ಮಹಾ ಹೈಡ್ರಾಮ ಅಂತ್ಯ: ಉದ್ದವ್‌ ಠಾಕ್ರೆ ಸರ್ಕಾರ ಪತನ..ಹೊಸ ಸಿಎಂ ಆಗಿ ಏಕನಾಥ್‌ ಶಿಂಧೆ!

masthmagaa.com:

ಮಹಾರಾಷ್ಟ್ರದಲ್ಲಿ ನಡಿತೀದ್ದ ಮಹಾಅಘಾಡಿ ಸರ್ಕಾರದ ಬೀದಿ ನಾಟಕ ಕೊನೆಗೂ ಉದ್ದವ್‌ ಠಾಕ್ರೆ ರಾಜೀನಾಮೆ ಕೊಟ್ಟು, ಏಕನಾಥ್‌ ಶಿಂಧೆ ಸಿಎಂ ಆಗುವ ಮೂಲಕ ರಣರೋಚಕ ಅಂತ್ಯ ಕಂಡಿದೆ. ಅಂದುಕೊಂಡಂತೆ ಬಿಜೆಪಿ ಹಾಗೂ ಶಿಂಧೆ ಬಣ ಸೇರಿ ಹೊಸ ಸರ್ಕಾರ ರಚನೆಯಾಗಲಿದೆ. ಆದ್ರೆ ಇಲ್ಲೂ ಸಸ್ಪೆನ್ಸ್‌ ನೀಡಿರೋ ಬಿಜೆಪಿ ಈ ಬಾರಿ ನಾವೇ ಅವರಿಗೆ ಬೆಂಬಲ ಕೊಟ್ಟೀದ್ದೀವಿ ಅಂತ ಹೇಳಿ ಸಿಎಂ ಸ್ಥಾನವನ್ನ ಶಿವಸೇನೆಯ ರೆಬೆಲ್ ಗೆ ಬಿಟ್ಟುಕೊಟ್ಟಿದ್ದಾರೆ ಅಂತ ಹೇಳಲಾಗಿದೆ. ಮಹಾರಾಷ್ಟ್ರದ ರಾಜಭವನದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರದ ಭಾಗವಾಗಿ ಏಕನಾಥ್‌ ಶಿಂಧೆ ಇಂದು ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಇನ್ನು ಇದಕ್ಕೂ ಮುಂಚೆ ಏಕನಾಥ್‌ ಶಿಂಧೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ರು. ಬಳಿಕ ಮಹಾರಾಷ್ಟ್ರ ರಾಜ್ಯಪಾಲರನ್ನ ಭೇಟಿಯಾಗಿದ್ರು. ಈ ಬಗ್ಗೆ ಮಾತನಾಡಿದ್ದ ಅವ್ರು ಬಿಜೆಪಿ 120 ಶಾಸಕರನ್ನ ಹೊಂದಿದ್ರೂ ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೇರಲಿಲ್ಲ.ಉದಾರತೆ ತೋರಿ ಬಾಳಾಸಾಹೇಬರ ಪಕ್ಷದ ಕಾರ್ಯಕರ್ತನನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ನಾನು ಫಡ್ನವೀಸ್‌ ಸೇರಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಭಾವಿ ಸಿಎಂ ಶಿಂಧೆ ಹೇಳಿದ್ದಾರೆ. ಜೊತೆಗೆ ಶಿವಸೇನೆಯ 40 ಶಾಸಕರು ಸೇರಿದಂತೆ ಒಟ್ಟು 50 ಶಾಸಕರು ನಮ್ಮೊಂದಿಗಿದ್ದಾರೆ. ಅವರ ನೆರವಿನಿಂದ ನಾವು ಈ ಹೋರಾಟವನ್ನ ಇಲ್ಲಿಯವರೆಗೆ ನಡೆಸಿದ್ದೇವೆ. ಈ 50 ಜನರು ನನ್ನ ಮೇಲೆ ಇಟ್ಟಿರೋ ನಂಬಿಕೆಯನ್ನು ಒಂದು ಎಳ್ಳಷ್ಟೂ ಕಡಿಮೆಯಾಗೋಕೆ ನಾನು ಬಿಡಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಾಜಿ ಸಿಎಂ ಫಡ್ನವೀಸ್, ಸರ್ಕಾರ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಇದು ಹಿಂದುತ್ವದ ಹೋರಾಟವೇ ಹೊರತು ಅಧಿಕಾರದ ಹೋರಾಟ ಅಲ್ಲ..