ಪರಿಹಾರ ಪಡೆಯೋಕೆ ಸಂತ್ರಸ್ಥರೇ ಮುಂದೆ ಬರುತ್ತಿಲ್ವಾ..?

ಪರಿಹಾರ ಪಡೆಯಲು ಸಂತ್ರಸ್ಥರೇ ಮುಂದೆ ಬರುತ್ತಿಲ್ಲ ಅಂತ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಪರಿಹಾರ ವಿತರಣೆಯಾಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಾರು 80 ಸಾವಿರ ಮನೆಗಳು ಹಾನಿಯಾಗಿವೆ. ಈಗಾಗಲೇ ನಾವು 50 ಸಾವಿರ ರೂಪಾಯಿ ಬಿಡುಗಡೆ ಮಾಡುತ್ತಿದ್ದೇವೆ. ಆದ್ರೆ ಸಂತ್ರಸ್ತರೇ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. ದಾಖಲೆಗಳನ್ನು ನೀಡುತ್ತಿಲ್ಲ. ಅರ್ಜಿ ಸಲ್ಲಿಸಿದ್ರೆ ಪರಿಹಾರ ಹಣ ನೀಡುತ್ತೇವೆ. ನಮ್ಮ ಸರ್ಕಾರ ಎಲ್ಲೂ ಫೇಲ್ ಆಗಿಲ್ಲ ಅಂದ್ರು. ಇನ್ನು ಕೇಂದ್ರ ಸರ್ಕಾರ ಸದ್ಯ ಮಧ್ಯಂತರ ಪರಿಹಾರ ನೀಡಿದ್ದು, ಇನ್ನೂ ಪರಿಹಾರ ನೀಡುತ್ತೆ. ಈಗ ಬಿಡುಗಡೆ ಮಾಡಿರೋದು ಮಧ್ಯಂತರ ಪರಿಹಾರ ಅಂತ ಕೇಂದ್ರ ಸ್ಪಷ್ಟವಾಗಿ ಹೇಳಿದೆ ಅಂತ ಮಾಹಿತಿ ನೀಡಿದ್ರು.

ಇನ್ನು ಸಿಎಂ ಯಡಿಯೂರಪ್ಪ ಮಾತನಾಡಿ, ಕೇಂದ್ರದಿಂದ ಪರಿಹಾರ ಕೊಟ್ಟಿಲ್ಲ, ಕೇಂದ್ರದಿಂದ ಪರಿಹಾರ ಕೊಟ್ಟಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿ ಅವರ ಬಾಯಿಗೆ ಬೀಗ ಹಾಕಿದೆ ಅಂದ್ರು.

Contact Us for Advertisement

Leave a Reply