ಬಿಜೆಪಿಗೆ ಓಟ್ ಹಾಕಿದ್ರೆ ಪಾಕ್ ಮೇಲೆ ಅಣುಬಾಂಬ್ ಹಾಕಿದಂತೆ: ಕೇಶವ್ ಪ್ರಸಾದ್ ಮೌರ್ಯ

ಬಿಜೆಪಿಗೆ ಓಟ್ ಹಾಕೋದು ಒಂದೆ, ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕೋದು ಒಂದೆ ಅಂತ ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಮೀರಾ ಭಯಂಡರ್ ಕ್ಷೇತ್ರದ ಅಭ್ಯರ್ಥಿ ಕ್ಷೇತ್ರದ ಅಭ್ಯರ್ಥಿ ನರೇಂದ್ರ ಮೆಹ್ತಾ ಪರ ಪ್ರಚಾರದಲ್ಲಿ ಕೇಶವ್ ಪ್ರಸಾದ್ ಮೌರ್ಯ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಜನ ಬಿಜೆಪಿಯ ಸಿಂಬಲ್ ಒತ್ತಿದ್ರು ಅಂದ್ರೆ ಅದರ ಅರ್ಥ ಪಾಕಿಸ್ತಾನದ ಮೇಲೆ ಸ್ವಯಂಚಾಲಿತವಾಗಿ ಅಣುಬಾಂಬ್ ಹಾಕಿದಂತೆ. ದಯವಿಟ್ಟು ಬಿಜೆಪಿಗೆ ಮತ ಹಾಕಿ, ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಮಾಡಿ. ಮುಂಬರುವ ಚುನಾವಣೆಗಳಲ್ಲಿ ಕಮಲ ಅರಳುತ್ತೆ ಅನ್ನೋ ನಂಬಿಕೆ ನನಗಿದೆ ಅಂದ್ರು.

ಅಲ್ಲದೆ ಹಸ್ತ, ಸೈಕಲ್ ಮತ್ತು ಗಡಿಯಾರದ ಮೇಲೆ ಮಹಾಲಕ್ಷ್ಮೀ ಕೂರುವುದಿಲ್ಲ. ಮಹಾಲಕ್ಷ್ಮೀ ಕೂರೋದು ಕಮಲದ ಮೇಲೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದು ಇದೇ ಕಮಲ. ಕಮಲ ಅನ್ನೋದು ಅಭಿವೃದ್ಧಿಯ ಸಂಕೇತ ಅಂದ್ರು. ಇದೇ ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಹೊರಬೀಳಲಿದೆ.

 

Contact Us for Advertisement

Leave a Reply