masthmagaa.com:

ಕೊರೋನಾದ ಎರಡನೇ ಅಲೆ ಏಳುತ್ತಿರೋ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 39,726 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಒಂದೇ ದಿನ ಇಷ್ಟು ಜನರಿಗೆ ಸೋಂಕು ತಗುಲಿರೋದು ನವೆಂಬರ್ 28ರ ಬಳಿಕ ಇದೇ ಮೊದಲು. ಉಳಿದಂತೆ ಕಳೆದ 24 ಗಂಟೆಯಲ್ಲಿ 154 ಸೋಂಕಿತರು ಮೃತಪಟ್ಟಿದ್ದಾರೆ. 20,654 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾದ ಒಂದನೇ ಅಲೆಗಿಂತ ಎರಡನೇ ಅಲೆಯೇ ಅಪಾಯಕಾರಿ ಎನ್ನುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಮಹಾರಾಷ್ಟ್ರದಲ್ಲಿ ನಿನ್ನೆ 25,833 ಜನರಿಗೆ ಸೋಂಕು ದೃಢಪಟ್ಟಿದೆ. ಕಳೆದ ವರ್ಷದ ಮಾರ್ಚ್​ನಲ್ಲಿ ಮೊದಲ ಕೇಸ್​ ವರದಿಯಾಯ್ತಲಾ ಅಲ್ಲಿಂದ ಹಿಡಿದು ಇಲ್ಲಿವರೆಗೆ ದೃಢಪಟ್ಟ ಅತಿ ಹೆಚ್ಚು ಕೇಸ್ ಇದು. ಭಾರತದಲ್ಲಿ ಒಂದೇ ದಿನ ಅತಿ ಹೆಚ್ಚು ಜನರಿಗೆ ಸೋಂಕು ತಗುಲಿದ ರಾಜ್ಯ ಅಂದ್ರೆ ಅದು ಮಹಾರಾಷ್ಟ್ರ.

ಭಾರತದ ಕೊರೋನಾ ನಂಬರ್ಸ್:

ಒಟ್ಟು ಪ್ರಕರಣ: 1.15 ಕೋಟಿ

ಒಟ್ಟು ಗುಣಮುಖ: 1.10 ಕೋಟಿ

ಒಟ್ಟು ಸಾವು: 1,59,370

ಸಕ್ರಿಯ ಪ್ರಕರಣ: 2.71 ಲಕ್ಷ

ಲಸಿಕೆ ಪಡೆದವರು: 3.93 ಕೋಟಿ

-masthmagaa.com

Contact Us for Advertisement

Leave a Reply