ಥೈಲ್ಯಾಂಡ್ ನಲ್ಲಿ ಟೆಕ್ಕಿ ಸಾವು..ಮೃತದೇಹ ತರಲು ಕೇಂದ್ರದ ಸಹಕಾರ

ಮಧ್ಯಪ್ರದೇಶದ ಟೆಕ್ಕಿಯೊಬ್ಬರು ಥೈಲ್ಯಾಂಡ್‍ನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಇನ್ನೂ ಆಸ್ಪತ್ರೆಯಲ್ಲೇ ಇದ್ದು, ಸಂಬಂಧಿಕರಿಗೆ ಹಸ್ತಾಂತರ ಮಾಡಲು ಕಾಯಲಾಗುತ್ತಿದೆ. ಆದ್ರೆ ಆಕೆಯ ಕುಟುಂಬಸ್ಥರಲ್ಲಿ ಯಾರ ಬಳಿಯೂ ಪಾಸ್‍ಪೋರ್ಟ್ ಇಲ್ಲ. ಹೀಗಾಗಿ ಆಕೆಯ ಮೃತದೇಹ ಭಾರತಕ್ಕೆ ತರಲು ಎಲ್ಲಾ ರೀತಿಯ ಸಹಕಾರ ನೀಡೋದಾಗಿ ವಿದೇಶಾಂಗ ಇಲಾಖೆ ಮತ್ತು ರಾಜ್ಯ ಸರ್ಕಾರ ತಿಳಿಸಿದೆ. ಪ್ರಗ್ಯಾ ಪಲಿವಲ್ ಎಂಬ 29 ವರ್ಷದ ಟೆಕ್ಕಿ, ಹಾಂಗ್‍ಕಾಂಗ್ ಮೂಲದ ಸಂಸ್ಥೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದರು. ಆದ್ರೆ ಬೆಂಗಳೂರಿನಲ್ಲಿರುವ ಆಕೆಯ ಸ್ನೇಹಿತೆ ಬುಧವಾರ ಪ್ರಗ್ಯಾ ಕುಟುಂಬಕ್ಕೆ ಕರೆ ಮಾಡಿ ಸಾವಿನ ವಿಷಯ ತಿಳಿಸಿದ್ದಾರೆ.

ಪ್ರಗ್ಯಾ ಕುಟುಂಬ ಮಹಾರಾಷ್ಟ್ರದ ಛತ್ತರ್ ಪುರ ಜಿಲ್ಲೆಯಲ್ಲಿ ವಾಸವಾಗಿದ್ದು, ಸ್ಥಳೀಯ ಶಾಸಕ ಅಲೋಕ್ ಚತುರ್ವೇದಿ ಗಮನಕ್ಕೆ ತಂದಿದ್ದಾರೆ. ಅವರು ಸಿಎಂ ಕಮಲ್ ನಾಥ್ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್, ಪ್ರಗ್ಯಾ ಪಲಿವಲ್ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡೋದಾಗಿ ಟ್ವೀಟ್ ಮಾಡಿದ್ದಾರೆ.

Contact Us for Advertisement

Leave a Reply