ವಿಪಕ್ಷ ನಾಯಕರು ಮುಳುಗಿ ಸಾಯಿರಿ ಎಂದು ಗುಡುಗಿದ ಮೋದಿ

ಮಹಾರಾಷ್ಟ್ರ: 370ನೇ ವಿಧಿಯನ್ನು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ಸಿಗರಿಗೆ ಪ್ರಧಾನಿ ಮೋದಿ ಡಿಚ್ಚಿ ಕೊಟ್ಟಿದ್ದಾರೆ. ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡೋ ವಿಪಕ್ಷ ನಾಯಕರೇ ಮುಳುಗಿ ಸಾಯಿರಿ  ಎಂದು ಕೆಂಡ ಕಾರಿದ್ದಾರೆ.

ಬಿಜೆಪಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಜಮ್ಮು ಕಾಶ್ಮೀರ ಮತ್ತು 370ನೇ ವಿಧಿಯನ್ನು ಟಾಂ ಟಾಂ ಹೊಡೀತಿದೆ ಎಂದು ಕಾಂಗ್ರೆಸ್ ನಾಯಕರು ಮತ್ತು ಎನ್​ಸಿಪಿ ನಾಯಕ ಶರದ್ ಪವಾರ್ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ನಾಚಿಕೆಯಿಲ್ಲದ ವಿಪಕ್ಷದ ನಾಯಕರು 370ನೇ ವಿಧಿ ಮತ್ತು ಮಹಾರಾಷ್ಟ್ರಕ್ಕೆ ಏನ್ ಸಂಬಂಧ ಅಂತ ಕೇಳ್ತಾರೆ. ಜಮ್ಮು ಕಾಶ್ಮೀರಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಮಹಾರಾಷ್ಟ್ರದ ಅದೆಷ್ಟೋ ಮಕ್ಕಳ ಬಗ್ಗೆ ನಮಗೆ ಹೆಮ್ಮೆ ಇದೆ. ಆದ್ರೆ ತಮ್ಮ ಕುಟುಂಬದಲ್ಲಿ ಮುಳುಗಿರೋ ಕೆಲವು ನಾಯಕರು ರಾಜಕೀಯಕ್ಕಾಗಿ ಮಹಾರಾಷ್ಟ್ರಕ್ಕೂ ಜಮ್ಮು ಕಾಶ್ಮೀರಕ್ಕೂ ಏನು ಸಂಬಂಧ ಎಂದು ಕೇಳುತ್ತಿದ್ದಾರೆ..? ಡೂಬ್ ಮರೋ ಡೂಬ್ ಮರೋ (ಮುಳುಗಿ ಸಾಯಿರಿ ಮುಳುಗಿ ಸಾಯಿರಿ) ಎಂದು ಕೆಂಡಕಾರಿದ್ರು.

ಶಿವಾಜಿ ಮಹಾರಾಜನ ಮಣ್ಣಿನಲ್ಲಿ ರಾಜಕೀಯಕ್ಕಾಗಿ ಇಂಥಹ ಮಾತುಗಳು ಕೇಳಿ ಬರುತ್ತಿರೋದನ್ನು ನೋಡಿ ನನಗೆ ಶಾಕ್ ಆಯ್ತು. ನಾಚಿಕೆ ಬಿಟ್ಟವರು ಜಮ್ಮು ಕಾಶ್ಮೀರಕ್ಕೂ ಮಹಾರಾಷ್ಟ್ರಕ್ಕೂ ಏನ್ ಸಂಬಂಧ ಅಂತ ನೇರವಾಗಿ ಕೇಳುತ್ತಾರೆ ಅಂತ ಕೆಂಡಕಾರಿದ್ರು.

Contact Us for Advertisement

Leave a Reply