ಮಹಾರಾಷ್ಟ್ರ ಚುನಾವಣೆಗೆ ಮತ್ತೆ ‘ರಫೇಲ್‘​​ ಏರಿದ ರಾಹುಲ್ ಗಾಂಧಿ..!

ಲೋಕಸಭೆ ಚುನಾಣೆಯಲ್ಲಿ ವಿಪಕ್ಷಗಳ ವಿರುದ್ಧ ರಫೇಲ್ ಅಸ್ತ್ರ ಬಳಸಿದ್ದ ರಾಹುಲ್ ಗಾಂಧಿ ಈಗ ಪುನಃ ರಫೇಲ್ ಮೊರೆ ಹೋಗಿದ್ದಾರೆ. ಮಹಾರಾಷ್ಟ್ರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾ
ಡಿದ ಅವರು, ರಫೇಲ್ ಡೀಲ್​ನಲ್ಲಿ ಕಳ್ಳತನ, ಲೂಟಿ ನಡೆದಿದೆ ಅನ್ನೋದು ಇಡೀ ದೇಶಕ್ಕೆ ಗೊತ್ತಿದೆ. ಪ್ರಧಾನ ಮಂತ್ರಿ ರಫೇಲ್ ವಿಮಾನದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದರು. ಪ್ರಧಾನಿ ಮೋದಿಯಾಗಲಿ, ಅಮಿತ್ ಶಾ ಆಗಲಿ ಸತ್ಯದಿಂದ ದೂರ ಓಡಿಹೋಗಲು ಸಾಧ್ಯವಿಲ್ಲ ಅಂದ್ರು.

ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, ಯುದ್ಧ ವಿಮಾನ ಸ್ವೀಕರಿಸಲು ದೇಶದ ರಕ್ಷಣಾ ಸಚಿವರು ಫ್ರಾನ್ಸ್ ಹೋಗಿದ್ದರು. ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ಆದ್ರೆ ರಫೇಲ್ ಡೀಲ್​​ನಲ್ಲಿ ಲೂಟಿ ನಡೆದಿದ್ದಕ್ಕೆ ಬಿಜೆಪಿ ನಾಯಕರಿಗೆ ಒಂದು ರೀತಿಯ ಗಿಲ್ಟ್​ ಕಾಡುತ್ತಿದೆ. ಹೀಗಾಗಿಯೇ ಅವರು ಫ್ರಾನ್ಸ್​​ಗೆ ಹೋಗಿ ರಫೇಲ್ ವಿಮಾನ ಸ್ವೀಕರಿಸಿದ್ರು ಅಂತ ಹೇಳಿದ್ದಾರೆ.

Contact Us for Advertisement

Leave a Reply