರೋಟೋಟೈಪ್ಸ್ ಡಿಸೈನ್ ಫೈನಲ್ ಆಗಿದೆ. ಮುಂದಿನ ವರ್ಷದ ಆರಂಭದಲ್ಲೇ ಕ್ರಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿಗೆ ಕಳಿಸಿಕೊಡಲಾಗುತ್ತೆ. ಈಗಾಗಲೇ ರಕ್ಷಣಾ ಇಲಾಖೆಯಲ್ಲಿ ಈ ಬಗ್ಗೆ ಕೆಲಸ ಆರಂಭ ಆಗಿದೆ ಅಂತ ವರದಿಯಾಗಿದೆ. ಸದ್ಯ ಇಡೀ ವಿಶ‌್ವದಲ್ಲಿ 5ನೇ ತಲೆಮಾರಿನ ಫೈಟರ್ ಜೆಟ್ಸ್ ಇರೋದು ಅಮೆರಿಕ, ರಷ್ಯಾ ಮತ್ತು ಚೀನಾ ಬಳಿ ಮಾತ್ರ. ಅಮೆರಿಕದ F/A22 ರ‍್ಯಾಪ್ಟರ್ ಹಾಗೂ F-35 ಲೈಟ್ನಿಂಗ್-2, ಹಾಗೇ ಚೀನಾದ ಚೆಂಗ್ಡು ಜೆ-20 ಮತ್ತು ರಷ್ಯಾದ ಸುಖೋಯ್ -57…

ಆದ್ರೆ ಇದರಲ್ಲಿ ಚೀನಾದ ಚೀನಾದ ಚೆಂಗ್ಡು ಜೆ-20 ಮತ್ತು ರಷ್ಯಾದ ಸುಖೋಯ್ -57 ವಿಮಾನಗಳ 5th ಜನರೇಶನ್ ತಾಖತ್ತಿನ ಬಗ್ಗೆ ವಿಶ್ವಕ್ಕೆ ಅನುಮಾನ ಇದೆ. ಇದು 4.5 ಜೆನರೇಶನ್ ಅಷ್ಟೆ ಅಂತ ಹೇಳಲಾಗುತ್ತೆ. ನಾವು ಇತ್ತೀಚೆಗೆ ಫ್ರಾನ್ಸ್​​​ನಿಂದ ತರಿಸಿಕೊಳ್ತಿರೋ 36 ರಫೇಲ್​​ ಯುದ್ಧ ವಿಮಾನಗಳು ಕೂಡ 4.5 ಜೆನರೇಶನ್. ಆ ಡೀಲ್​​​​​ಗೆ ಸುಮಾರು 59 ಸಾವಿರ ಕೋಟಿ ಖರ್ಚಾಗಿತ್ತು.
ಈಗ 5ನೇ ತಲೆಮಾರಿನ ಸ್ವದೇಶೀ ಫೈಟರ್ ಜೆಟ್ ತಯಾರಿಸಲು ಭಾರತ ಮುಂದಾಗಿದೆ. 25 ಟನ್ ತೂಕದ ಈ ವಿಮಾನದ ಡೆವಲಪ್ಮೆಂಟ್ಗೇನೇ 15 ಸಾವಿರ ಕೋಟಿ ಖರ್ಚಾಗುತ್ತೆ. 2025-26ಕ್ಕೆ ಮೊದಲ ಮಾದರಿ ರೆಡಿಯಾಗುತ್ತೆ. 2030-31ರ ವೇಳೆಗೆ ಮೊದಲ ಬ್ಯಾಚ್’ನ ಮಾರ್ಕ್ 1 ವಿಮಾನಗಳು ತಯಾರಾಗಬಹುದು. ಆದ್ರೆ ಈ ಟೈಮ್ ಫ್ರೇಮ್ 2035ರವರೆಗೆ ವಿಸ್ತರಣೆ ಆದ್ರೂ ಆಗಬಹುದು ಅಂತ ಹೇಳಲಾಗ್ತಿದೆ.

DRDO ಮತ್ತು ಅದರ ಅಂಗಸಂಸ್ಥೆ ADA/ಎರೋನಾಟಿಕಲ್ ಡೆವಲಪ್​​ಮೆಂಟ್​ ಏಜೆನ್ಸಿ ಈ ಯೋಜನೆಯನ್ನ ಜಾರಿಗೊಳಿಸಲಿವೆ. ಸದ್ಯ ಭಾರತೀಯ ವಾಯುಪಡೆಗೆ 42 ಸ್ಕ್ವಾಡ್ರನ್ ಸಾಂಕ್ಷನ್ ಆಗಿದ್ದರೂ ಬರೀ 30-32 ಸ್ಕ್ವಾಡ್ರನ್ ದಾಟಿ ಹೋಗಲು ಒದ್ದಾಡ್ತಿದೆ. ಒಂದು ಸ್ಕ್ವಾಡ್ರನ್ ನಲ್ಲೂ ಸುಮಾರು 18 ವಿಮಾನಗಳು ಇರುತ್ತವೆ. ಇರೋ ಹಳೆಯ ವಿಮಾನಗಳಿಗೂ ವಯಸ್ಸಾಗ್ತಿದೆ. ಅಲ್ಲಲ್ಲಿ ಪತನ ಆಗ್ತಿವೆ. ಇಂಥಾ ಟೈಮಲ್ಲಿ ಕಡೆಗೂ AMCA ತಯಾರಿಸಲು ಭಾರತ ಹೆಜ್ಜೆ ಮುಂದೆ ಇಟ್ಟಿರೋದು ಸಾಕಷ್ಟು ಮಹತ್ವ ಪಡೆಯುತ್ತೆ. ಆದ್ರೆ ಪ್ರತೀ ಸರ್ಕಾರಿ ಪ್ರಾಜೆಕ್ಟ್​​​​ನಂತೆ, ಜಗತ್ತಲ್ಲಿ 8ನೇ ಜನರೇಶನ್ ಬರೋ ವೇಳೆಗೆ ನಮ್ಮ 5ನೇ ಜನರೇಶನ್ ವಿಮಾನ ಬರೋಹಾಗೆ ಆಗದೆ ಇರಲಿ. ಟೈಮಿಗೆ ಸರಿಯಾಗಿ ಬಂದು ಭಾರತೀಯ ವಾಯಪಡೆಯ ಯೋಧರ ಕೈ ಬಲಪಡಿಸಲಿ ಅನ್ನೋದಷ್ಟೆ ಹಾರೈಕೆ.

-masthmagaa.com

Contact Us for Advertisement

Leave a Reply