ಹನಿಟ್ರ್ಯಾಪ್ ಕೇಸ್..! 40 ಕಾಲ್ ಗಲ್ರ್ಸ್..ಬಾಲಿವುಡ್ ನಟಿಯರ ಹೆಸರು..!

ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದ ಹನಿಟ್ರ್ಯಾಪ್ ಕೇಸ್ ಬಗೆದಷ್ಟೂ ಆಳಕ್ಕೆ ಬಾಯಿ ತೆರೆದುಕೊಳ್ತಿದೆ. ಎಸ್‍ಐಟಿ ತಂಡ ಗ್ಯಾಂಗ್ ಒಂದನ್ನು ಹಿಡಿಯೋದರ ಮೂಲಕ ಆರಂಭವಾದ ತನಿಖೆಗೆ ಮುಗಿಯೋ ಲಕ್ಷಣವೇ ಕಾಣುತ್ತಿಲ್ಲ. ಯಾಕಂದ್ರೆ ಬಂಧಿತರು ಒಂದೊಂದೇ ರಹಸ್ಯವನ್ನು ತೆರೆದಿಡುತ್ತಲೇ ಇದ್ದಾರೆ. ಮಧ್ಯಪ್ರದೇಶದ ಮಾಜಿ ಮಂತ್ರಿಗಳ ಹೆಸರೂ ಕೇಳಿಬಂದಿದೆ. ಅದಲ್ಲದೆ ಇದರಲ್ಲಿ 40ಕ್ಕೂ ಹೆಚ್ಚು ಕಾಲ್ ಗಲ್ರ್ಸ್ ಗಳಿದ್ದರು ಅನ್ನೋದು ಬಯಲಾಗಿದೆ. ಇನ್ನೂ ಶಾಕಿಂಗ್ ವಿಚಾರ ಅಂದ್ರೆ ಬಾಲಿವುಡ್ ನಟಿಯರ ಹೆಸರೂ ಕೂಡ ತಳುಕು ಹಾಕಿಕೊಂಡಿದೆ. ಇವರಲ್ಲಿ ಒಂದು ತಂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಬುಟ್ಟಿಗೆ ಬೀಳಿಸಿದ್ರೆ, ಇನ್ನೊಂದು ತಂಡ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿ, ಸುಲಿಗೆ ಮಾಡುತ್ತಿತ್ತು. ಅಲ್ಲದೆ ಇವರ ಈ ದಂಧೆಯಲ್ಲಿ ಕಾಲೇಜು ಯುವತಿಯರನ್ನೂ ಬಳಸಿಕೊಳ್ಳಲಾಗಿದೆ. ಒಳ್ಳೆಯ ಕಾಲೇಜಿನಲ್ಲಿ ಸೀಟ್ ಕೊಡಿಸೋದಾಗಿ ಆಮಿಷವೊಡ್ಡಿ ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸುತ್ತಿದ್ದರು. ನಂತರ ಅವರನ್ನು ಬಳಸಿಕೊಂಡು ರಾಜಕಾರಣಿಗಳನ್ನು ಖೆಡ್ಡಾಗೆ ಬೀಳಿಸಿ, ಸುಲಿಗೆಗೆ ಇಳಿಯುತ್ತಿದ್ದರು ಅನ್ನೋದು ವಿಚಾರಣೆ ವೇಳೆ ಬಯಲಾಗಿದೆ.

Contact Us for Advertisement

Leave a Reply