ಉದ್ದವ್‌ ಅಧಿಕಾರ ಸಿಕ್ಕಿದ್ಮೇಲೆ ತಮ್ಮ ಸಿದ್ದಾಂತಗಳನ್ನೇ ಚೇಂಜ್‌ ಮಾಡಿದ್ರು. ಹೀಗಾಗಿ ಹೊಸ ಸರ್ಕಾರಕ್ಕೆ ಬೆಂಬಲ ಕೊಡೋದು ನಮ್ಮ ಕರ್ತವ್ಯ ಅಂತ ಮತ್ತೆ ಉದ್ದವ್‌ ಠಾಕ್ರೆಗೆ ಹಿಂದುತ್ವದ ಚಾಟಿ ಬೀಸಿದ್ದಾರೆ. ಹಾಗೂ ನಾನು ಹೊಸದಾಗಿ ರಚನೆಯಾಗೋ ಕ್ಯಾಬಿನೆಟ್‌ನ ಭಾಗವಾಗಲ್ಲ ಅಂತಲೂ ಅನೌನ್ಸ್‌ ಮಾಡಿದ್ದಾರೆ. ಇತ್ತ ಸಿಎಂ ಕುರ್ಚಿ ಪಕ್ಕಾ ಆಗ್ತಿದ್ದಂತೆ ಶಿಂಧೆ ಬೆಂಬಲಿಗರು ಅವ್ರ ನಿವಾಸದ ಎದುರು ಸಂಭ್ರಮಾಚರಣೆ ನಡೆಸಿದ್ದಾರೆ. ಇತ್ತ ಫಡ್ನವೀಸ್‌ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಈ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದು ಇಂದು ಫಡ್ನವೀಸ್‌ ಅವ್ರ ಸಿಎಂ ಆಗಿ ಪ್ರತಿಜ್ಞೆ ಸ್ವೀಕರಿಸ್ತಾರೆ ಅಂತ ಅನ್ಕೊಂಡಿದ್ವಿ. ಆದ್ರೆ ಇದ್ರಿಂದ ನಮಗೆ ತುಂಬಾ ದುಃಖವಾಗಿದೆ. ಆದ್ರೂ ಈ ನಿರ್ಧಾರವನ್ನ ಪಕ್ಷದ ಒಳಿತು ಅಂತ ಯೋಚಿಸಿ ಸ್ವಾಗತ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಮೂಲಕ ಯಾರೂ ಊಹಿಸದ ರೀತಿಯಲ್ಲಿ ಕೊನೆಗೂ ಉದ್ದವ್‌ ಸರ್ಕಾರವನ್ನ ಮನೆಗೆ ಕಳಿಸೋದ್ರಲ್ಲಿ ಶಿಂಧೆ ಬಣ ಭರ್ಜರಿ ಯಶಸ್ಸು ಕಂಡಿದೆ. ಇನ್ನು ಸರ್ಕಾರ ಉಳಿಸೋಕೆ ಕಳೆದ ಕೆಲದಿನಗಳಿಂದ ಭಾರಿ ಹೋರಾಟ ಮಾಡ್ತಿದ್ದ ಉದ್ದವ್‌ ನಿನ್ನೆಯೂ ಸಭೆ ಮೇಲೆ ಸಭೆ ನಡೆಸಿ ಹಲವಾರು ಸರ್ಕಸ್‌ಗಳನ್ನ ಮಾಡಿದ್ರು. ಜೊತೆಗೆ ಸದನದಲ್ಲಿ ಉದ್ದವ್‌ ಸರ್ಕಾರ ಬಹುಮತ ಸಾಬೀತು ಮಾಡ್ಬೇಕು ಅಂತ ಅಲ್ಲಿನ ರಾಜ್ಯಪಾಲರು ಹೇಳಿದ್ರ ವಿರುದ್ದ ಸುಪ್ರೀಂ ಕೋರ್ಟ್‌ಗೆಲ್ಲಾ ಹೋಗಿ ಕೇಸ್‌ ಮಾಡಿದ್ರು. ಆದ್ರೆ ರಾಜ್ಯಪಾಲರ ಹೇಳಿಕೆಯನ್ನ ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್‌ ಇದೆಲ್ಲಾ ಸದನದಲ್ಲೇ ಇತ್ಯರ್ಥ್ಯ ಆಗ್ಬೇಕು ಹೇಳಿತ್ತು.ಹಾಗಾಗಿ ಯುದ್ದಕ್ಕೂ ಮುನ್ನವೇ ಶಸ್ತ್ರಾತ್ಯಾಗ ಮಾಡಿ ಉದ್ದವ್ ರಾಜೀನಾಮೆ ಕೊಟ್ಟಿದ್ರು. ಈ ವೇಳೆ ಮಾತನಾಡಿದ್ದ ಉದ್ದವ್‌ ನನ್ನವರೇ ನನಗೆ ಮೋಸ ಮಾಡಿದ್ರು. ಆದ್ರೂ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ತಲೆ ಬಾಗ್ತಿವಿ ಅಂತ ಹೇಳಿದ್ರು..

-masthmagaa.com

Contact Us for Advertisement

Leave a Reply