ಲೋಕಸಮರದ ವೇಳೆ 30 ಕೋಟಿಗೆ ಸೆಕ್ಸ್ ವಿಡಿಯೋ ಮಾರಾಟಕ್ಕೆ ಯತ್ನ..!

ಮಧ್ಯಪ್ರದೇಶ ಹನಿಟ್ರ್ಯಾಪ್ ಕೇಸ್‍ನಲ್ಲಿ ಹೊಸ ಶಾಕಿಂಗ್ ವಿಚಾರ ಬಹಿರಂಗಗೊಂಡಿದೆ. ಈ ಹನಿಟ್ರ್ಯಾಪ್ ಗುಂಪು ಕೇವಲ ರಾಜಕಾರಣಿಗಳನ್ನು ಬ್ಲಾಕ್ ಮೇಲ್ ಮಾಡಲು ಈ ವಿಡಿಯೋಗಳನ್ನು ಮಾಡಿರಲಿಲ್ಲ. ಬದಲಾಗಿ ಲೋಕಸಭೆ ಚುನಾವಣೆ ಸಮಯದಲ್ಲಿ ಈ ವಿಡಿಯೋಗಳನ್ನು ಬಾಯಿಗೆ ಬಂದ ರೇಟ್‍ಗೆ ವಿಪಕ್ಷಗಳಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ. ರಾಜಕಾರಣಿಗಳ ಅಶ್ಲೀಲ ವಿಡಿಯೋ ಮಾಡಿದ್ರೆ ಅವರ ವಿರೋಧಿಗಳು ಆ ವಿಡಿಯೋಗೆ ಎಷ್ಟು ಬೇಕಾದ್ರೂ ದುಡ್ಡು ಕೊಡ್ತಾರೆ ಅನ್ನೋದು ಈ ಗುಂಪಿಗೆ ಗೊತ್ತಿತ್ತು. ಹೀಗೆ ವಿಡಿಯೋ ಮಾಡಿಕೊಂಡಿದ್ದ ಈ ಗುಂಪು ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ನಾಯಕರೊಂದಿಗೆ ಮಾತುಕತೆ ನಡೆಸಿತ್ತಾದರೂ ದುಡ್ಡಿನ ವಿಚಾರದಲ್ಲಿ ವ್ಯಾಪಾರ ಫೇಲ್ ಆಯ್ತು. ಈಗ ಸಿಕ್ಕಿಬಿದ್ದಿರೋ ಮಹಿಳೆಯರಲ್ಲಿ ಇಬ್ಬರು ರಾಜಕಾರಣಿಗಳ ವಿಡಿಯೋವನ್ನು 30 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಈ ಮಹಿಳೆಯರು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯ ಹಲವು ನಾಯಕರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.

Contact Us for Advertisement

Leave a Reply