ಮಧ್ಯ ಪ್ರದೇಶದ ಹುಡುಗನಿಗೆ ಮೈಯೆಲ್ಲಾ ಕೂದಲು! ಏನಿದು ಖಾಯಿಲೆ!

masthmagaa.com:

ವೆರ್‌ವೂಲ್ಫ್‌ ಸಿಂಡ್ರೋಮ್ ಅನ್ನೋ ಅಪರೂಪದ ಖಾಯಿಲೆ ಮಧ್ಯ ಪ್ರದೇಶದ ಹುಡುಗನೊಬ್ಬನಲ್ಲಿ ಕಾಣಿಸಿಕೊಂಡಿದೆ. ಈ ಖಾಯಿಲೆ ಇದ್ದವ್ರ ಮೈಮೇಲೆ ಜಾಸ್ತಿ ಕೂದಲುಗಳು ಬೆಳೆಯುತ್ತೆ. 17 ವರ್ಷದ ಲಲಿತ್‌ ಪಟಿದಾರ್‌ ಈ ರೇರ್‌ ಖಾಯಿಲೆಯಿಂದ ಬಳಲ್ತಾ ಇರೋ ಹುಡುಗ. ಹೈಪರ್ಟ್ರಿಕೋಸಿಸ್ ಎಂದೂ ಕರೆಯಲಾಗುವ ಈ ಖಾಯಿಲೆ ಲಲಿತ್‌ 6 ವರ್ಷದ ಮಗು ಇದ್ದಾಗಲೇ ಪತ್ತೆಯಾಗಿದೆ. ಶಾಲೆಯಲ್ಲಿ ಎಲ್ರೂ ಮಂಕಿ ಮ್ಯಾನ್‌ ಅಂತ ಕರೆದು ರೇಗಿಸ್ತಾರೆ ಅಂತ ಹುಡುಗ ಹೇಳಿದ್ದಾನೆ. ಈ ಖಾಯಿಲೆಗೆ ಯಾವುದೇ ಶಾಶ್ವತ ಪರಿಹಾರ ಇರದ ಕಾರಣ ಜೀವನ ಪೂರ್ತಿ ತಾನು ಹೀಗೆ ಇರ್ಬೇಕು ಅಂತ ಲಲಿತ್‌ ತನ್ನ ನೋವನ್ನ ಹೇಳಿಕೊಂಡಿದ್ದಾನೆ. ಅಂದ್ಹಾಗೆ ಈ ರೇರ್‌ ಡಿಸೀಸ್‌ ಮಧ್ಯ ವಯಸ್ಸಿನ 50 ಜನ್ರಲ್ಲಿ ಒಬ್ರಿಗೆ ಬರುತ್ತೆ ಅಂತ ವೈದ್ಯರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply