ಓರ್ವ ಯೋಧ ಹುತಾತ್ಮರಾದ್ರೆ 10 ಶತ್ರುಗಳು ಉಡೀಸ್..! ಶಾ ಗುಡುಗು

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಿರ್ಧಾರವನ್ನು ವಿರೋಧಿಸಿದ ಕಾಂಗ್ರೆಸ್ ಮತ್ತು ಎನ್‍ಸಿಪಿ ವಿರುದ್ದ ಅಮಿತ್ ಶಾ ಕೆಂಡಕಾರಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 370ನೇ ವಿಧಿಯನ್ನು ರದ್ದುಗೊಳಿಸಿ ಪ್ರಧಾನಿ ಮೋದಿ ಸರ್ಕಾರ ಉತ್ತಮ ಕೆಲಸವನ್ನು ಮಾಡಿದೆ. ಈ ಕ್ರಮವನ್ನು ರಾಹುಲ್ ಗಾಂಧಿ ಮತ್ತು ಶರದ್ ಯಾದವ್ ಬೆಂಬಲಿಸುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಮೋದಿಯವರ ಆಡಳಿತದಲ್ಲಿ ದೇಶದ ಭದ್ರತೆ ಹೆಚ್ಚಾಗಿದೆ. ಓರ್ವ ಯೋಧ ಹುತಾತ್ಮರಾದರೆ 10 ಮಂದಿ ಶತ್ರುಗಳ ತಲೆ ಉರುಳಿಸುತ್ತೇವೆ ಅನ್ನೋದು ಜಗತ್ತಿಗೇ ಗೊತ್ತಾಗಿದೆ ಅಂದ್ರು. ಅಲ್ಲದೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಎನ್‍ಸಿಪಿ ಸರ್ಕಾರ ಮಹಾರಾಷ್ಟ್ರಕ್ಕಾಗಿ ಏನು ಮಾಡಿದೆ ಅನ್ನೋದನ್ನ ಹೇಳಬೇಕು ಅಂದ್ರು.

Contact Us for Advertisement

Leave a Reply