‘ಮಹಾ’ ಜನತೆ ಮುಂದೆ ಕೈ ಮುಗಿದು, ತಲೆಬಾಗಿ ನಮಸ್ಕರಿಸಿದ ಮೋದಿ..!

ಪುಣೆ: ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ತಲೆಬಾಗಿ ನಮಸ್ಕರಿಸಿದ್ದಾರೆ. ಪುಣೆಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ ಬಗ್ಗೆ ಉಲ್ಲೇಖಿಸಿದ್ರು. ಈ ವೇಳೆ ಜನರು ಜೋರಾಗಿ ಕೂಗಿದ್ರು. ಆಗ ಪ್ರಧಾನಿ ಮೋದಿ ಅರ್ಧಕ್ಕೆ ತಮ್ಮ ಭಾಷಣವನ್ನು ನಿಲ್ಲಿಸಿ, ಡಯಾಸ್ ಬಿಟ್ಟು ವೇದಿಕೆಯ ಮುಂದೆ ಬಂದು ಕೈ ಮುಗಿದು, 2 ಬಾರಿ ತಲೆಬಾಗಿ ಜನತೆಗೆ ನಮಸ್ಕರಿಸಿದ್ರು.

ಇದಕ್ಕೂ ಮುನ್ನ ಮಾತನಾಡಿದ್ದ ಅವರು, ಜಮ್ಮು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದಿಂದ ಏಕತೆಯನ್ನು ಭಾವನೆಯನ್ನು ದೇಶದ ಜನ ಅನುಭವಿಸುತ್ತಿದ್ದಾರೆ. 370ನೇ ವಿಧಿ 70 ವರ್ಷಗಳ ಕಾಲ ಒಂದು ದೇಶ ಒಂದೇ ಸಂವಿಧಾನ ಎಂಬ ಹಾದಿಗೆ ಅಡಚಣೆಯಾಗಿತ್ತು ಅಂತ ಹೇಳಿದ್ರು.

Contact Us for Advertisement

Leave a Reply