ಆದಿತ್ಯ ಠಾಕ್ರೆ ಡಿಸಿಎಂ ಆಗ್ಲಿ..ನಂಗೇನೂ ತೊಂದ್ರೆ ಇಲ್ಲ: ದೇವೇಂದ್ರ ಫಡ್ನಾವಿಸ್​​​

ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಯನ್ನು ಡಿಸಿಎಂ ಮಾಡೋಕೆ ನನಗೇನೂ ತೊಂದ್ರೆ ಇಲ್ಲ. ಆದ್ರೆ ನಾನೇ ಸಿಎಂ ಆಗಿರುತ್ತೇನೆ ಎಂದು ದೇವೇಂದ್ರ ಫಡ್ನಾವಿಸ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾನು ಈಗಲೂ ಮುಖ್ಯಮಂತ್ರಿ, ಚುನಾವಣೆಯಲ್ಲಿ ಗೆದ್ದ ಬಳಿಕವೂ ನಾನೇ ಮುಖ್ಯಮಂತ್ರಿ. ಆದಿತ್ಯ ಠಾಕ್ರೆ ಡಿಸಿಎಂ ಆಗೋದಾದ್ರೆ ಆಗ್ಲಿ. ನಂದೇನೂ ಅಭ್ಯಂತರ ಇಲ್ಲ ಎಂದಿದ್ದಾರೆ. ಅಲ್ಲದೆ ನಾನು ಕೇವಲ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಶಿವಸೇನೆಗೂ ನಾನೇ ಮುಖ್ಯಮಂತ್ರಿ ಅಭ್ಯರ್ಥಿ. ಚುನಾವಣೆಯಲ್ಲಿ ಗೆದ್ದ ಬಳಿಕ ಯಾರು ಸಿಎಂ ಆಗ್ತಾರೆ ಅನ್ನೋದರ ಬಗ್ಗೆ ಯಾರಿಗೂ ಗೊಂದಲ ಇಲ್ಲ ಎಂದಿದ್ದಾರೆ.

ಇದೇ ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, 24 ರಂದು ಫಲಿತಾಂಶ ಹೊರಬೀಳಲಿದೆ.

Contact Us for Advertisement

Leave a Reply